ಪರಿಸರ ಸಂರಕ್ಷಣೆಗೆ ಮುರುಘಾ ಮಠದಿಂದ ಸಸಿ ನೆಡುವ ಸಪ್ತಾಹ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಮುರುಘಾ ಮಠ ಆಯೋಜಿಸಿರುವ ಸಸಿ ನೆಡುವ ಸಪ್ತಾಹದ ಮೊದಲನೆಯ ದಿನದಂದು ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಲಕ್ಷ್ಮಿಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿತ್ತು.

ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು ಮಾತನಾಡಿ, ಮುರುಘಾ ಮಠವು ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿಸುವ ಹಿನ್ನಲೆಯಲ್ಲಿ ಸಸಿ ನೆಡುವ ಸಪ್ತಾಹವನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ.

ಈ ಕಾರ್ಯಕ್ಕೆ ವಿವಿಧ ಗ್ರಾಮಗಳ ಗ್ರಾಮಸ್ಥರು ಹಾಗೂ ವಿವಿಧ ಸಮಾಜ, ಸಂಘ ಸಂಸ್ಥೆಗಳು ಕೈ ಜೋಡಿಸುತ್ತಿರುವುದು ಶ್ಲಾಘನೀಯ ತಿಳಿಸಿದರು.

ದಿವ್ಯಸಾನ್ನಿಧ್ಯ ವಹಿಸಿದ್ದ ಕಬೀರಾನಂದಾಶ್ರಮದ ಸದ್ಗುರು ಶಿವಲಿಂಗಾನಂದ ಮಹಾಸ್ವಾಮಿಗಳು ಮಾತನಾಡಿ, ಸಸಿ ನೆಡುವುದು ಎಷ್ಟು ಮುಖ್ಯವೋ ಅದರ ಸಂರಕ್ಷಣೆ ಕೂಡಾ ಅಷ್ಟೇ ಮುಖ್ಯ.

ಮುರುಘಾ ಮಠ ಕೇವಲ ಗಿಡ ನೆಡುತ್ತಿಲ್ಲ. ಅವುಗಳಿಗೆ ಟ್ಯಾಂಕರ್ ಮೂಲಕ ನಿರಂತರವಾಗಿ ನೀರುಣಿಸುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.

ರಾಜ್ಯ ಹಾಗೂ ರಾಷ್ಟ್ರ ಪುರಸ್ಕೃತ ಅಂತರ್ಜಲ ತಜ್ಞರಾದ ಡಾ.ಎನ್ ಜೆ ದೇವರಾಜರೆಡ್ಡಿ, ಮಾನವ ಈಗಾಗಲೇ ಶೇ.೮೦ರಷ್ಟು ನೀರನ್ನು ಖಾಲಿ ಮಾಡಿದ್ದಾನೆ. ಮುಂದಿನ ಪೀಳಿಗೆಗೆ ಈ ಸಂಪನ್ಮೂಲವನ್ನು ಉಳಿಸಬೇಕಾಗಿದೆ. ನೀರು ಮತ್ತು ಪರಿಸರದ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.

ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಉಪ ಸಂರಕ್ಷಣಾಧಿಕಾರಿಗಳಾದ ಜಿ ಗೋಪ್ಯಾನಾಯ್ಕ್ ಮಾತನಾಡಿ ಎಲ್ಲಿ ಪ್ರತಿಶತ ಶೇ.೩೦ರಷ್ಟು ಕಾಡು ಇರುತ್ತದೆಯೋ ಅಲ್ಲಿ ಮನುಷ್ಯನ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ಭೂಮಿಯ ನೈಸರ್ಗಿಕ ಸಂಪತ್ತು ಬರಿದಾಗುತ್ತಿದೆ. ಏನನ್ನೂ ಬೇಡದ ಮರಗಳು ಪ್ರಕೃತಿಗೆ ಆಶ್ರಯವಾದರೆ ಅದೇ ಮರಗಳನ್ನು ಮನುಷ್ಯ ನಿರಂತರ ನಾಶಗೊಳಿಸುತ್ತಿದ್ದಾನೆ, ಎಂದರು.

ಮುರುಘಾ ಮಠ ಚಿತ್ರದುರ್ಗ ಜಿಲ್ಲೆಯ ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಮೇ ೩೦ ರಿಂದ ಜೂನ್ ೫ರವರೆಗೆ ಚಿತ್ರದುರ್ಗ ನಗರ ಹಾಗು ಸುತ್ತಮುತ್ತಲ ವಿವಿಧ ಪ್ರದೇಶಗಳಲ್ಲಿ ಸಸಿ ನೆಡುವ ಸಪ್ತಾಹವನ್ನು ಹಮ್ಮಿಕೊಂಡಿದೆ.

ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಅಧ್ಯಕ್ಷರಾದ ಶ್ರೀ ಶಿವಯೋಗಿ ಸಿ ಕಳಸದ್, ಗುರುಮಠಕಲ್ ಶ್ರೀಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳು, ಶಿರಸಂಗಿಯ ಶ್ರೀ ಬಸವ ಮಹಾಂತಸ್ವಾಮಿಗಳು, ಕೊಲ್ಲಾಪುರ ಹಾಗೂ ಸಾಯಗಾವ್‌ನ ಶ್ರೀ ಶಿವಾನಂದ ಸ್ವಾಮೀಜಿಗಳು, ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿಗಳು, ಆಡಳಿತಮಂಡಳಿಯ ಸದಸ್ಯರಾದ ಶ್ರೀ ಎಸ್ ಎನ್ ಚಂದ್ರಶೇಖರ್, ಲಕ್ಷ್ಮೀಸಾಗರ ಗ್ರಾಮಪಂಚಾಯಿತಿ ವ್ಯಾಪ್ತಿ ಗ್ರಾಮಸ್ಥರು, ಬಿ ಓ ಹನುಮಂತಪ್ಪ, ರಾಜಣ್ಣ, ಕೆ ಜಿ ಕುಮಾರಗೌಡ್ರು, ಅನಂತರಾಜು, ಧನಂಜಯ, ದ್ಯಾಮಣ್ಣ, ಬಸವನಗೌಡ್ರು, ನಾಗೇಂದ್ರಪ್ಪ, ನಾಗರಾಜಪ್ಪ, ಆರ್ ಓ ಮಹೇಶ್, ಗಾಡಿ ಚಂದ್ರಣ್ಣ, ದೇವರಾಜ್, ಗ್ರಾ.ಪಂ.ಸದಸ್ಯ ತಿಪ್ಪೇಸ್ವಾಮಿ, ಸೋಮಣ್ಣ, ಬಸಣ್ಣ, ಎಲ್.ಎಂ.ಮೃತ್ಯುಂಜಯ, ಬಸವರಾಜ್, ಚೌಡಪ್ಪ, ಕೆ.ಎಸ್.ಮಹೇಶ್, ಇಮ್ರಾನ್, ಸುನೀಲ್, ಸರಸ್ವತಿ ಸ್ವಾಮಿ, ಕಾಂತರಾಜು, ರುದ್ರಣ್ಣ, ಹನುಮಂತಣ್ಣ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿತ್ರದುರ್ಗ ಘಟಕದ ಅಧ್ಯಕ್ಷರು ಪದಾಧಿಕಾರಿಗಳು, ವೀರಶೈವ ಸಮಾಜ, ಜಂಗಮ ಸಮಾಜ, ಶಿವಸಿಂಪಿ ಸಮಾಜ, ಜಾಗತಿಕ ಲಿಂಗಾಯತ ಮಹಾಸಭೆ, ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭೆ ಕುಂಚಿಟಿಗ ಲಿಂಗಾಯತ ಸಮಾಜ ಸೇರಿದಂತೆ ವಿವಿಧ ಮಹಿಳಾ ಸಂಘ, ಧರ್ಮಸ್ಥಳ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಎಸ್.ಎಂ. ತೇಜಸ್ವಿನಿ ಸ್ವಾಗತಿಸಿ, ಬಿ ಎಸ್ ಪೂಜಾ ನಿರೂಪಿಸಿದರು. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಎಸ್.ಜೆ.ಎಂ.ಫಾರ್ಮಸಿ ಮಹಾವಿದ್ಯಾಲಯದ ಸಿಬ್ಬಂದಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
1 Comment
  • ಪರಿಸರ ಸಂರಕ್ಷಣೆ ಮಾಡಿದರೆ ಮಾತ್ರ ನಾವು ಸಮೃದ್ಧಿ ಹೊಂದಲು ಸಾಧ್ಯ

Leave a Reply

Your email address will not be published. Required fields are marked *