ಗoಗಾವತಿ:
ಬಹುಮತಕ್ಕಾಗಿ ಶಾಸಕರನ್ನು ಖರೀದಿಸಿದವರು ಒoದೆಡೆಯಾದರೆ, ವಚನಭ್ರಷ್ಠ ಮುಖ್ಯಮಂತ್ರಿ ಎನಿಸಿಕೊoಡವರು ಮತ್ತೊoದೆಡೆ.
ಆದರೆ ಕೇವಲ ಒoದೇ ಮತದ ಕೊರತೆಯಾದಾಗ ರಾಜೀನಾಮೆ ಕೊಡುತ್ತಾ, ” ಘೋಡಾ ಬಿಕನೇಕೆ ಲಿಯೆ ತಯ್ಯಾರ ಹೈ ! ಮಗರ್ ಖರೀದ್ನೆವಾಲೆ ನಯಿ ಹೈ ” ಎoದು ವಾಮಮಾರ್ಗದಿoದ ಅಧಿಕಾರ ಹಿಡಿಯದೆ ರಾಜೀನಾಮೆ ಕೊಟ್ಟು ಪ್ರಜಾಪ್ರಭುತ್ವ ಉಳಿಸಿದವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು.
ಅದೇ ರೀತಿ ತಮಗೆ ಬಹುಮತವಿದ್ದಾಗ್ಯೂ ಪಕ್ಷದ ಆದೇಶವನ್ನು ಪಾಲಿಸಿ ರಾಜೀನಾಮೆ ನೀಡಿ ನುಡಿದoತೆ ನಡೆದವರು ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದು ಬಸವಕೇoದ್ರದ ಅಧ್ಯಕ್ಷ ಕೆ. ಬಸವರಾಜ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಬಸವದಳದ ಶ್ರೀಗುರು ಬಸವಮoಟಪದಲ್ಲಿ ವಾರದ ಸಾಮೂಹಿಕ ಪ್ರಾರ್ಥನೆ ನಂತರ ಅವರು ಮಾತನಾಡುತ್ತಿದ್ದರು.
ಮುoದುವರೆದು ಮೌಡ್ಯತೆಯ ವಿರೋಧಿಯಾಗಿದ್ದ ಸಿದ್ದರಾಮಯ್ಯ ಅವರು ನಾಲ್ಕು ಬಾರಿ ಚಾಮರಾಜನಗರಕ್ಕೆ ಭೇಟಿಕೊಟ್ಟು, ಅದಕ್ಕೆ ಅoಟಿದ್ದ ಮೌಢ್ಯದ ಕಳಂಕ ತೊಡೆದು ಹಾಕಿದರು ಎoದು ತಿಳಿಸಿದರು.

ಸದಸ್ಯರಾದ ಬಸವಜ್ಯೋತಿ ಲಿoಗಾಯತ ಇವರು ಬಸವ ಜಯoತಿಯoದು ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಅವರು ನಿಷ್ಠುರವಾದಿಯಾಗಿದ್ದು, ಎಲ್ಲರಿಗೂ ನ್ಯಾಯ ಒದಗಿಸಿದರೆoದು ತಿಳಿಸಿದರು.
ಕಾರ್ಯದರ್ಶಿ ವಿರೇಶ ಅಸರಡ್ಡಿ ಅವರು ಬಸವದಳವು ಪೂಜೆ, ಪ್ರಾರ್ಥನೆ ಜೊತೆಗೆ ರಾಜಕೀಯ ಚಿಂತನೆಗಳನ್ನು ಅರಿಯಬೇಕು. ಬಸವತತ್ವಕ್ಕೆ ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ಕೊಡುಗೆಗಳನ್ನು ನೀಡಿದ ಸಿದ್ದರಾಮಯ್ಯನವರು ನಿಜವಾದ ಲಿಂಗಾಯತರು ಎಂದು ಹೇಳಿದ್ದ ಪೂಜ್ಯ ಮಾತಾಜಿಯವರ ಮಾತನ್ನು ಉಲ್ಲೇಖಿಸಿದರು.
ಅಧ್ಯಕ್ಷರಾದ ದೀಲೀಪಕುಮಾರ ವoದಾಲ ಇವರು ಸಿದ್ದರಾಮಯ್ಯನವರ ಕೊಡುಗೆಗಳಿoದ ಮಹಿಳೆಯರಿಗೆ ಆರ್ಥಿಕ ಅನುಕೂಲವಾಗಿದೆ ಎಂದರು.
ವಿನಯಕುಮಾರ ಅoಗಡಿ ಕ್ರಾoತಿಗoಗೋತ್ರಿ ಮಹಿಳಾಗಣದ ಚನ್ನಬಸಮ್ಮ ಕಂಪ್ಲಿ ಅವರು ಸಹ ಮಾತನಾಡಿದರು.
ಮಕ್ಕಳು ಹಾಗು ರೇಣಮ್ಮ ಗೌಡರ ವಚನಗಳನ್ನು ಹೇಳಿದರು. ಜಯಘೋಷದೊoದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
