ವಿಜಯಪುರದಲ್ಲಿ ಇಂದಿನಿಂದ ನಾಲ್ಕು ದಿನಗಳ ಶರಣತತ್ವ ಕಮ್ಮಟ

ವಿಜಯಪುರ :

ಲಿಂಗೈಕ್ಯ ಶರಣೆ ಪುಟ್ಟಮ್ಮ ಮತ್ತು ಲಿಂಗೈಕ್ಯ ಶರಣ ಬಸವರಾಜಪ್ಪ ಅಜ್ಜಂಪುರಶೆಟ್ರು ಸೇವಾಟ್ರಸ್ಟ್ ಮತ್ತು ಬಸವಬಳಗ ದಾವಣಗೆರೆ ಇವರು ಆಯೋಜಿಸಿರುವ 22ನೇ ಶರಣತತ್ವ ಕಮ್ಮಟ ಇಲ್ಲಿನ ವೀರಶೈವ ಲಿಂಗಾಯತ ಸಾಂಸ್ಕೃತಿಕ  ಸಮುದಾಯ ಭವನದಲ್ಲಿ ಅಕ್ಟೋಬರ್ 29 ರಿಂದ ನವೆಂಬರ್ 1 ರವರೆಗೆ ನಡೆಯಲಿದೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ನೀಲಮ್ಮನ ಬಳಗ, ಅಕ್ಕನ ಬಳಗ, ರಾಷ್ಟ್ರೀಯ ವೀರ ಗಣಾಚಾರ ಸಂಘ, ವಿಜಯಪುರ, ಬಸವ ಮಹಾಮನೆ ಸಮಿತಿ, ಮುದ್ದೇಬಿಹಾಳ, ಬಸವ ಕೇಂದ್ರ, ಜಮಖಂಡಿ ಮತ್ತು ಮರೆಗುದ್ದಿ ಈ ಎಲ್ಲ ಬಸವಪರ ಸಂಘಟನೆಗಳ ಸಹಕಾರದಲ್ಲಿ ಕಮ್ಮಟ ಹಮ್ಮಿಕೊಳ್ಳಲಾಗಿದೆ.

ಅ.29 ರ ಸಾಯಂಕಾಲ 6:30ರಿಂದ  ನ. 1 ಮಧ್ಯಾಹ್ನ 1:30 ಗಂಟೆಯವರೆಗೆ ಕಮ್ಮಟದ ಕಾರ್ಯಕ್ರಮಗಳು ನಡೆಯುತ್ತವೆ.

ಕಾರ್ಯಕ್ರಮಗಳ ವಿವರ ಕೆಳಗಿನಂತಿದೆ.

ಪ್ರತಿದಿನ ಬೆಳಿಗ್ಗೆ 6.30 ರಿಂದ 8 ಗಂಟೆಯವರೆಗೆ ಶಿವಯೋಗ    ಪ್ರಾತ್ಯಕ್ಷಿಕೆಯನ್ನು ಪೂಜ್ಯ ಗುರುಮಹಾಂತ ಸ್ವಾಮೀಜಿ, ವಿಜಯಮಹಾಂತೇಶ್ವರಮಠ, ಇಳಕಲ್ ಅವರು ನಡೆಸಿಕೊಡಲಿದ್ದಾರೆ.

ನಂತರ  8 ರಿಂದ 9 ಗಂಟೆಯವರೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಪಥಸಂಚಲನ ನಡೆಯಲಿದೆ.

29ರ ಸಂಜೆ 6.30 ಕ್ಕೆ ಷಟಸ್ಥಲ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಚಾಲನೆಗೊಳ್ಳಲಿದೆ.

ಉದ್ಘಾಟನಾ ಸಮಾರಂಭ ಸಂಜೆ 7 ಗಂಟೆಯಿಂದ ಪ್ರಾರಂಭವಾಗುತ್ತದೆ. ಅಧ್ಯಕ್ಷತೆಯನ್ನು ಶರಣೆ ಭುವನೇಶ್ವರಿ ತಾಯಿ, ಅಧ್ಯಕ್ಷರು ಬಸವ ಬಳಗ ದಾವಣಗೆರೆ ವಹಿಸಲಿದ್ದಾರೆ.

ನಂತರ “ಸಾರ್ಥಕ ಬದುಕಿಗಾಗಿ ಶರಣ ಧರ್ಮ” ಕುರಿತು ಮನಗುಳಿಯ ಪೂಜ್ಯ ವಿರತಿಶಾನಂದ ಸ್ವಾಮೀಜಿ ಅನುಭಾವ ನೀಡಲಿದ್ದಾರೆ. ಮತ್ತೊಬ್ಬ ಅನುಭಾವಿ ಜೆ. ಎಸ್. ಪಾಟೀಲ, ವಿಜಯಪುರ ಅವರು ” ಶರಣರ ದೃಷ್ಟಿಯಲ್ಲಿ ದೇವರ ಸ್ವರೂಪ ” ಕುರಿತು ಉಪನ್ಯಾಸ ನೀಡಲಿದ್ದಾರೆ.

30ರಂದು ಬೆಳಿಗ್ಗೆ 10 ರಿಂದ 11 ಗಂಟೆ ಅನುಭಾವ ಪಾಠ 1, ವಿಷಯ : “ಕಾಣುವ ಸೃಷ್ಟಿ ಮಿಥ್ಯವೇ? ” (ವಚನಗಳಲ್ಲಿ ಸೃಷ್ಟಿಯ ಸ್ವರೂಪ )

ವಿಷಯ ಪ್ರವೇಶ ಶರಣೆ ಭಾರತಿ ಕೆಂಪಯ್ಯ,  ಬೆಂಗಳೂರು ಅವರು ನಡೆಸಿಕೊಡಲಿದ್ದಾರೆ. 11ರಿಂದ 11.15 ವಿಷಯದ ಕುರಿತು ಸಂವಾದ ಇರುತ್ತದೆ.

11.15 ರಿಂದ 12.15 ಅನುಭಾವ ಪಾಠ -2 ವಿಷಯ : “ಸೃಷ್ಟಿ ಮತ್ತು ಮಾನವ ಜೀವಿಯ ಸಂಬಂಧ ”  (ಮಾನವ ಜನ್ಮದ ಶ್ರೇಷ್ಠತೆ ) ವಿಷಯ ಪ್ರವೇಶ :. ಬಸವ ಕಿರಣ ಶರಣರು, ಹೊಸಪೇಟೆ ನಡೆಸಿಕೊಡಲಿದ್ದಾರೆ.

12.15 ರಿಂದ 12.30 : ವಿಷಯದ ಕುರಿತು ಸಂವಾದ 12.30 ರಿಂದ 1‌.15: ಅನುಭಾವ ಪಾಠ -3, ವಿಷಯ : “ಅರಿವಿನ ಪ್ರಜ್ಞಾ ಜಾಗೃತಿಯೇ ಗುರು”

ವಿಷಯ ಪ್ರವೇಶ : ಶರಣ ಶಶಿಧರ ಕರವೀರಶೆಟ್ಟರ, ಹುಬ್ಬಳ್ಳಿ ಮಾಡಲಿದ್ದಾರೆ. 1.15 ರಿಂದ 1.30: ವಿಷಯದ ಬಗ್ಗೆ ಸಂವಾದ  ಇರುತ್ತದೆ.

ಮಧ್ಯಾನ್ಹ 3 ರಿಂದ 4 ಗಂಟೆ ಅನುಭಾವ ಪಾಠ -4 ವಿಷಯ : “ಗುರು ತೋರಿದ ಪರಮನ ನೆಲೆಯೇ ಇಷ್ಟಲಿಂಗ ” ವಿಷಯ ಪ್ರವೇಶ : ಶರಣ ರುದ್ರೇಶ ಕಿತ್ತೂರ, ಮುದ್ದೇಬಿಹಾಳ ಮಾಡುತ್ತಾರೆ. 4 ರಿಂದ 4.15 ವಿಷಯದ ಕುರಿತು ಸಂವಾದ ನಡೆಯುತ್ತದೆ.

4.15 ರಿಂದ 4.45: ಅನುಭಾವ ಪಾಠ -5 ವಿಷಯ : “ಕಾಯ ಜೀವ ಮತ್ತು ಸೃಷ್ಟಿಯಲ್ಲಿ ಅಂತರ್ಗತವಾಗಿರುವ ಶಿವಚೇತನವೇ ಜಂಗಮ ‘

ವಿಷಯ ಪ್ರವೇಶ : ಶರಣ ಶಶಿಧರ ಕರವೀರಶೆಟ್ಟರ,  ಹುಬ್ಬಳ್ಳಿ ಮಾಡಲಿದ್ದಾರೆ. 4.45 ರಿಂದ 5.00 ವಿಷಯದ ಕುರಿತು ಸಂವಾದ ನಡೆಯುತ್ತದೆ.

ಸಂಜೆ 6 ಗಂಟೆಯಿಂದ 8 ವರೆಗೆ ಸಾರ್ವಜನಿಕ ಕಾರ್ಯಕ್ರಮ  ಜರುಗುತ್ತವೆ. ಅಧ್ಯಕ್ಷತೆಯನ್ನು ಶರಣ ಭುವನೇಶ್ವರಿ ತಾಯಿ, ಅಧ್ಯಕ್ಷರು ಬಸವ ಬಳಗ ದಾವಣಗೆರೆ ವಹಿಸಲಿದ್ದಾರೆ. ಪೂಜ್ಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ದುರದುಂಡೇಶ್ವರಮಠ ನೀಡಶೇಶಿ ಅವರು ಸಾನಿಧ್ಯ ವಹಿಸಲಿದ್ದಾರೆ. ಪೂಜ್ಯ ಕೋರಣೆಶ್ವರ  ಸ್ವಾಮೀಜಿ, ಆಳಂದ ಅವರು ಅನುಭಾವ  ನೀಡಲಿದ್ದಾರೆ. ಅತಿಥಿಗಳಾಗಿ ಡಾ. ಮಹಾಂತೇಶ ಬಿರಾದಾರ, ಸಂಪರ್ಕ ಅಧಿಕಾರಿಗಳು, ಬಿ.ಎಲ್.ಡಿ. ಸಂಸ್ಥೆ ಮತ್ತು ಡಾ. ಎಂ. ಬಿ. ಪಾಟೀಲ, ಬೃಹತ್ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ದಿ ಸಚಿವರು, ಕರ್ನಾಟಕ ಸರ್ಕಾರ.

ಮತ್ತು ಶಂಕರ ಗುಡಸ, ಬೆಳಗಾವಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಶರಣ  ನಾಡಗೌಡರು ವಹಿಸಲಿದ್ದಾರೆ.

8 ರಿಂದ 9 ಗಂಟೆ ಸಾಂಸ್ಕೃತಿಕ ಕಾರ್ಯಕ್ರಮ ಗಳು ಜರುಗುತ್ತವೆ.

31 ಶನಿವಾರ ಬೆಳಿಗ್ಗೆ 10 ರಿಂದ 11 ಗಂಟೆ ಅನುಭಾವ ಪಾಠ 6, ವಿಷಯ ” ಶಿವನ ಅಂತರ್ಗತ ಶಕ್ತಿಯ ಸ್ವರೂಪವೇ ವಿಭೂತಿ, ” ಆ ಚೇತನವನ್ನು ಎಚ್ಚರದಿಂದ ಧರಿಸಿಕೊಂಡಿರುವದೇ ರುದ್ರಾಕ್ಷಿ ” ವಿಷಯ ಪ್ರವೇಶ ಮಂಜುನಾಥ್ ನೇಗಿನಾಲ  ಮಾಡಲಿದ್ದಾರೆ.

11 ರಿಂದ 11.15 ವಿಷಯದ ಬಗ್ಗೆ ಸಂವಾದ ನಡೆಯಲಿದೆ.

11.15 ರಿಂದ 12.15 : ಅನುಭಾವ ಪಾಠ -7 ವಿಷಯ: ಶಿವಚೇತನದ ಪ್ರಹವಿಸುವಿಕೆಯ ಶಬ್ದವೇ ಮಂತ್ರ ” ವಿಷಯ ಪ್ರವೇಶ : ಮಹಾಂತೇಶ ಕುಂಬಾರ, ಕಲಬುರಗಿ  ಮಾಡಲಿದ್ದಾರೆ. 12.15  ರಿಂದ 12.30 : ವಿಷಯದ ಬಗ್ಗೆ ಸಂವಾದ ನಡೆಯುತ್ತದೆ.

12.30 ರಿಂದ 1 15 ಅನುಭಾವ ಪಾಠ -8, ವಿಷಯ : “ಲಿಂಗದ ಕರುಣೆಯೇ ಪಾದೋದಕ ಪ್ರಸಾದ” ಪ್ರವೇಶ : ಶಿವಾನಂದ ಅರಭಾವಿ, ಬೈಲಹೊಂಗಲ ಮಾಡಲಿದ್ದಾರೆ. 1.15 ರಿಂದ 1.30: ವಿಷಯದ ಕುರಿತು ಸಂವಾದ  ನಡೆಯುತ್ತದೆ.

ಮಧ್ಯಾನ್ಹ 3 ರಿಂದ 4 ಗಂಟೆ :

ಅನುಭಾವ ಪಾಠ 9, ವಿಷಯ: “ಅಂತರಂಗದ ಜ್ಞಾನ ಸುಜ್ಞಾನ ಆಗುವದು ಆಚಾರದಿಂದ ” ವಿಷಯ ಪ್ರವೇಶ : ಸಿದ್ದಣ್ಣ ಲಂಗೋಟಿ, ರಾಮದುರ್ಗ ಮಾಡಲಿದ್ದಾರೆ. 4.ರಿಂದ 4.15 ವಿಷಯದ ಕುರಿತು ಸಂವಾದ ನಡೆಯುತ್ತದೆ.

4.15 ರಿಂದ 4.45: ಅನುಭಾವ ಪಾಠ -10  ವಿಷಯ :”ಅಷ್ಟಾಂಗ ಯೋಗ ಮತ್ತು ಇಷ್ಟಲಿಂಗಯೋಗಗಳ ತುಲನಾತ್ಮಕ ವಿಮರ್ಶೆ ” (ಷಟಸ್ಥಳ ಮಾರ್ಗ ಚರ್ಚೆ) ವಿಷಯ ಪ್ರವೇಶ : ಗಿರೀಶ ನೀಲಕಂಠಮಠ ಮಾಡಲಿದ್ದಾರೆ. 4.45 ರಿಂದ 5 ರವರೆಗೆ ವಿಷಯದ ಕುರಿತು ಸಂವಾದ  ನಡೆಯುತ್ತದೆ.

ಸಂಜೆ 6 ಗಂಟೆಯಿಂದ 8, ಸಾರ್ವಜನಿಕ ಕಾರ್ಯಕ್ರಮ ನಡೆಯುತ್ತದೆ. ಸಮ್ಮುಖವನ್ನು ಪೂಜ್ಯ ಬಸವಲಿಂಗ ಸ್ವಾಮೀಜಿ, ಜ್ಞಾನಯೋಗಾಶ್ರಮ ವಿಜಯಪುರ ವಹಿಸಲಿದ್ದಾರೆ.

ಅತಿಥಿಗಳಾಗಿ ಶರಣ ಡಾ. ಎಂ. ಬಿ. ಪಾಟೀಲರು, ಬೃಹತ್ ಕೈಗಾರಿಕಾ ಹಾಗು ಮೂಲಸೌಕರ್ಯ ಅಭಿವೃದ್ದಿ ಸಚಿವರು, ಕರ್ನಾಟಕ ಸರ್ಕಾರ ಆಗಮಿಸಲಿದ್ದಾರೆ. ವಿಷಯ : ” ಅನುಭಾವದ ಅತಿಥಿಯಾಗಿ ಶರಣ ನಿತಿನ್ ಕಲ್ಯಾಣಕುಮಾರ ಸಾಫ್ಟ್ವೆರ್ ಇಂಜಿನಿಯರ್, ಬೆಂಗಳೂರು ರವರು ಆಗಮಿಸಿ, “ಲಿಂಗಾಯತರಲ್ಲಿ ಬಸವ ಪ್ರಜ್ಞೆ ಜಾಗೃತಿ” ಕುರಿತು ಮಾತನಾಡಲಿದ್ದಾರೆ. ಸ್ಥಳೀಯ ಹಿರಿಯರು ಅತಿಥಿಗಳಾಗಿ ಆಗಮಿಸಲಿದ್ದಾರೆ.

8 ರಿಂದ 9 ಗಂಟೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ನವೆಂಬರ್ 01 ರವಿವಾರ

ಬೆಳಿಗ್ಗೆ 10 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಅಧ್ಯಕ್ಷತೆಯನ್ನು ಶರಣ ಶಂಭುಲಿಂಗಪ್ಪ ಅಜ್ಜಂಪುರಶೆಟ್ರು ವಹಿಸಲಿದ್ದಾರೆ. “ಮಾನವೀಯತೆಯ ಮಹಾ ಸಂಪದವೇ ಬಸವತತ್ವ ”  ಎನ್ನುವ ವಿಷಯದ ಕುರಿತು ಮಹಾಂತಪ್ರಭು ಸ್ವಾಮೀಜಿ, ಶೇಗುಣಿಸಿ ಅವರು  ಅನುಭಾವ ನೀಡಲಿದ್ದಾರೆ. ಸಿಂಧನೂರಿನ ಪಿ. ರುದ್ರಪ್ಪ ಅವರು ಲಿಂಗಾಯತ ಧರ್ಮದ ವಿಶೇಷತೆಗಳ ಬಗ್ಗೆ ಅನುಭಾವ ಹಂಚಿಕೊಳ್ಳಲಿದ್ದಾರೆ. ಸ್ಥಳೀಯ ಪ್ರಮುಖರು ಅತಿಥಿಗಳಾಗಿ ಆಗಮಿಸಲಿದ್ದಾರೆ.

ನಂತರ ಶಿಬಿರಾರ್ಥಿಗಳು, ಶಿಬಿರದ ಅನಿಸಿಕೆಗಳನ್ನು  ಹಂಚಿಕೊಳ್ಳುತ್ತಾರೆ.

ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಿದೆ. ಷಡಕ್ಷರಿ ಎ.ಬಿ. 9844486030, ಓಂಕಾರಪ್ಪ ಎ. ಬಿ. 9741154005, ಪಿ. ರುದ್ರಪ್ಪ 7619695365.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಸಂಕಿರಣ ಹಾಗೂ ಒಳ್ಳೆಯ ಅನುಭವ.ಜೈಬಸವ

Leave a Reply

Your email address will not be published. Required fields are marked *