ಕ್ವೀನ್ ಬೀ ಮಹಿಳಾ ಸಂಘದಿಂದ ಫಕ್ಕಿರೇಶ್ವರ ಮಠದಲ್ಲಿ ಬಸವ ಜಯಂತಿ
ಶಿಗ್ಗಾವಿ:
12 ನೇ ಶತಮಾನದ ಸಂಸತ್ತಾಗಿದ್ದ ‘ಅನುಭವ ಮಂಟಪದ’ ಜಾತಿ, ಲಿಂಗಭೇಧವಿಲ್ಲದೆ ಎಲ್ಲರಿಗೂ ಮುಕ್ತವಾಗಿ ಮಾತನಾಡಲು ಅವಕಾಶ ನೀಡಿದ ಮೊದಲ ವೇದಿಕೆ ಎಂದು ಹಾವೇರಿ ಜಿಲ್ಲಾ ಸ್ವಸಹಾಯ ಉದ್ಯೋಗ ಶಿಬಿರದ ಪ್ರಧ್ಯಾಪಕರಾದ ಮಂಜುಳಾ ಸಂಕಣ್ಣವರ ಹೇಳಿದರು.

ತಾಲೂಕಿನ ಬಂಕಾಪುರ ಪಟ್ಟಣದಲ್ಲಿನ ಕ್ವೀನ್ ಬೀ ಮಹಿಳಾ ಸಂಘವು ಶ್ರೀ ಫಕ್ಕಿರೇಶ್ವರ ಮಠದಲ್ಲಿ ಆಯೋಜಿಸಿದ್ದ ‘ವಿಶ್ವಗುರು ಬಸವಣ್ಣನವರ ಜಯಂತಿ’ಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
12 ನೇ ಶತಮಾನದಲ್ಲಿ ಬಸವಣ್ಣನವರು ನೀಡಿದ ಅಕ್ಷರ ಜ್ಞಾನದಿಂದ ಇಂದು ನಾವು ಉತ್ತಮ ಹುದ್ದೆ ಮತ್ತು ಪದವಿಯಲ್ಲಿ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದರು.

ನಾವಿಂದು ಆಚರಿಸುತ್ತಿರುವ ಬಸವ ಜಯಂತಿ ಕೇವಲ ಒಂದು ಹಬ್ಬವಲ್ಲ, ಇದು ಜಗಜ್ಯೋತಿ ಬಸವಣ್ಣನವರ ಮಹಾನ್ ಜೀವನ ಮತ್ತು ಕ್ರಾಂತಿಕಾರಿ ವಿಚಾರಗಳಿಗೆ ನಾವು ಸಲ್ಲಿಸುವ ಗೌರವ ಮತ್ತು ಕೃತಜ್ಞತೆ ಎಂದು ಕ್ವೀನ್ ಬೀ ಮಹಿಳಾ ಸಂಘದ ಅಧ್ಯಕ್ಷರಾದ ಅನ್ನಪೂರ್ಣ ಶೆಟ್ಟರ ಅವರು ತಿಳಿಸಿದರು.

ಕ್ವೀನ್ ಬೀ ಮಹಿಳಾ ಸಂಘದ ಸದಸ್ಯರು ಆರಂಭದಲ್ಲಿ ವಚನ ಗಾಯನ ಮಾಡಿದರು. ರೂಪ ಪಾಟೀಲ ಸ್ವಾಗತಿಸಿದರು. ರೂಪಾ ಕಟಗಿಮಠ ವಂದಿಸಿದರು. ಸುಧಾ ಆರ್. ಮಾಮಲೆಪಟ್ಟಣಶೆಟ್ಟರ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಪುರಸಭೆಯ ಕಾರ್ಯಕರ್ತರು ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು.
ಕ್ವೀನ್ ಬೀ ಮಹಿಳಾ ಸಂಘದ ಗೌರವಾನ್ವಿತ ಅಧ್ಯಕ್ಷರು ಸುಜಾತಾ ಮಾಮಲೆಪಟ್ಟಣಶೆಟ್ಟರ, ನೀಲಕ್ಕಾ ಹರವಿ, ಖಜಾಂಚಿ ನಿರ್ಮಲಾ ಮಾಮಲೆಪಟ್ಟಣಶೆಟ್ಟರ, ಪ್ರೇಮಾ ಗೊಣೆಪ್ಪನವರ, ಲೀಲಾ ಬಡ್ಡಿ ಮತ್ತು ಅನೇಕರು ಭಾಗಿಯಾಗಿದ್ದರು.

👍