ವಚನ ಪ್ರಸಾದ ಗ್ರಂಥ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ:

‘ವಚನ ಪ್ರಸಾದ’ ಗ್ರಂಥ ಲೋಕಾರ್ಪಣೆ ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಸಾನಿಧ್ಯದಲ್ಲಿ ನಡೆಯಿತು.

ಶರಣೆ ಸುಶೀಲಾಬಾಯಿ ಶರಣ ವೈಜಿನಾಥ ಉಪ್ಪಿನ್, ಬೀದರ ಇವರ ಮೊಮ್ಮಗಳಾದ ವಚನಾ (ಶರಣೆ ವಿದ್ಯಾ ಶರಣ ಬಸವ ಉಪ್ಪಿನ ಇವರ ಮಗಳು) ಜಾವಳ ಕಾರ್ಯಕ್ರಮದಲ್ಲಿ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಸಂಪಾದಿತ ‘ವಚನ ಪ್ರಸಾದ’ ಗ್ರಂಥ ಲೋಕಾರ್ಪಣೆ ಮಾಡಲಾಯಿತು.

ಸಾನಿಧ್ಯ ವಹಿಸಿ ಮಾತನಾಡಿದ ಪಟ್ಟದ್ದೇವರು, ಮಕ್ಕಳಿಗೆ ವಚನಗಳು ಕಲಿಸಬೇಕು, ವಚನಗಳು ಒಳ್ಳೆಯ ಸಂಸ್ಕಾರ ನೀಡುತ್ತವೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಬೆಳೆಯುತ್ತವೆ. ಮಕ್ಕಳ ವ್ಯಕ್ತಿತ್ವ ವಿಕಸನವಾಗುತ್ತದೆ. ವಚನಗಳಿಂದ ಮಕ್ಕಳಲ್ಲಿ ಸದಾಚಾರ, ಸದ್ಗುಣ ಅಳವಡಿಸುತ್ತದೆ. ಚಿಕ್ಕ ಮಕ್ಕಳಿದ್ದಾಗ ಮಕ್ಕಳಿಗೆ ವಚನ ಕಲಿಸಿದರೆ ಬದುಕಿನುದ್ದಕ್ಕೂ ಉಳಿಯುತ್ತವೆ. ಮರೆಯಲಿಕ್ಕೆ ಸಾಧ್ಯವಿಲ್ಲ. ಹಸಿ ಸಿಮೆಂಟ್ ಇದ್ದಾಗ ಏನಾದರೂ ಚಿತ್ರ ತೆಗೆಯಬಹುದು. ಒಣಗಿದಾಗ ಒಂದು ಸಣ್ಣ ಮೊಳೆ ನೆಡಲು ಕಷ್ಟವಾಗುತ್ತದೆ.

ಮಕ್ಕಳಿದ್ದಾಗ ವಚನಗಳು ಅವರ ಮನದಲ್ಲಿ ಒಳ್ಳೆಯ ಸಂಸ್ಕಾರ ಬಿತ್ತುತ್ತವೆ. ಬೆಂಡು ಬತ್ತಾಸೆಯಂತೆ ಮಕ್ಕಳಿಗೆ ವಚನಗಳ ಪುಸ್ತಕ ಹಂಚುವ ಸದುದ್ದೇಶದಿಂದ ಮಕ್ಕಳಿಗಾಗಿ ಸಣ್ಣ ಸಣ್ಣ ವಚನಗಳು ಆಯ್ಕೆ ಮಾಡಿ ಈ ವಚನ ಪ್ರಸಾದ ಎಂಬ ಗ್ರಂಥ ಪ್ರಕಟಿಸಲಾಗಿದೆ ಎಂದರು.

ಪೂಜ್ಯ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು. ನಿವೇದಿತಾ, ರವಿ ದೇಶಮುಖ, ಡಾ. ಸುಗಲಾದೇವಿ, ಅಂಗರಾಜ ಉಪ್ಪಿನ, ವಿನಾಯಕ, ಅರುಣ, ಸಂತೋಷ ಹಡಪದ ಮುಂತಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *