ಬಸವಶಕ್ತಿ ಗೂಗಲ್ ಮೀಟ್: ಸಿದ್ದರಾಮಯ್ಯ ನಂತರ ಲಿಂಗಾಯತ ಹೋರಾಟ

ಬಸವ ಮೀಡಿಯಾ
ಬಸವ ಮೀಡಿಯಾ

ಇಂದಿನ ಚರ್ಚೆಯ ಅತಿಥಿಗಳು: ಡಾ. ಟಿ ಆರ್ ಚಂದ್ರಶೇಖರ್, ಡಾ. ಸಂಗಮೇಶ ಕಲಹಾಳ (ರಾತ್ರಿ 8 ಗಂಟೆ)

ಬೆಂಗಳೂರು

ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದ್ದ ಸಿದ್ದರಾಮಯ್ಯ ರಾಜಿನಾಮೆ ನೀಡಿದ್ದಾರೆ.

ಅವರ ನಿರ್ಗಮನದಿಂದ ಬದಲಾಗುತ್ತಿರುವ ರಾಜಕೀಯ ಚಿತ್ರಣದ ಬಗ್ಗೆ ಬಸವ ಸಂಘಟನೆಗಳು, ಕಾರ್ಯಕರ್ತರು ಜಾಗೃತರಾಗುವ ಅನಿವಾರ್ಯತೆಯಿದೆ.

ಈ ಬೆಳವಣಿಗೆಗಳನ್ನು ವಿಶ್ಲೇಷಿಸಲು ಹೆಸರಾಂತ ಚಿಂತಕರಾದ ಟಿ ಆರ್ ಚಂದ್ರಶೇಖರ್, ಬೆಂಗಳೂರು, ಹಾಗೂ ಸಂಗಮೇಶ ಕಲಹಾಳ, ಕೊಪ್ಪಳ, ಇಂದು ರಾತ್ರಿಯ ಬಸವಶಕ್ತಿ ಚರ್ಚೆಯಲ್ಲಿ ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ.

ಹಿರಿಯ ಶರಣ ಸಾಹಿತಿ ಡಾ. ಟಿ ಆರ್ ಚಂದ್ರಶೇಖರ್ ಲಿಂಗಾಯತ ಧರ್ಮದ ಮೇಲೆ ಹಲವಾರು ಪುಸ್ತಕ ಬರೆದಿದ್ದಾರೆ. ರಾಜ್ಯ ಯೋಜನಾ ಆಯೋಗದ ಸದಸ್ಯರಾಗಿರುವ ಇವರು ಬಸವ ಮೀಡಿಯಾ ಟ್ರಸ್ಟಿನ ಛೇರ್ಮನ್ ಕೂಡ ಆಗಿದ್ದಾರೆ.

ಡಾ. ಸಂಗಮೇಶ ಕಲಹಾಳ ಜಿಲ್ಲಾ ಆಯುಷ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಕೊಪ್ಪಳ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಟಣಕನಕಲ್ಲ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷರಾಗಿದ್ದಾರೆ.

ಈ ಕಾರ್ಯಕ್ರಮದಿಂದ ಬಸವಶಕ್ತಿ ಸರಣಿ ಉಪನ್ಯಾಸ, ಶಿಬಿರಗಳೂ ಶುರುವಾಗುತ್ತಿವೆ. ಬಸವ ಸಂಘಟನೆಗಳ, ಕಾರ್ಯಕರ್ತರ ರಾಜಕೀಯ ಪ್ರಜ್ಞೆ ಹಾಗೂ ಪ್ರಭಾವ ಬೆಳೆಸುವುದು ಬಸವಶಕ್ತಿ ಕಾರ್ಯಕ್ರಮದ ಮುಖ್ಯ ಉದ್ದೇಶ.

ದಿನಾಂಕ: ಜೂನ್ 1
ಸಮಯ: ರಾತ್ರಿ 8-9

ಚರ್ಚೆಯಲ್ಲಿ ಭಾಗವಹಿಸಲು ಗೂಗಲ್ ಮೀಟ್ ಲಿಂಕ್

https://meet.google.com/qur-quxi-jrh

ಬಸವ ಮೀಡಿಯಾ ತಂಡದ ಎಚ್ ಎಂ ಸೋಮಶೇಖರಪ್ಪ ಹಾಗೂ ಅಪರ್ಣ ವಾಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಎಲ್ಲರಿಗೂ ಸ್ವಾಗತ.

ಚರ್ಚೆಯ ವಿಷಯ

ಸಿದ್ದರಾಮಯ್ಯ ಮತ್ತು ಲಿಂಗಾಯತ ಧರ್ಮ ಹೋರಾಟ

1) ಲಿಂಗಾಯತ ಧರ್ಮ ಹೋರಾಟಕ್ಕೆ ಸಿದ್ದರಾಮಯ್ಯನವರ ಕೊಡುಗೆ. ಅದರ ಮಹತ್ವ

– ಅತಿ ದೊಡ್ಡ ಕೊಡುಗೆಯೇನು, ಅದರ ಮಹತ್ವ
2) ಲಿಂಗಾಯತ ಧರ್ಮ ಹೋರಾಟದಲ್ಲಿ ಒಟ್ಟಾರೆ ಕಾಂಗ್ರೆಸ್ ಪಾತ್ರವೇನು

– ಇದನ್ನು ಸಿದ್ದರಾಮಯ್ಯನವರ ಪಾತ್ರದಿಂದ ಭಿನ್ನವಾಗಿ ನೋಡಬೇಕೆ
3) ಸಿದ್ದರಾಮಯ್ಯನವರ ರಾಜೀನಾಮೆಯಿಂದ ಲಿಂಗಾಯತ ಧರ್ಮ ಹೋರಾಟಕ್ಕೆ ಹಿನ್ನಡೆಯಾಗಿದೆಯೇ

4) ಮುಂದಿನ ಬೆಳವಣಿಗೆಗಳು, ಡಿ ಕೆ ಶಿವಕುಮಾರ್ ನಿಲುವು

– ಕಾಂಗ್ರೆಸ್ ನಿಲುವಿನ ಬಗ್ಗೆ ಶಿವಕುಮಾರ್ ಪಂಚಪೀಠಗಳಲ್ಲಿ ಕ್ಷಮಾಪಣೆ ಕೇಳಿದ್ದಾರೆ.

5) ಬಸವ ಸಂಘಟನೆಗಳ ಮುಂದಿನ ದಾರಿ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
1 Comment
  • ಲಿಂಗಾಯತ /ಬಸವಣ್ಣ ನವರನ್ನು ನಿಮ್ಮ ಸ್ಪಾರ್ಥಕ್ಕೆ ತುತ್ತೂರಿ ಮಾಡ್ಕೊಬೇಕಂತಿದ್ದಿರಾ ? ಜಾಗ್ರತೆಯಿರಲಿ ಪ್ರಜ್ಞೆಯಿರಲಿ 🙏🙏

Leave a Reply

Your email address will not be published. Required fields are marked *