ಗುರುಬಸವೇಶ್ವರ ಮಠದ ಮಹಾಂತದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವ

ಶರಣತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಮಠದ ಕಾರ್ಯನಿರ್ವಹಿಸಿ :ತೋಂಟದ ಡಾ. ಸಿದ್ದರಾಮ ಸ್ವಾಮೀಜಿ

ಬದಾಮಿ:

ಸಮಾಜವನ್ನು ಉತ್ತಮಗೊಳಿಸಲು ಮಠದ ಸ್ವಾಮೀಜಿಗಳ ತ್ಯಾಗ ದೊಡ್ಡದಾಗಿದೆ. ಪಟ್ಟಾಧಿಕಾರ ಹೊಂದಿದ ನೂತನ ಸ್ವಾಮಿಗಳು ಸಮಾಜ ಸೇವೆಯಲ್ಲಿ ಪೂರ್ಣ ತೊಡಗಿಸಿಕೊಂಡು ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯಬೇಕು. ಭಕ್ತರು ಮಠಗಳಿಗೆ ಎಲ್ಲ ರೀತಿಯ ಶಕ್ತಿ ತುಂಬಬೇಕು ಎಂದು ಗದಗ ಜಗದ್ಗುರು ತೋಂಟದಾರ್ಯ ಮಠದ ಡಾ. ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಬೇಲೂರು ಗ್ರಾಮದಲ್ಲಿ ಬುಧವಾರ ಗುರುಬಸವೇಶ್ವರ ಮಠದ ಮಹಾಂತ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವ ಹಾಗೂ ಕಾಯಕಯೋಗಿ ಲಿಂಗೈಕ್ಯ ಪೂಜ್ಯ ಬಸವಪ್ರಸಾದ ಶ್ರೀಗಳ ೧೦ನೇ ಪುಣ್ಯಸ್ಮರಣೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಸ್ವಾಮೀಜಿಗಳು ಶರಣತತ್ವ ಸಿದ್ದಾಂತಕ್ಕೆ ಬದ್ದರಾಗಿ ಮಠದ ಕಾರ್ಯಗಳನ್ನು ನಿರ್ವಹಿಸಬೇಕು. ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಇಲಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ಪರಂಪರೆಯ ಬಗ್ಗೆ ಸಮಾಜದ ಜನರಲ್ಲಿ ಅರಿವು ಮೂಡಿಸಬೇಕು. ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಿ ವೈಚಾರಿಕತೆ ಮೂಡಿಸಬೇಕು. ಬಸವಾದಿ ಶರಣರ ಆಶಯದ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು.

ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಲಿಂಗೈಕ್ಯ ಬಸವಪ್ರಸಾದ ಶ್ರೀಗಳು ಬಸವತತ್ವದಂತೆ ಲಿಂಗಪೂಜಾ ನಿಷ್ಠರಾಗಿ ಕಾಯಕ, ದಾಸೋಹ, ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರ ಹಾದಿಯಲ್ಲಿ ನೂತನ ಶ್ರೀಗಳು ನಡೆಯಬೇಕು ಎಂದರು.

ನೂತನ ಪೀಠಾಧಿಪತಿಗಳಾದ ಮಹಾಂತ ದೇವರಿಗೆ ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ‘ಷಟಸ್ಥಲ ಬ್ರಹ್ಮೋಪದೇಶ’ ಮತ್ತು ‘ಚಿನ್ಮಯಾನುಗ್ರಹ’ ಪ್ರಸಾದಿಸ್ಥಲ ದೀಕ್ಷೆಯನ್ನು ನೀಡಿ ಶ್ರೀ ಮ.ನಿ.ಪ್ರ. ಪ್ರಭುಮಹಾಂತ ಗುರುಬಸವ ಪ್ರಸಾದ ಸ್ವಾಮಿಗಳು ಎಂಬ ನೂತನ ಅಭಿದಾನ ದಯಪಾಲಿಸಿದರು.

ಗುರುಬಸವೇಶ್ವರ ಮಠದ ಪೂಜ್ಯ ಮುಕ್ತಾಯಕ್ಕ ಅಮ್ಮನವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.

ಶೂನ್ಯ ಸಿಂಹಾಸನಾರೋಹಣ ಹಾಗೂ ಸಮಾಜ ಸೇವಾ ದೀಕ್ಷಾ ಸಮಾರಂಭ ನಡೆದು, ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಮಹಾಸ್ವಾಮಿಗಳು, ಬೇಲೂರು ಗುರುಬಸವೇಶ್ವರ ಮಠದ ಪೂಜ್ಯ ಪ್ರಭುಮಹಾಂತ ಗುರುಪ್ರಸಾದ ಸ್ವಾಮಿಗಳು ಸಾನಿಧ್ಯ ವಹಿಸಿದರು.

ನೂತನ ಮಠಾಧೀಶರಾದ ಪ್ರಭುಮಹಾಂತ ಸ್ವಾಮೀಜಿ ‌ಮಾತನಾಡಿ, ಭಕ್ತರ ಸಹಕಾರದಿಂದ ಸಮಾಜ ಸೇವೆಯಲ್ಲಿ ತೊಡಗುವೆ ಎಂದು ಹೇಳಿದರು.

ಬೇಲೂರು- ಮುಂಡರಗಿ ತೋಂಟದಾರ್ಯ ಮಠದ ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಶಿವಶಂಕರ ಸ್ವಾಮೀಜಿ, ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿದರು.

ಶಿರೂರು ಮಹಾಂತತೀರ್ಥದ ಬಸವಲಿಂಗ ಮಹಾಸ್ವಾಮಿಗಳು, ಭಾಲ್ಕಿಯ ಪೂಜ್ಯ ಗುರುಬಸವ ಪಟ್ಟದ್ದೇವರು, ಶಿವಲಿಂಗೇಶ್ವರ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ವೆಂಕಟಾಪುರ ಶರಣರು, ಗಣ್ಯರಾದ ಎಂ.ಬಿ. ಹಂಗರಗಿ, ಬಿ.ಪಿ. ಹಳ್ಳೂರ, ಎಫ್. ಆರ್. ಪಾಟೀಲ, ಎಂ.ಬಿ. ಯಲಿಗಾರ, ಶೇಖರಯ್ಯ ಹಿರೇಮಠ, ಅಶೋಕ ಬರಗುಂಡಿ, ಶೇಕಣ್ಣ ಕವಳಿಕಾಯಿ, ಪ್ರಕಾಶ ಅಸುಂಡಿ, ಬಸವರಾಜ ಹಿರೇಹಡಗಲಿ, ಎನ್.ಎಂ. ಪವಾಡಿಗೌಡ್ರ, ಗುರುಬಸವೇಶ್ವರ ಟ್ರಸ್ಟ್ ಸದಸ್ಯರು, ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸದಸ್ಯರು, ಬಸವ ಭಕ್ತರು, ಶ್ರೀಮಠದ ಭಕ್ತರು ಸುತ್ತಮುತ್ತಲಿನ ಗ್ರಾಮಸ್ಥರು, ಬೇಲೂರು ಗ್ರಾಮದ ಗುರು ಹಿರಿಯರು ಇದ್ದರು.

ಬೆಳಿಗ್ಗೆ 5 ಗಂಟೆಗೆ ಲಿಂಗೈಕ್ಯ ಬಸವಪ್ರಸಾದ ಶಿವಯೋಗಿಗಳ ಕರ್ತೃ ಗದ್ದುಗೆಗೆ ‘ವಚನಾಭಿಷೇಕ’, ಪುಷ್ಪಾಲಂಕರ ಹಾಗೂ ಮಹಾಮಂಗಳಾರತಿ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
1 Comment
  • ಓಂಶ್ರೀಗುರುಬಸವಲಿಂಗಾಯನಮಃ
    ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜನ್ಮ ತಪೋಭೂಮಿಹೊಸಕೇರಿಬಸವನಗರ ಅಂಚೆ.ಮು ತಿಮ್ಮಾಪೂರ ತಾ.ರಾಮದುರ್ಗ ಜಿ.ಬೆಳಗಾವಿ ಶ್ರೀ ಮ.ನಿ.ಪ್ರ.ಸ್ವ.ಜ. ಮುರುಘರಾಜೇಂದ್ರ ಕೋರಣೇಶ್ವರ ಮಹಾಸ್ವಾಮಿಗಳು ಹೊಸಕೇರಿಬಸವನಗರ
    ಹೊನ್ನು ಹೆಣ್ಣು ಮಣ್ಣು ಬಿಡಿಸದ ಗುರಿವಿನ ಉಪದೇಶನೊಲ್ಲೆ, ರೋಷ ಹರುಷವ ಕೆಡಿಸದ ಲಿಂಗಕ್ಕೆ ದಾಸೋಹವ ಮಾಡೆ, ಪರಮಾನಂದವಲ್ಲದ ಪಾದೋದಕವ ಕೊಳ್ಳಿ, ಪರಿಣಾಮವಲ್ಲದ ಪ್ರಸಾದವನುಣ್ಣೆ, ಆನೆಂಬುದನಳಿಯದ ಈಶ್ವರೀಯ ವರದ ಮಹಾಲಿಂಗನನೇನೆಂದೆಂಬೆ!ಗುರುಪಥವ ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜೀವನ ದರ್ಶನ ಮಾಡಲಗೇರಿಯ ಹಿರೇಮಠಾಧ್ಯಕ್ಷರಾದ ಶ್ರೀಚನ್ನಬಸವಯ್ಯನವರಿಂದ ವಿಶ್ವ ವಚನ ಸಾಹಿತ್ಯ ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜನ್ಮ ತಪೋಭೂಮಿಹೊಸಕೇರಿಬಸವನಗರ

Leave a Reply

Your email address will not be published. Required fields are marked *