ಗಂಗಾವತಿ :
ಇಲ್ಲಿನ ಜಯನಗರದ 2ನೇ ಹಂತದಲ್ಲಿರುವ ಚನ್ನಬಸವ ಚಾರಿಟೇಬಲ್ ಟ್ರಸ್ಟ್ ಪ್ರತಿಷ್ಠಾನದ ರಾವಬಹಾದ್ದೂರ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ ಲಿಂಗವಂತ ಬಡ ವಿದ್ಯಾರ್ಥಿನಿಯರ ಉಚಿತ ವಸತಿ ಮತ್ತು ಪ್ರಸಾದ ನಿಲಯ ಪ್ರವೇಶಕ್ಕೆ ಪ್ರಸಕ್ತ 2026-27ನೇ ಸಾಲಿಗೆ ಆಸಕ್ತ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಸುಕನ್ಯಾ ಸಿಂಗನಾಳ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿ, ಲಿಂಗಾಯತ ಒಳ ಪಂಗಡದ ಎಲ್ಲಾ ಸಮುದಾಯದ ವಿದ್ಯಾರ್ಥಿನಿಯರಿಗೆ ಮಾತ್ರ ವಸತಿ ನಿಲಯಕ್ಕೆ ಉಚಿತವಾಗಿ ಪ್ರವೇಶ ನೀಡಲಾಗುವುದು.
ಉಚಿತ ಪ್ರವೇಶ ಪಡೆಯುವ ಮಕ್ಕಳಿಗೆ ಉಚಿತ ಊಟ-ಉಪಹಾರ, ಕಂಪ್ಯೂಟರ್ ಶಿಕ್ಷಣ, ಗ್ರಂಥಾಲಯ ಮತ್ತು ವಸತಿ ವ್ಯವಸ್ಥೆ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲಾಗುವುದು.
ವಿದ್ಯಾರ್ಥಿನಿಯರು, ಪಿಯುಸಿ, ಬಿಎ, ಬಿಕಾಂ, ಬಿಎಸ್ಸಿ, ಡಿಎಡ್, ಬಿಎಡ್, ಬಿ.ಇ. ಎಂ.ಎ, ಎಂಕಾಂ, ಎಂಎಸ್ಸಿ, ನರ್ಸಿಂಗ್, ಪ್ಯಾರಾಮೆಡಿಕಲ್, ಐಟಿಐ ಸೇರಿದಂತೆ ಗಂಗಾವತಿ ನಗರದ ಯಾವುದೇ ಕಾಲೇಜಿನಲ್ಲಿ, ಯಾವುದೇ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳು ಅರ್ಜಿ ಸಲ್ಲಿಸಬಹುದು.
ಲಿಂಗಾಯತ ವೀರಶೈವ ಸಮುದಾಯದ ಒಳಪಂಗಡಕ್ಕೆ ಸೇರಿದ ಕುಂಬಾರ, ಮಡಿವಾಳ, ಹಡಪದ, ಗಾಣಿಗ, ನೇಕಾರ, ರೆಡ್ಡಿ, ಒಕ್ಕಲಿಗ, ಅಂಬಿಗ, ಪಂಚಮಸಾಲಿ, ಬಣಜಿಗ, ಹೂಗಾರ, ಸಮಗಾರ ಸೇರಿದಂತೆ ಇತರ ಒಳಪಂಗಡಕ್ಕೆ ಸೇರಿದ ಯಾವುದೇ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.
ಅರ್ಜಿಗಳನ್ನು ಜಯನಗರದ 2ನೇ ಮುಖ್ಯ ಹಂತದಲ್ಲಿರುವ ವಸತಿ ನಿಲಯದಲ್ಲಿ ವಿತರಿಸಲಾಗುತ್ತಿದ್ದು, ಆಸಕ್ತರು ಅರ್ಜಿಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ
9448649522ನ್ನು ಸಂಪರ್ಕಿಸಬಹುದು ಎಂದು ಸುಕನ್ಯಾ ಸಿಂಗನಾಳ ತಿಳಿಸಿದ್ದಾರೆ.
