ಶರಣ ಸಾಹಿತ್ಯದ ಬೆಳವಣಿಗೆಗೆ ತೊಡಗಬೇಕು
ಮುದ್ದೇಬಿಹಾಳ:
ಬಸವಾದಿ ಶರಣರ ವಚನಗಳು ಜನಸಾಮಾನ್ಯರಿಗೆ ತಿಳಿಸುವಲ್ಲಿ ಹಾಗೂ ಸಮಾಜ ಪರಿವರ್ತನೆ ಕಾರ್ಯದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಅರವಿಂದ ಹೂಗಾರ ಹೇಳಿದರು.
ಅವರು ಸ್ಥಳೀಯ ಸರ್ಕಾರಿ ನೌಕರರ ಸಭಾಭವನದಲ್ಲಿ ಆಯೋಜಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ತಾಲೂಕ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಬೆಳವಣಿಗೆಯಲ್ಲಿ ಪರಮಾನಂದ ಮಸ್ಕಿ, ಚಂದ್ರಶೇಖರ ಇಟಗಿ ಹಾಗೂ ಬಸವರಾಜ ನಾಲತ್ವಾಡ ಅವರ ಕೊಡುಗೆ ಮತ್ತು ಶ್ರಮ ಅಪಾರವಿದೆ ಎಂದರು.
ಮುಂಬರುವ ದಿನಗಳಲ್ಲಿ ಹೆಚ್ಚು ದತ್ತಿನಿಧಿ ಸಂಗ್ರಹಿಸಿ ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ಶರಣ ಸಾಹಿತ್ಯದ ಬೆಳವಣಿಗೆಗೆ ತೊಡಗಬೇಕೆಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಚಂದ್ರಶೇಖರ ನಾಗರಾಳ, ನಾನು ಅಧಿಕಾರ ಮತ್ತು ಪ್ರತಿಷ್ಠೆಗಾಗಿ ಅಧ್ಯಕ್ಷನಾಗಿಲ್ಲ. ತಾಲೂಕಿನ ಶರಣ ಬಳಗದ ಒತ್ತಾಯಕ್ಕೆ ಹಾಗೂ ಶರಣ ಸಾಹಿತ್ಯದ ಪ್ರಚಾರಕ್ಕಾಗಿ ಈ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಬಸವ ಭಕ್ತರ ಆಶಯದಂತೆ ಪರಿಷತ್ತಿನ ನಿಯಮಗಳಿಗೆ ಬದ್ಧನಾಗಿ ಶರಣರನ್ನು ಮತ್ತು ಸಾಹಿತ್ಯವನ್ನೂ ಬೆಳೆಸಲು, ಪ್ರಚಾರಗೊಳಿಸಲು ಶ್ರಮಿಸುವುದಾಗಿ ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಬಸವರಾಜ ನಾಲತ್ವಾಡ ಮಾತನಾಡಿ, 10 ವರ್ಷ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದಕ್ಕೆ ಸಾರ್ಥಕವೆನಿಸಿತು. ಶರಣ ಧರ್ಮ ಪಾಲನೆಗೆ ಹಾಗೂ ಶರಣ ಸಾಹಿತ್ಯದ ಅಭಿರುಚಿ ಬೆಳಸಿಕೊಳ್ಳಲು ಅವಕಾಶ ಒದಗಿಸಿದ ತಾಲೂಕಿನ ಶರಣರಿಗೆ ಕೃತಜ್ಞನಾಗಿದ್ದೇನೆ ಎಂದರು.
ಬಸವ ಮಹಾಮನೆ ಸಮಿತಿ ಅಧ್ಯಕ್ಷ ಎಸ್. ಎ. ಬೇವಿನಗಿಡದ ಸೇರಿದಂತೆ ನಗರದ ಹಿರಿಯರಾದ ಚಂದ್ರಶೇಖರ ಇಟಗಿ, ವಿ.ಡಿ. ಐಹೊಳೆ, ಅಶೋಕ ಮಣಿ, ಬಿ. ಎಂ. ಹಿರೇಮಠ, ರುದ್ರೇಶ ಕಿತ್ತೂರು, ಬಾಪೂಗೌಡ ಪಾಟೀಲ, ಸಂಗಣ್ಣ ಕಂಚ್ಯಾಣಿ, ಸಂಗಣ್ಣ ಶಿವಣಗಿ, ಎಂ.ಬಿ. ಪಾಟೀಲ, ಎಸ್.ಆರ್. ಗೌಡರ, ಅಶೋಕ ತಡಸದ, ಎಂ.ಎಸ್. ಬಿರಾದಾರ, ಬಿ. ಎಂ. ರಾಂಪುರ, ಬಿ.ಎನ್. ಚೌಡಾಪುರ, ಪ್ರಕಾಶ ನರಗುಂದ, ಪ್ರಭು ಕಡಿ, ಇತರರು ಪಾಲ್ಗೊಂಡಿದ್ದರು.
ಪದಾಧಿಕಾರಿಗಳ ಪದಗ್ರಹಣ:

ಗೌರವ ಅಧ್ಯಕ್ಷರಾಗಿ ಸಂಗಣ್ಣ ಕಂಚ್ಯಾಣಿ, ಅಧ್ಯಕ್ಷರಾಗಿ ಚಂದ್ರಶೇಖರ ನಾಗರಾಳ, ಉಪಾಧ್ಯಕ್ಷರಾಗಿ ಬಾಪೂಗೌಡ ಪಾಟೀಲ, ಆರ್. ಎಚ್. ಸಜ್ಜನ, ಸಂಗಮೇಶ ಶಿವಣಗಿ, ಪ್ರಧಾನ ಕಾರ್ಯದರ್ಶಿ ಆಗಿ ಜಿ. ಎನ್. ಹಂಡರಗಲ್ಲ, ಕೋಶಾಧ್ಯಕ್ಷರಾಗಿ ಎಸ್.ಎ. ಬೇವಿನಗಿಡದ, ಸಹಕಾರ್ಯದರ್ಶಿಯಾಗಿ ಎಂ. ಬಿ. ಗುಡಗಂಟಿ, ಎನ್.ಆರ್. ಮೊಕಾಶಿ, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಬಿ. ಪಾಟೀಲ, ಎಚ್.ಬಿ. ದಳವಾಯಿ, ಧತ್ತಿ ಸಂಚಾಲಕರಾಗಿ ಎಸ್.ಆರ್. ಗೌಡರ, ಶ್ರೀಶೈಲ ಕತ್ತಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ.ಎಸ್. ಮೇಟಿ, ಬಸವರಾಜ ಲಿಂಗದಹಳ್ಳಿ, ಶಿವನಗೌಡ ಲಿಂಗದಹಳ್ಳಿ, ರವಿ ಬಿರಾದಾರ, ಸಿದ್ದನಗೌಡ ಕಾಶಿನಕುಂಟಿ, ಭೀಮಣ್ಣ ಹಡಪದ, ವಿರೇಶ ಢವಳಗಿ ಪದಗ್ರಹಣ ಮಾಡಿದರು.
ಕದಳಿ ವೇದಿಕೆ ಅಧ್ಯಕ್ಷರಾಗಿ ಕಾಶಿಬಾಯಿ ರಾಂಪುರ, ಯುವ ಘಟಕದ ಅಧ್ಯಕ್ಷರಾಗಿ ಸಿದ್ದನಗೌಡ ಬಿಜ್ಜುರ ಆಯ್ಕೆಯಾದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE
