ಬಸವ ಜಯಂತಿ: ಚಾಮರಾಜನಗರ ರ‍್ಯಾಲಿಯಲ್ಲಿ ನೂರಕ್ಕೂ ಹೆಚ್ಚು ಕಾರುಗಳು ಭಾಗಿ

ಬಸವ ಮೀಡಿಯಾ
ಬಸವ ಮೀಡಿಯಾ

ಚಾಮರಾಜನಗರ

ನಗರದಲ್ಲಿ ನಾಳೆ ನಡೆಯಲಿರುವ ಬಸವ ಜಯಂತೋತ್ಸವ ಅಂಗವಾಗಿ ನೂರಕ್ಕೂ ಹೆಚ್ಚು ಕಾರುಗಳ ರ‍್ಯಾಲಿ ಯಶಸ್ವಿಯಾಗಿ ಬುಧವಾರ ನಡೆಯಿತು.

ಸಿದ್ಧಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷರಾದ ಪೂಜ್ಯ ಚನ್ನಬಸವ ಸ್ವಾಮೀಜಿ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಬಸವ ಬಾವುಟ ತೋರಿಸಿ ರ‍್ಯಾಲಿಗೆ ಚಾಲನೆ ನೀಡಿದರು.

ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಬಸವೇಶ್ವರ ಪುತ್ಥಳಿಯ ಬಳಿಯಿಂದ ಹೋರಾಟ ರ‍್ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂತೇರಮಹಳ್ಳಿ ಸರ್ಕಲ್ ಮಾರ್ಗವಾಗಿ ಶ್ರೀಮಠಕ್ಕೆ ತಲುಪಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ ಸಿದ್ದಮಲ್ಲೇಶ್ವರ ವಿರಕ್ತ ಮಠ ಹಾಗೂ ಬಸವ ಬಳಗಗಳ ಒಕ್ಕೂಟದಿಂದ ಆಯೋಜನೆಗೊಂಡಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ
ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕೆಂದು ಮನವಿ ಮಾಡಿದರು.

ಚಾಲನೆ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಯುವ ಘಟಕದ ಅಧ್ಯಕ್ಷ ಸೋಮವಾರಪೇಟೆ ಗುರು, ಒಕ್ಕೂಟದ ದೊಡ್ಡರಾಯಪೇಟೆ ಗಿರೀಶ್, ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಅಲೂರು ಪ್ರದೀಪ್, ರಾಜ್ಯ ಘಟಕದ ಕಾರ್ಯದರ್ಶಿ ಪ್ರಣಯ್, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ, ಬಸವಕೇಂದ್ರದ ಅಧ್ಯಕ್ಷ ಎನ್‌ಎಚ್‌ ಮಹದೇವಸ್ವಾಮಿ, ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಕೆ. ರವಿಕುಮಾರ್, ಕೆ. ವೀರಭದ್ರ ಸ್ವಾಮಿ, ಹೊನ್ನಹಳ್ಳಿ ವೃಷಬೇಂದ್ರಪ್ಪ, ನೌಕರರ ಸಂಘ ಅಧ್ಯಕ್ಷ ಸಿದ್ಧಮಲ್ಲಪ್ಪ, ಪ್ರಭುಸ್ವಾಮಿ, ತಾಲೂಕು ಅಧ್ಯಕ್ಷ ಬಾಲಚಂದ್ರ ಮುರ್ತಿ, ನಿರ್ದೇಶಕರಾದ ಬಿಸಲವಾಡಿ ಉಮೇಶ್, ಕಾವುದವಾಡಿ ಗುರು, ರತ್ನಮ್ಮ ಬಸವರಾಜು, ಶಿವಪುರ ಗೀತಾ ಮೊದಲಾದವರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *