ಬಸವಕಲ್ಯಾಣ
ಅನುಭವಮಂಟಪ ಬಸವಕಲ್ಯಾಣ ಆಯೋಜಿಸಿದ್ದ ಬಸವ ಸಂಸ್ಕೃತಿ ಚಿಂತನ ಶಿಬಿರದ ಸಮಾರೋಪ ಸಮಾರಂಭ ಗುರುವಾರ ನಡೆಯಿತು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಮಕ್ಕಳು, ಯುವಕರು ಬಸವತತ್ವವನ್ನು ಅರಿತುಕೊಂಡು ಅವುಗಳ ಆಚರಣೆಗಳನ್ನು ಮೈಗೂಡಿಸಿಕೊಳ್ಳಬೇಕು. ಅಂದಾಗ ನಿಮ್ಮ ವ್ಯಕ್ತಿತ್ವ ವಿಕಾಸವಾಗುತ್ತದೆ. ಶರಣರ ಚಿಂತನೆಗಳು ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಿವೆ, ಎಂದು ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಬಸವ ಸಂಸ್ಕೃತಿ ಚಿಂತನ ಶಿಬಿರಗಳಿಂದ ಮಕ್ಕಳಿಗೆ ಆಳವಾದ ಅಧ್ಯಯನ, ಚಿಂತನೆ ಹಾಗೂ ಅವರ ಮನಸ್ಸಿನಲ್ಲಿರುವ ಅನೇಕ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರಗಳು ದೊರೆಯುತ್ತವೆ, ಎಂದು ಪೂಜ್ಯ ಗುರುಬಸವ ಪಟ್ಟದ್ದೇವರು ಹೇಳಿದರು.
ಪೂಜ್ಯ ಗಾಯತ್ರಿ ತಾಯಿ ಅವರು ಸ್ವರವಚನಗಳ ಕುರಿತು ಅನುಭಾವ ನೀಡಿದರು.
ಶಿಬಿರಾರ್ಥಿಗಳಿಗೆ ಪೂಜ್ಯರಿಂದ ಪ್ರಮಾಣ ಪತ್ರ ಹಾಗೂ ಗ್ರಂಥ ವಿತರಣೆ ಮಾಡಲಾಯಿತು.

ಪೂಜ್ಯ ಶ್ರೀ ಮಹಾಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಬಸವದೇವರು, ಪೂಜ್ಯ ಶ್ರೀ ಪ್ರಭುಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಬಸವಪ್ರಿಯ ಸ್ವಾಮಿಗಳು, ಪೂಜ್ಯ ದೇವಮ್ಮತಾಯಿ, ಪೂಜ್ಯ ಅನೀಲ ಮಹಾರಾಜರು ಉಪಸ್ಥಿತರಿದ್ದರು.
ಅಭಿಯಂತರರಾದ ದೀಪಕ ಗುಂಗೆ ಅವರಿಂದ ವಚನ ಗಾಯನ ನಡೆಯಿತು. ಅನುಭವಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಮಹೇಶ ಘಾಳೆ, ಡಾ.ಪಲ್ಲವಿ ಪಾಟೀಲ ಉಪ್ಥಿತರಿದ್ದರು. ರಾಜು ಜುಬರೆ ನಿರೂಪಿಸಿದರು. ಅಶೋಕ ಕುಂಬಾರ ಶರಣು ಸಮರ್ಪಣೆ ಮಾಡಿದರು. ಡಾ.ಸಂಗೀತಾ ಡಾ.ರಮೇಶ ಮಂಠಾಳೆ ಅವರು ಕಲ್ಯಾಣ ಮಹೋತ್ಸವ ೨೫ನೆಯ ವರ್ಷಾಚರಣೆ ನಿಮಿತ್ಯ ಪ್ರಸಾದ ದಾಸೋಹ ಮಾಡಿದರು.
