ಬೆಂಗಳೂರು:
ಲಿಂಗಾಯತ ಯುವ ಬಳಗ ಮತ್ತು ನಮ್ಮ ನಾಡು ನಮ್ಮ ಆಳ್ವಿಕೆ ಕೂಟದ ಸದಸ್ಯರು ಶಿವಗಂಗೆ ಪರ್ವತದಿಂದ ಸುಮಾರು ನೂರು ಕೆಜಿಯಷ್ಟು ತ್ಯಾಜ್ಯ ಕಸವನ್ನು ರವಿವಾರ ತೆಗೆದರು.
ಎರಡೂ ಸಂಘಟನೆಗಳ 45 ಯುವಕರ ತಂಡ ಮುಂಜಾನೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ 53 ಮೂಟೆಗಳ ಕಸ ಸಂಗ್ರಹಿಸಿದರು.

ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅನೇಕ ಮಕ್ಕಳು ಮತ್ತು ಮಹಿಳೆಯರು ಭಾಗಿಯಾಗಿದ್ದು ವಿಶೇಷವಾಗಿತ್ತು.
ಶಿವಗಂಗೆ ಪರ್ವತ 1368 ಮೀಟರ್ ಎತ್ತರವಿದ್ದು, ಯಾತ್ರಿಗಳು ದಾರಿಯುದ್ದಕೂ ಎಸೆಯಲಾದ ಪ್ಲಾಸ್ಟಿಕ್ ಬಾಟಲ್‌ಗಳು, ಪ್ಲಾಸ್ಟಿಕ್ ಕವರ್ ಮತ್ತು ಜೈವಿಕ ವಿಘಟನೀಯವಲ್ಲದ (non-biodegradable) ವಸ್ತುಗಳನ್ನು ಆರಿಸಿ ಮೂಟೆಗಳಲ್ಲಿ ತುಂಬಲಾಯಿತು.

ಕಸದ ಮೂಟೆಗಳನ್ನು ಪರ್ವತದಲ್ಲಿರುವ ಗಂಗಾಧರೇಶ್ವರ ಸ್ವಾಮಿ, ಹೊನ್ನಾದೇವಿ ದೇವಾಲಯದ ಕಸ ವಿಲೆವಾರಿ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಶಿವಗಂಗೆ ಪರ್ವತ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಯುವಜನಕ್ಕೆ ಪ್ರೇರೆಪಣೆಯಾಗುವಂತಹ ಮತ್ತು ಪ್ರಕೃತಿ ಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಬಸವ ಬಳಗದ ಸದಸ್ಯ ಶಿವಾನಂದ ಗುಂಡಾನವರ ಬಸವ ಮೀಡಿಯಾಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾವ್ಯ, ಕುಮುದಾ, ಪ್ರಮೊದ ತಳವಾರ, ಧರ್ಮೆಂದ್ರ ಯಾದವ, ಪ್ರಜಾಪತಿ, ಅಬಿಶೇಕ್ ಮೆಡೆಗಾರ, ಅನಿಲ ನಾಗುರ, ಸುಮಂತಗೌಡ, ಹೆಮಂತ, ಪ್ರವರ್ ಕೊಟ್ಟೂರು, ಪ್ರಬು ಗುಡಿಮನಿ, ಚಿನ್ಮಯಿ ಭಟ್ ಮತ್ತು ಇನ್ನು ಅನೇಕರು ಭಾಗಿಯಾಗಿದ್ದರು.
