ಜೂನ್ 13, ಸಂಜೆ 7 ಗಂಟೆಗೆ ಸಂವಾದ
ಬೆಂಗಳೂರು
ಬಸವಾದಿ ಶರಣರ ಪುಣ್ಯಭೂಮಿ ಬಸವಕಲ್ಯಾಣದಲ್ಲಿ ಜಗತ್ತಿನ ಮೊದಲ ಸಂಸತ್ತು, 12ನೇ ಶತಮಾನದ ಅನುಭವ ಮಂಟಪವನ್ನು ಮರುಸ್ಥಾಪಿಸುವ ಐತಿಹಾಸಿಕ ಕಾರ್ಯ ಭರದಿಂದ ನಡೆದಿದೆ.
750 ಕೋಟಿ ವೆಚ್ಚದ ಈ ಬೃಹತ್ ಸ್ಮಾರಕ ಮುಂದಿನ ಬಸವ ಜಯಂತಿ ಒಳಗೆ ಉದ್ಘಾಟನೆಯಾಗಲಿದೆಯೆಂದು ಸಚಿವ ಈಶ್ವರ ಖಂಡ್ರೆ ಭರವಸೆ ಕೊಟ್ಟಿದ್ದಾರೆ.
ಈ ಕಟ್ಟಡ ಸ್ಥಾವರವಾಗದೆ ಜಂಗಮವಾಗಬೇಕಾದರೆ ಅದರ ಸದ್ಬಳಕೆಯಾಗಬೇಕು, ಅಲ್ಲಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಕಟ್ಟಡದ ನಿರ್ವಹಣೆ ಶ್ರದ್ದೆ, ಭಕ್ತಿಯಿಂದ ನಡೆಯಬೇಕು.
ಇವೆಲ್ಲಾ ಸರಕಾರದ ಮೇಲೆ ಬಿಡುವ ಕಾರ್ಯಗಳಲ್ಲ. ಇಷ್ಟು ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುವ ಸಾಮರ್ಥ್ಯ ಸರಕಾರ ಕಳೆದುಕೊಂಡಿದೆ.
ನಾಡಿನ ವಿರಕ್ತ ಮಠಾಧೀಶರು, ಬಸವ ಸಂಘಟನೆಗಳು, ಬಸವಪರ ಸಂಘಟನೆಗಳು, ಬಸವ ಭಕ್ತರು, ಅಭಿಮಾನಿಗಳು ಮನಸ್ಸುಗಳನ್ನು ಬೆಸೆದುಕೊಂಡು ಕೈಜೋಡಿಸಿದರೆ ಮಾತ್ರ ಇದು ಸಾಧ್ಯ. ಸಿಖ್ಖರು ಸುವರ್ಣ ಮಂದಿರ ನಿರ್ವಹಿಸುತ್ತಾ ಇರುವಂತೆ, ಬಸವ ಅನುಯಾಯಿಗಳು ಅನುಭವ ಮಂಟಪ ನಿರ್ವಹಿಸಬೇಕು.
ಈ ಕೆಲಸದಲ್ಲಿ ನಾವು ವಿಫಲವಾದರೆ ಬಸವಣ್ಣನವರಿಗೆ ಜನಿವಾರ ಹಾಕಲು ಬಂದಿರುವವರು ಅನುಭವ ಮಂಟಪದ ಮೇಲೂ ಕೇಸರಿ ಧ್ವಜ ಹಾರಿಸಲು ಪ್ರಯತ್ನಿಸುತ್ತಾರೆ.
ಈ ಮಹತ್ವದ ವಿಷಯ ಚರ್ಚಿಸಲು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಅವರ ಜೊತೆ ಜೂನ್ 13 ಗೂಗಲ್ ಮೀಟ್ ನಡೆಯಲಿದೆ.
ಬಸವ ರೇಡಿಯೋ ತಂಡದ ಎಚ್ ಎಂ ಸೋಮಶೇಖರಪ್ಪ ಹಾಗೂ ಅಪರ್ಣ ವಾಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಎಲ್ಲರಿಗೂ ಸ್ವಾಗತ.
ದಿನಾಂಕ: ಜೂನ್ 13
ಸಮಯ: ರಾತ್ರಿ 7-8
ಚರ್ಚೆಯಲ್ಲಿ ಭಾಗವಹಿಸಲು ಗೂಗಲ್ ಮೀಟ್ ಲಿಂಕ್
https://meet.google.com/xnv-saep-kcx
ನಿವೃತ ಐಎಎಸ್ ಅಧಿಕಾರಿ ಜಾಮದಾರ್ ಅವರು ಶರಣ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ಸಲ್ಲಿಸಿದ್ದಾರೆ. ಹೆಸರಾಂತ ವಿದ್ವಾಂಸರು ಆಗಿರುವ ಇವರು ಲಿಂಗಾಯತ ಇತಿಹಾಸ ಹಾಗೂ ಧರ್ಮದ ಬಗ್ಗೆ ಹಲವಾರು ಪುಸ್ತಗಳನ್ನು ಬರೆದಿದ್ದಾರೆ.
ಇತ್ತೀಚೆಗೆ ಇವರು ಬಸವ ಮೀಡಿಯಾದಲ್ಲಿ ಅನುಭವ ಮಂಟಪದ ಮೇಲೆ ಲೇಖನಗಳ ಸರಣಿಯನ್ನೂ ಬರೆದಿದ್ದಾರೆ.
ಅನುಭವ ಮಂಟಪ ಸ್ಥಾವರವಾಗದೆ, ಜಂಗಮವಾಗಲಿ – ಭಾಗ 1
ಅನುಭವ ಮಂಟಪ: ಸಾಮಾನ್ಯ ಪ್ರವಾಸಿ ಸ್ಥಳವಾಗಬಾರದು – ಭಾಗ 2
ಅನುಭವ ಮಂಟಪದಲ್ಲಿ ಮಾಡಬೇಕಾದ ಕಾರ್ಯಕ್ರಮಗಳು – ಭಾಗ 3
ಬಸವ ಸ್ವಯಂಸೇವಕರಿಂದ ಅನುಭವ ಮಂಟಪದ ನಿರ್ವಹಣೆಯಾಗಲಿ – ಭಾಗ 4
ಸಿಖ್ಖರ ಸುವರ್ಣ ಮಂದಿರದಂತೆ ಅನುಭವ ಮಂಟಪ ನಿರ್ವಹಣೆಯಾಗಲಿ – ಭಾಗ 5
ಅನುಭವ ಮಂಟಪದ ಮೇಲೆ ಬಸವ ವಿರೋಧಿಗಳ ಕೆಂಗಣ್ಣಿದೆ – ಭಾಗ 6
ಅನುಭವ ಮಂಟಪ: ವಿರಕ್ತ ಮಠಗಳು ನೇತೃತ್ವ ವಹಿಸಲಿ – ಭಾಗ 7
ಅನುಭವ ಮಂಟಪ: ಸಂವಿಧಾನ ರಕ್ಷಣಾ ವೇದಿಕೆಯಾಗಲಿ – ಭಾಗ 8

ಸಮಸ್ತ ಬಸವಾದಿ ಶರಣರ ಅಭಿಮಾನಿಗಳಿಗೆ ಫಾಲನೇತ್ರ ಮಾಡುವ ಶರಣು ಶರಣಾರ್ಥಿಗಳು 🙏
ಮಾನ್ಯರು ಹಾಗು ಹಿರಿಯ ನಿವೃತ್ತ ಅಧಿಕಾರಿಗಳಾದ ಶ್ರೀ ಶಿವಾನಂದ ಜಾಮದಾರ್ ಸಾಹೆಬರು ತಮ್ಮ ಅಧಮ್ಯ ಅಸಕ್ತಿಯೂಂದಿಗೆ ತಮ್ಮ ಇಳಿ ವಯಸ್ಸಿನಲ್ಲಿಯೂ ಸಹತಮ್ಮಕಾಯ ವಾಚ. ಮನಸ್ಸರ್ಪೂಕವಾಗಿ
ಶರಣ ರ್ಧಮಕ್ಕಾಗಿ ಮೀಸಲಿರಿಸಿ ದುಡಿಯುತ್ತಲಿರುವುದು ತಮಗೆಲ್ಲ ತಿಳಿದಿರುವ ಸಂಗತಿ.
ಸರ್ಕಾರದಿಂದ ನಿರ್ಮಾಣವಾಗುತ್ತಲಿರುವ ಬಸವ ಕಲ್ಯಾಣದಲ್ಲಿನ ಅಙುಭವ ಮಂಟಪದ ಸಮಗ್ರ ಸದ್ದ್ಬಳಕೆಗಾಗಿ ಶರಣ ಸಮಾಜ ಅನುಸರಿಸ ಬೇಕಾದ ದ್ಯನಂದಿನ ಹಾಗು ವಿಶೇಷ ಕಾರ್ಯಕ್ರಮಗಳ ಕುರಿತಂತೆ ನಾವುಗಳೆಲ್ಲರು ಸಹಮತದಿಂದ ಐಕ್ಯತಾಭಾವ ಪ್ರರ್ದಶಿಸುವ ಅಗತ್ಯತೆ ಇಂದು ನಮ್ಮಲ್ಲರ ಸಮಗ್ರ ಒಳಿತಿಗಾಗಿ ಅವಶ್ಯವಿರುತ್ತದೆ..
ಅಲ್ಪ ಕಾಲೀನ, ಮದ್ಯಮ ಕಾಲೀನ ಹಾಗು ಧೀರ್ಘ ಕಾಲೀನ ರೊಪು ರೇಷೇಗಳು ರೊಪಿಸಿ ಮುಂದುವರೆಯ ಬೇಕಾಗುವುದು..ಈ ಸಂಬಂದ ಕರಡು ಕಾರ್ಯ ಯೋಜನೆಯ ವಿವರಗಳನ್ನು ಸಮಾಜದ ಸಹಮತಿಗಾಗಿ ಪ್ರಕಟಿಸುವಂತೆ ತಮ್ಮಗಳಲ್ಲಿ ನಮನ ರ್ಪೂವಕವಾಗಿ ವಿನಂತಿಸಿಕೋಳ್ಳುತ್ತೇನೆ.
ಧನ್ಯವಾದಗಳು ಹಾಗು ಶರಣುಗಳು
ಫಾಲನೇತ್ರ.🙏
ತುಂಬಾ ಸಂತೋಷದ ವಿಷಯ ಲಿಂಗಾಯತರ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕಾದ ತುರ್ತು ಇದೆ.ಗ್ರಂಥ ಸಾಹೇಬ್ ಗೆ ಸಿಖ್ ಜನತೆ ನೀಡುವ ಗೌರವವನ್ನು ವಚನ ಸಾಹೇಬ್ ಗೆ ಲಿಂಗಾಯತರು ನೀಡುವಂತಾಗಲಿ.