ಹಾವೇರಿಯಲ್ಲಿ ‘ಅರಿವಿನ ಮನೆ’ಯ ಬಸವತತ್ವದ ಗುರುಪ್ರವೇಶ

ಬಸವ ಮೀಡಿಯಾ
ಬಸವ ಮೀಡಿಯಾ

ಹಾವೇರಿ :

ಬಸವ ಬಳಗದ ಸದಸ್ಯರಾದ ಮಾಲತೇಶ ಕರೆಮಣ್ಣವರ ಅವರು ಚನ್ನಬಸವೇಶ್ವರ ನಗರದಲ್ಲಿ ನೂತನವಾಗಿ ಕಟ್ಟಿಸಿರುವ ”ಅರಿವಿನ ಮನೆ”ಯ ಗುರುಪ್ರವೇಶವು ಬಸವತತ್ವ ಸಂಸ್ಕಾರದಂತೆ ನಡೆಯಿತು.

ಪೂಜ್ಯ ನಿಜಗುಣಾನಂದ ಸ್ವಾಮೀಜಿ, ನಿಷ್ಕಲ ಮಂಟಪ, ಬೈಲೂರ ಅವರು ಸಾಮೂಹಿಕ ಇಷ್ಟಲಿಂಗ ನಿರೀಕ್ಷಣೆ, ಬಸವಗುರು ಪೂಜೆ ನಡೆಸಿಕೊಟ್ಟರು. ಕುಟುಂಬ ಸದಸ್ಯರೆಲ್ಲ ಪಾಲ್ಗೊಂಡಿದ್ದರು.

ನಂತರ ವೇದಿಕೆ ಕಾರ್ಯಕ್ರಮ ಜರುಗಿತು. ಸಾನಿಧ್ಯ ವಹಿಸಿದ್ದ ಪೂಜ್ಯ ನಿಜಗುಣಾನಂದ ಸ್ವಾಮೀಜಿ ಅನುಭಾವ ನೀಡುತ್ತಾ, ಬಸವಾದಿ ಶರಣರ ಆಶಯದಂತೆ ಮೌಢ್ಯವನ್ನು ನಿರಾಕರಿಸಿ ಸರಳವಾದ ಗೃಹ ಪ್ರವೇಶವನ್ನು ಏರ್ಪಡಿಸಿದ್ದು ಬಸವಣ್ಣನವರಿಗೆ, ಶರಣರ ತತ್ವಕ್ಕೆ ಕರೆಮಣ್ಣವರ ಕುಟುಂಬದವರು ತೋರಿದ ಗೌರವವಾಗಿದೆ.

ಮನೆ ಕಟ್ಟಿದ ನಂತರ ಮನೆಗೆ ಬಂದವರ ಜಾತಿ-ಗೋತ್ರಗಳನ್ನು ವಿಚಾರಿಸದೇ ಗೌರವಾತಿಥ್ಯ ನೀಡುವುದೇ ನಿಜವಾದ ಧರ್ಮ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಪೂಜ್ಯ ಸದಾಶಿವ ಸ್ವಾಮೀಜಿ ಮಾತನಾಡುತ್ತ, ಬಸವತತ್ವದ ಅಡಿಯಲ್ಲಿ ಗುರುಪ್ರವೇಶ ಮಾಡಿದ ಕರೆಮಣ್ಣವರ ದಂಪತಿಗಳು ಶರಣ ಪರಂಪರೆಗೆ ನಾಂದಿ ಹಾಡಿದ್ದಾರೆ ಎಂದು ಹೇಳಿದರು.

ಹೊಸಮಠದ ಪೂಜ್ಯ ಬಸವ ಶಾಂತಲಿಂಗ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು.

ಬಸವ ಬಳಗದ ವತಿಯಿಂದ ಕರೆಮಣ್ಣವರ ದಂಪತಿಗಳಿಗೆ ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು. ವೀರೇಶ ಹಿತ್ತಲಮನಿ ಸ್ವಾಗತಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮನೆಯ ಕಟ್ಟಡ ನಿರ್ಮಾಣದ ವಿವಿಧ ಕಾರ್ಮಿಕರು, ಮೇಸ್ತ್ರಿಗಳನ್ನು ನೆನೆದು ಗೌರವ ಸನ್ಮಾನ ನೀಡಲಾಯಿತು.

ಹಿತ್ತಲಮನಿ ಗುರುಕುಲ ಶಾಲಾ ಮಕ್ಕಳು ವಚನ ನೃತ್ಯ ಮಾಡಿದರು. ಪ್ರಸಾದ ದಾಸೋಹ ಏರ್ಪಡಿಸಲಾಗಿತ್ತು.

ಬಸವ ಬಳಗದ ಅಧ್ಯಕ್ಷರಾದ ವಿ.ಜಿ. ಯಳಗೇರಿ, ಶೋಭಾತಾಯಿ ಮಾಗಾವಿ ಅರ್ಚನಾ ಮತ್ತು ಜಯಂತ ಬೆಳ್ಳೂರು ದಂಪತಿಗಳು ಮತ್ತು ಮಾಗಾವಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಅಲ್ಲದೇ ಮುರಿಗೆಪ್ಪ ಕಡೆಕೊಪ್ಪ, ಉಳಿವೆಪ್ಪ ಪಂಪಣ್ಣನವರ, ಶಿವಬಸಪ್ಪ ಮುದ್ದಿ, ಕೆ.ಎಂ. ಬಿಜಾಪುರ, ಮಠಪತಿ ಮಹಾಂತಣ್ಣ ಹಲಗಣ್ಣನವರ, ಗಂಗಣ್ಣ ಮಾಸೂರ, ಶಿವಾನಂದ ಹೊಸಮನಿ, ಶಿವಾನಂದ ಅಂಗಡಿ ದಂಪತಿ, ಹನುಮಂತಪ್ಪ ಮಡಿವಾಳರ, ಶಿವಯೋಗಿ ಬೆನ್ನೂರು, ಶಿವಯೋಗಿ ಮಾಮ್ಲೆಪಟ್ಟಣಶೆಟ್ಟಿ ಸೇರಿದಂತೆ ಅನೇಕ ಗಣ್ಯರು, ಬಂಧುಗಳು-ಮಿತ್ರರು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *