ರಾಷ್ಟ್ರೀಯ ಬಸವದಳದಿಂದ ಯೋಗ ದಿನಾಚರಣೆ

ರವಿ ಪಾಪಡೆ
ರವಿ ಪಾಪಡೆ

ಬೀದರ:

ಕೋಳಾರ ಕೆ. ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ ಮತ್ತು ಶ್ರೀ ಬಸವ ಸಿರಿ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಹುಡಗೆ ಗುಂಡಪ್ಪ ಅವರು ಯೋಗದ ಬಗ್ಗೆ ಮಾತನಾಡುತ್ತಾ, ಭಾರತದಲ್ಲಿ ೫ ಸಾವಿರ ವರ್ಷಗಳಿಂದ ಮಹರ್ಷಿ ಪತಂಜಲಿ ಅವರಿಂದ ಯೋಗ ಪ್ರಾರಂಭವಾದ ಬಗ್ಗೆ ಮತ್ತು ಯೋಗದ ಹಂತಗಳ ಬಗ್ಗೆ ಹಾಗೂ ಅದರ ಪ್ರಯೋಜನಗಳ ಬಗ್ಗೆ, ಇಂದಿನ ತಾಂತ್ರಿಕ ಯುಗದಲ್ಲಿ ಇದರ ಅವಶ್ಯಕತೆ ಬಗ್ಗೆ ಸಂಕ್ಷಿಪ್ತ ಮಾಹಿತಿ ತಿಳಿಸಿ ಪ್ರಾತ್ಯಕ್ಷಿಕವಾಗಿ ಕೆಲವು ಯೋಗಾಸನ ಪ್ರಾಣಾಯಾಮ ಹಾಗೂ ಸೂರ್ಯ ನಮಸ್ಕಾರವನ್ನು ನೆರೆದಿರುವ ಎಲ್ಲರಿಂದ ಮಾಡಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳಾದ ರವಿ ಶಂಭು, ನೀಲಕಂಠ ಪಾಪಡೆ, ಅಮೃತಪ್ಪ ನಾವದಗೇರಿ, ಮಾರುತೆಪ್ಪ ಪಾಪಡೆ, ಅರ್ಜುನಪ್ಪ ವಡಗಾಂವ, ರಾಮಶೆಟ್ಟಿ ಸಿದ್ದೇಶ್ವರ, ರಮೇಶ ಖ್ಯಾಮಾ, ಶ್ರೀ ಬಸವ ಸಿರಿ ಟ್ರಸ್ಟ್ ನ ಅದ್ಯಕ್ಷರಾದ ಶೈಲಜಾ ಹುಡಗೆ, ಭಕ್ತಿ ನಿರಂಕಾರ ತುಪ್ಪದ, ಮಹಾನಂದಾ ಪಾಪಡೆ, ರವಿ ಪಾಪಡೆ, ಕವಿತಾ ಶಂಭು, ರವಿ ಶಂಭು, ರೇಖಾ ವಿಶ್ವನಾಥ ಪಾಪಡೆ ಸೇರಿದಂತೆ ಅನೇಕ ಶರಣೆಯರು ಹಾಗೂ ಮುದ್ದು ಮಕ್ಕಳು ಭಾಗವಹಿಸಿದ್ದರು.

ರವಿ ಪಾಪಡೆ ಅವರು ಆರಂಭಕ್ಕೆ ವಾರದ ಸಾಮೂಹಿಕ ಬಸವ ಪ್ರಾರ್ಥನೆಯನ್ನು ಮಾಡಿಸಿ, ಪ್ರಾಸ್ತಾವಿಕವಾಗಿ ಮಾತಾಡಿ ಕಾರ್ಯಕ್ರಮವನ್ನು ಸುಸೂತ್ರವಾಗಿ ಸಂಚಾಲನೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *

ರಾಜ್ಯ ಸಂಘಟನಾ ಕಾರ್ಯದರ್ಶಿ, ರಾಷ್ಟ್ರೀಯ ಬಸವ ದಳ