ಬೆಂಗಳೂರು
ಲಿಂಗಾಯತ ಧರ್ಮ ಅಧ್ಯಯನ ಕೇಂದ್ರದ ಶ್ರೀಶೈಲ ಜಿ. ಮಸೂತೆ ಅವರಿಗೆ ಸೆಂಟ್ರಲ್ ಕ್ರಿಶ್ಚಿಯನ್ ಯುನಿವರ್ಸಿಟಿಯ “ಗೌರವ ಡಾಕ್ಟರೇಟ್ -2026” ಲಭಿಸಿದೆ.
ಮಸೂತೆ ಅವರು “ದ ಫೀಲ್ಡ್ ಆಫ್ ಬಸವ ಫೀಲಾಸಫಿ ಅಂಡ್ ಹ್ಯೂಮನ್ ಸರ್ವಿಸ್” ಎಂಬ ಪ್ರಬಂಧಕ್ಕೆ ಸೆಂಟ್ರಲ್ ಕ್ರಿಶ್ಚಿಯನ್ ಯೂನಿವರ್ಸಿಟಿಯು ನವದೆಹಲಿಯಲ್ಲಿ ಈಚೆಗೆ ನಡೆದ ಘಟಿಕೋತ್ಸವದಲ್ಲಿ “ಡಾಕ್ಟರೇಟ್” ಪದವಿ ನೀಡಿ ಗೌರವಿಸಿದೆ.
ಶ್ರೀಶೈಲ ಅವರ ಸಾಧನೆಗೆ ರೀಡ್ಸ್ ಸಂಸ್ಥೆ ಮುಖ್ಯಸ್ಥರು, ಸಿಬ್ಬಂದಿಗಳು, ಹಿತೈಷಿಗಳು, ಬಂಧು ಮಿತ್ರರು, ಸ್ನೇಹಿತರು ಅಭಿನಂದಿಸಿದ್ದಾರೆ.

