ಹಳಕಟ್ಟಿ ಬರದಿದ್ದರೆ ಲಿಂಗಾಯತರು ಈಗ ಹೇಗಿರುತ್ತಿದ್ದರು? (ಗೂಗಲ್ ಮೀಟ್)

ಬಸವ ಮೀಡಿಯಾ
ಬಸವ ಮೀಡಿಯಾ

ಜೂಲೈ 3, ಸಂಜೆ 8 ಗಂಟೆಗೆ ಡಾ. ವಿಜಯ್‌ ಕುಮಾರ್‌ ಬೋರಟ್ಟಿ ಚಿಂತನೆ

ಬೆಂಗಳೂರು

ವಚನ ಪಿತಾಮಹ ಫ.ಗು. ಹಳಕಟ್ಟಿಯವರ ಸಾಧನೆಯ ಮಹತ್ವವನ್ನು ಗ್ರಹಿಸಬೇಕಾದರೆ ಅವರು ಬರದಿದ್ದರೆ ಇಂದು ಲಿಂಗಾಯತರು ಹೇಗಿರುತ್ತಿದ್ದರು ಎಂದು ಊಹಿಸಿಕೊಳ್ಳಬೇಕು.

ಅವರು ಬರುವ ಮುನ್ನ ಲಿಂಗಾಯತ ತನ್ನ ತತ್ವ, ಪರಂಪರೆ ಮರೆತು ಕಡು ಸಂಪ್ರದಾಯವಾದಿಗಳ ನೆರಳಿನಲ್ಲಿ ಬದುಕುತ್ತಿತ್ತು. ಎಲ್ಲಾ ಒಳ ಸಮುದಾಯಗಳನ್ನು ಲಿಂಗಾಯತರು ಎಂದು ಒಪ್ಪಿಕೊಳ್ಳಲೂ ಅವರು ತಯಾರಿರಲಿಲ್ಲ.

ಲಿಂಗಾಯತರ ಹೆಸರಿನಲ್ಲಿ ನಡೆಯುತ್ತಿದ್ದ ಯಾವುದೇ ಕಾರ್ಯಕ್ರಮದಲ್ಲಿ ವಚನಗಳ ಸುಳಿವೂ ಇರುತ್ತಿರಲಿಲ್ಲ. ವೈದಿಕ ಗ್ರಂಥ, ಸಿದ್ದಾಂತಗಳ ಮೇಲೆ ಆಗಿನ ಚರ್ಚೆ, ಸಂವಾದಗಳು ನಡೆಯುತ್ತಿದ್ದವು.

ಹಳಕಟ್ಟಿ ವಚನಗಳ ಶೋಧನೆ ಮಾತ್ರ ಮಾಡಲಿಲ್ಲ. ಅವುಗಳಲ್ಲಿದ್ದ ಭಿನ್ನ, ವಿಶಿಷ್ಟ, ಮಾನವೀಯ ಮೌಲ್ಯಗಳನ್ನು ಗ್ರಹಿಸಿದವರಲ್ಲಿಯೂ ಮೊದಲಿಗರು.

ಆಗಿನ ಕಾಲದ ಲಿಂಗಾಯತರು ಶ್ರೇಷ್ಠ ವರ್ಣವೆನಿಸಿಕೊಳ್ಳಲು ಸಂಸ್ಕೃತ, ವೇದಗಳನ್ನು ಬಾಯಿಪಾಠ ಮಾಡಿಕೊಂಡು ಬ್ರಾಹ್ಮಣರೊಂದಿಗೆ ಪೈಪೋಟಿಗೆ ಇಳಿದಿದ್ದರು.

ಆ ಸನ್ನಿವೇಶದಲ್ಲಿ ವಚನಗಳನ್ನು ಶೋಧಿಸುವುದು, ಪ್ರಕಟಿಸುವುದು, ಅವುಗಳ ಪ್ರಗತಿಪರ ಚಿಂತನೆಯನ್ನು ಪ್ರತಿಪಾದಿಸುವುದು ಕಡಿಮೆ ಸಾಹಸವಾಗಿರಲಿಲ್ಲ.

ಅದನ್ನು ಮಾಡಲು ಹಳಕಟ್ಟಿ ತೆತ್ತ ಬೆಲೆ ನೆನಸಿಕೊಂಡರೆ ಇಂದೂ ಕಣ್ಣಲ್ಲಿ ನೀರು ಬರುತ್ತದೆ.

ಆದರೆ ಹಠ ಬಿಡದೆ ಅವರು ‘ಲಿಂಗಾಯತ’ಕ್ಕೆ ಹೊಸ ಅರ್ಥ ನೀಡುವಲ್ಲಿ ಯಶಸ್ವಿಯಾದರು. ಬಸವಾದಿ ಶರಣರನ್ನು, ಬಸವ ತತ್ವವನ್ನು ಮರೆತ್ತಿದ್ದ ಜನರಿಗೆ ದಾರಿದೀಪವಾದರು.

ಇಂದು ನಾವು ಕಾಣುತ್ತಿರುವ ಲಿಂಗಾಯತ ಮನಸ್ಥಿತಿ ಹಳಕಟ್ಟಿ ಕೊಟ್ಟ ಕೊಡುಗೆ. ಅವರು ಬರದಿದ್ದರೆ ನಮ್ಮ ಹಿಂದಿನವರಂತೆ ನಾವೂ ಗಂಟೆ ಹೊಡೆದುಕೊಂಡು ಕತ್ತೆ ಕುರಿಗಳಂತೆ ಬದುಕುತ್ತಿದ್ದೆವು.

ಜೂನ್ 3, ಸಂಜೆ 8 ಗಂಟೆಗೆ ಡಾ. ವಿಜಯ್‌ ಕುಮಾರ್‌ ಬೋರಟ್ಟಿ ಈಗಿನ ಲಿಂಗಾಯತದ ಬೆಳವಣಿಗೆಗೆ ಹಳಕಟ್ಟಿಯವರ ಬೌದ್ಧಿಕ, ತಾತ್ವಿಕ ಕೊಡುಗೆಯ ಪರಿಚಯ ಮಾಡಿಕೊಡಲಿದ್ದಾರೆ.

ಡಾ. ಬೋರಟ್ಟಿ ಕನ್ನಡದ ಪ್ರಮುಖ ವಿದ್ವಾಂಸರು, ಸಂಶೋಧಕರು ಹಾಗೂ ವಿಮರ್ಶಕರು。 ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಹಳಕಟ್ಟಿಯವರನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ.

ಈ ಗೂಗಲ್ ಮೀಟನ್ನು ಬಸವ ರೇಡಿಯೋದ ಎಚ್ ಎಂ ಸೋಮಶೇಖರಪ್ಪ, ಅಪರ್ಣ ವಾಲಿ, ಸುರೇಖಾ ಧಮ್ಮೂರ ನಡೆಸಿಕೊಡಲಿದ್ದಾರೆ.

ಮರೆಯದೆ ಬನ್ನಿ.

ಗೂಗಲ್ ಮೀಟ್

ವಿಷಯ: 'ಲಿಂಗಾಯತ'ದ ಕಲ್ಪನೆ ಬದಲಿಸಿದ ಹಳಕಟ್ಟಿ

ದಿನ: ಜೂಲೈ 3

ಸಮಯ: 8 ಗಂಟೆ

ಲಿಂಕ್: https://meet.google.com/qur-quxi-jrh

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *