ಪಂಚ ಕಮಿಟಿಯವರು ನಮ್ಮನ್ನು ಮತ್ತೆ ಹೊರಗಿಡುತ್ತಿದ್ದಾರೆ: ಹಡಪದ ಸ್ವಾಮೀಜಿ

‘ಪೂಜ್ಯ ಬಸವಲಿಂಗ ಪಟ್ಟದ್ದೇವರಿಗೆ ಏನಾದರೂ ಘೇರಾವ್ ಮಾಡಲೆತ್ನಿಸಿದರೆ ನಾವೇನೂ ಸುಮ್ಮನೆ ಕೂರುವುದಿಲ್ಲ.’

ತಂಗಡಗಿ

ಕಳೆದ ವಾರ ಬಸವ ಕಲ್ಯಾಣ ಬಸವೇಶ್ವರ ದೇವಸ್ಥಾನದ ಪಂಚ ಕಮಿಟಿಯವರು ಪತ್ರಿಕಾಗೋಷ್ಠಿ ನಡೆಸಿ ಅರಿವಿನ ಮನೆಯಲ್ಲಿ ಹಡಪದ ಅಪ್ಪಣ್ಣನವರ ಗವಿ ಇರುವ ಯಾವುದೇ ಕುರುಹುಗಳಿಲ್ಲ, ಹಾಗಾಗಿ ಯಾರಿಗೂ ಒಂದಿಂಚು ಜಾಗ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಬಸವ ಮೀಡಿಯಾದ ರವೀಂದ್ರ ಹೊನವಾಡ ಅವರ ಜೊತೆ ಮಾತನಾಡಿ ಪೂಜ್ಯ ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

1) ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯವರು ಇದು ಅಪ್ಪಣ್ಣನವರ ಗವಿ ಎನ್ನಲು ಯಾವುದೇ ದಾಖಲೆ ಅಥವಾ ಕುರುಹು ಇಲ್ಲ ಎನ್ನುತ್ತಾರೆ ಇದಕ್ಕೆ ತಮ್ಮ ಪ್ರತಿಕ್ರಿಯೆ?

ಪಂಚ ಕಮಿಟಿಯವರು ಜಾತಿವಾದಿಗಳಂತೆ ಕೆಲಸ ಮಾಡುತ್ತಿದ್ದಾರೆ ಅಂತ ಅನಿಸುತ್ತಿದೆ. ಇಲ್ಲಿಯವರೆಗೆ ಕಮಿಟಿ ಆಯ್ಕೆಯ ಚುನಾವಣೆ ಮುಗಿಯಲಿ, ಚುನಾವಣೆ ಆದಮೇಲೆ ಎಲ್ಲ ಸರಿ ಮಾಡೋಣ ಎಂಬ ಮಾತು ಕೊಟ್ಟಿದ್ದರು. ಆದರೀಗ ಅವರ ಮಾತಿನ ವರಸೆ ಬದಲಾಗಿದೆ.

ಬಸವಕಲ್ಯಾಣದಲ್ಲಿ ಎಲ್ಲ ಶರಣರ ಅರಿವಿನ ಗವಿಗಳು ಇದ್ದಾವೆ. ಅದರಂತೆ ಅಪ್ಪಣ್ಣನವರ ಗವಿಯು ಇತ್ತು.

ಹಡಪದ ಅಪ್ಪಣ್ಣನವರ ಅರಿವಿನ ಮಹಾಮನೆ ಎಂಬ ಫಲಕ ಮೊದಲು ಇದ್ದರೂ, ಸರಕಾರದಿಂದ ಅಭಿವೃದ್ಧಿ ಮಾಡುತ್ತೇವೆ ಎಂಬ ನೆಪದಲ್ಲಿ ಕೆಲವು ಅಧಿಕಾರಿಗಳು ಅದನ್ನು ಅಳಿಸಿ ಹಾಕಿರುವ ಕೆಲಸ ಮಾಡಿದ್ದಾರೆ.

ಪಂಚ ಕಮಿಟಿಯವರು ಜಾತಿವಾದಿಗಳಂತೆ ಕೆಲಸ ಮಾಡುತ್ತಿದ್ದಾರೆ ಅಂತ ಅನಿಸುತ್ತಿದೆ.

ಭಾಲ್ಕೀಯ ಬಸವಲಿಂಗ ಪಟ್ಟದ್ದೇವರು, ಹುಲಸೂರು ಶಿವಾನಂದ ಶ್ರೀಗಳು ಬಾಲಕರಾಗಿದ್ದಾಗಿನಿಂದಲೂ ಅರಿವಿನ ಮನೆ, ಗವಿ ನೋಡಿದ್ದು, ಅಲ್ಲೇ ತಿರುಗಾಡಿದ್ದು ಇದೆ. ಅವರೆಲ್ಲಾ ಅಲ್ಲಿ ಹಡಪದ ಅಪ್ಪಣ್ಣನವರ ಅರವಿನ ಮಹಾಮನೆ ಇತ್ತು ಎಂದೇ ಹೇಳುತ್ತಾರೆ.

ಬೆಲ್ದಾಳ ಸಿದ್ಧರಾಮ ಶರಣರು, ಅಕ್ಕ ಗಂಗಾಂಬಿಕೆ ತಾಯಿಯವರು ಸೇರಿದಂತೆ ಎಲ್ಲರೂ ಅಪ್ಪಣ್ಣನವರ ಅರಿವಿನ ಮನೆ ಅಲ್ಲಿಯೇ ಇರುವದು ಎಂದು ಹೇಳ್ತಾ ಇದ್ದಾರೆ.

ಅಪ್ಪಣ್ಣ ಗವಿಗೆ ಚ್ಯುತಿ ಆಗದಂತೆ ನಾವು ನೋಡಿಕೊಳ್ಳುತ್ತೇವೆ, ಹೋರಾಡುತ್ತೇವೆ.

ಅಪ್ಪಣ್ಣ ಗವಿಗೆ ಚ್ಯುತಿ ಆಗದಂತೆ ನಾವು ನೋಡಿಕೊಳ್ಳುತ್ತೇವೆ, ಹೋರಾಡುತ್ತೇವೆ

2) ಡಾ. ಬಸವಲಿಂಗ ಪಟ್ಟದೇವರು ಬಸವಕಲ್ಯಾಣಕ್ಕೆ ಬಂದರೆ ಘೇರಾವ್ ಹಾಕುವ ಬೆದರಿಕೆ ಬಂದಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ.

ಬಸವಲಿಂಗ ಪಟ್ಟದ್ದೇವರು ನಮ್ಮ ಸಮಾಜದ ಬೇಡಿಕೆಯ ಜೊತೆಗಿದ್ದಾರೆ. ನಮಗೆಲ್ಲಾ ಆಶೀರ್ವಾದ ಮಾಡ್ತಾ ಇದ್ದಾರೆ. ಹಡಪದ ಅಪ್ಪಣ್ಣನವರ ಇತಿಹಾಸ ಉಳಿಯಬೇಕು. ಉಳಿದೆಲ್ಲ ಶರಣರ ಇತಿಹಾಸವೂ ಉಳಿಯಬೇಕು ಎಂಬುದು ಅವರ ಇಚ್ಛೆಯಾಗಿದೆ. ಅಂದು ಯಾರನ್ನು ಸಮಾಜದಲ್ಲಿ ಹೊರಗಿಡಲಾಗಿತ್ತೋ ಅಂತಹವರನ್ನೆಲ್ಲ ಬಸವಣ್ಣ ಒಳಗೆ ಕರೆದುಕೊಂಡರು. ಅವರನ್ನೆಲ್ಲಾ ನಮ್ಮವರು ಎಂದರು.

ಆದರೆ ಈಗ ಈ ಪಂಚ ಕಮಿಟಿಯವರು ನಮ್ಮನ್ನು ಮತ್ತೆ ಹೊರಗಿಡುವಂತಹ ಕೆಲಸ ಮಾಡುತ್ತಾ ಇದ್ದಾರೆ, ಇದು ಎಂದಿಗೂ ಸಲ್ಲದು.

ಪೂಜ್ಯ ಬಸವಲಿಂಗ ಪಟ್ಟದ್ದೇವರಿಗೆ ಕಮಿಟಿಯವರು ಏನಾದರೂ ಘೇರಾವ್, ಮತ್ತೇನಾದರೂ ಮಾಡಲೆತ್ನಿಸಿದರೆ ನಾವೇನೂ ಸುಮ್ಮನೆ ಕೂರುವುದಿಲ್ಲ. ಇಡೀ ಕರ್ನಾಟಕದ ನಮ್ಮ ಸಮಾಜದವರನ್ನು ಹಾಗೂ ಬಸವ ಅನುಯಾಯಿಗಳನ್ನು ಕರೆದುಕೊಂಡು ಬಂದು ಪ್ರತಿಭಟಿಸುತ್ತೇವೆ.

ಇಡೀ ಕರ್ನಾಟಕದ ನಮ್ಮ ಸಮಾಜದವರನ್ನು ಹಾಗೂ ಬಸವ ಅನುಯಾಯಿಗಳನ್ನು ಕರೆದುಕೊಂಡು ಬಂದು ಪ್ರತಿಭಟಿಸುತ್ತೇವೆ.

ಬಸವಲಿಂಗ ಪಟ್ಟದ್ದೇವರು ಸಮಾಜದ ಸ್ವಾಸ್ಥ್ಯವನ್ನು ಸರಿ ಮಾಡುತ್ತ ಇದ್ದಾರೆ. ಎಲ್ಲ ಶರಣರ ಅಸ್ತಿತ್ವ ಉಳಿಸುವ ಕೆಲಸ ಮಾಡ್ತಾ ಇದ್ದಾರೆ. ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂತವರಿಗೆ ಯಾರಾದರು ಘೇರಾವ್ ಹಾಕ್ತೀವಿ ಅಂಥ ಹೇಳ್ತಾ ಇದ್ದಾರಂದ್ರೆ ಇವರು ಯಾವ ಮನಸ್ಥಿತಿಯಲ್ಲಿದ್ದಾರೆ ಎಂಬುದನ್ನು ನೀವೇ ವಿಚಾರ ಮಾಡಿ.

3) ಆರು ತಿಂಗಳ ಹಿಂದಿನ ವಿವಾದ ಈಗೇಕೆ ಮತ್ತೆ ಮುನ್ನೆಲೆಗೆ ಬಂದಿದೆ. ಅಂತಹ ಬೆಳವಣಿಗೆಗಳು ಏನಾಗಿವೆ?

ಭಾಲ್ಕಿ ಪಟ್ಟದ್ದೇವರು, ಶಿವಾನಂದ ಶ್ರೀಗಳು, ಬೆಳಗಾವಿಯ ನಮ್ಮ ಸಮಾಜದ ಬಾಂಧವರು – ಇವರೆಲ್ಲರೂ ತಾಳ್ಮೆಯಿಂದ ಕಾದು ನೋಡೋಣ ಎಂದಿದ್ದರು.

ಅದರ ನಡುವೆ ಪಂಚ ಕಮಿಟಿಯವರು ಸುದ್ದಿಗೋಷ್ಠಿ ಮಾಡಿದ್ದಾರೆ.

4) ಪಂಚ ಕಮಿಟಿಯವರು ಯಾಕೆ ವಿರೋಧ ಮಾಡುತ್ತಿದ್ದಾರೆ?

ಪಂಚ ಕಮಿಟಿಯವರು ಬಸವಣ್ಣನವರ ಆಶಯಕ್ಕೆ ವಿರುದ್ಧವಾಗಿ ಹೊರಟಿದ್ದಾರೆ. ಬಸವಣ್ಣ ಎಲ್ಲರನ್ನು ಇವನಮ್ಮವ ಇವನಮ್ಮವ ಅಂತ ಹೇಳಿದ್ರೆ, ಇವರು ನಮ್ಮವರಲ್ಲ ನಮ್ಮವರಲ್ಲ ಎಂದು ಹೇಳುತ್ತಾ ಹೊರಟಿದ್ದಾರೆ.

ಇವರ ಉದ್ದೇಶ ನಾವಿನ್ನೂ ತಿಳಿಯಬೇಕಿದೆ. ನಾವು ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೆಚ್ಚು ತಿಳಿದು ಮಾತಾಡುತ್ತೇವೆ.

ಪಂಚ ಕಮಿಟಿಯವರು ಬಸವಣ್ಣನವರ ಆಶಯಕ್ಕೆ ವಿರುದ್ಧವಾಗಿ ಹೊರಟಿದ್ದಾರೆ.

ನಾವು ಈ ಹಿಂದೆಯೇ ಜಿಲ್ಲಾಧಿಕಾರಿಗಳಿಗೂ, ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮನವಿಪತ್ರ ಕೊಟ್ಟು ಬಂದದ್ದು ಇದೆ. ನಾನೀಗ ಬೆಂಗಳೂರಲ್ಲಿ ಇರುವೆ. ಇವತ್ತು ಈಗಾಗಲೇ ಮುಖ್ಯಮಂತ್ರಿಗಳನ್ನು ಸಹ ಭೇಟಿಯಾಗಿರುವೆ. ಅವರಿಗೆಲ್ಲ ಈ ಅರಿವಿನ ಮನೆ, ಅಪ್ಪಣ್ಣ ಗವಿಯ ವಿಷಯ ಮನವರಿಕೆ ಮಾಡಿ, ಸಮಾಜದ ಬೇಡಿಕೆಗೆ ಸಂಬಂಧಿಸಿದ ಮನವಿಪತ್ರ ಕೊಟ್ಟು ಬಂದಿರುವೆ.

5) ಈ ವಿವಾದದಲ್ಲಿ ನಿಮಗೆ ಹೇಗೆ ಬೆಂಬಲ ದೊರೆತಿದೆ. ನಿಮ್ಮ ಮುಂದಿನ ಕ್ರಮಗಳೇನು?

ಬಸವ ತತ್ವನಿಷ್ಠರು, ಬಸವಾನುಯಾಯಿಗಳು, ಬಸವ ಸಂಘಟನೆಗಳು, ಬಸವ ಕೇಂದ್ರಗಳು ಈಗ ಪಂಚ ಕಮಿಟಿ ಯನ್ನು ಪ್ರಶ್ನಿಸಬೇಕು. ಅವರುಗಳಿಂದ ಇನ್ನೂ ದೊಡ್ಡ ಪ್ರಮಾಣದ ಬೆಂಬಲ ನಿರೀಕ್ಷಿಸುತ್ತಿದ್ದೇವೆ. ಅವರು ತಟಸ್ಥವಾಗಿರಬಾರದು.

ಬಸವ ಸಂಘಟನೆಗಳಿಂದ ಇನ್ನೂ ದೊಡ್ಡ ಪ್ರಮಾಣದ ಬೆಂಬಲ ನಿರೀಕ್ಷಿಸುತ್ತಿದ್ದೇವೆ. ಅವರು ತಟಸ್ಥವಾಗಿರಬಾರದು.

ಅದಾದರೆ ಮಾತ್ರ ಬಸವಾದಿ ಶರಣರ ಅಸ್ತಿತ್ವ ಉಳಿಯುತ್ತೆ. ಇಲ್ಲಾಂದ್ರೆ ಬಸವ ಕಲ್ಯಾಣ ಪಟ್ಟಭದ್ರರು, ಉಳ್ಳವರ ಪಾಲಾಗಿ ಶರಣರ ಅಸ್ತಿತ್ವ ಅಳಿಸಿಹೋಗುತ್ತದೆ.

ಎಲ್ಲಿ ಅಪ್ಪಣ್ಣ ಇಲ್ಲ ಅಲ್ಲಿ ಬಸವಣ್ಣ ಇಲ್ಲ. ಬಸವಣ್ಣ ಇಲ್ಲ, ಅಪ್ಪಣ್ಣ ಇಲ್ಲ ಅಂದ್ರೆ ಕಲ್ಯಾಣವೇ ಇಲ್ಲ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
1 Comment
  • ನಿಜದ ಮಾತು ಹೇಳಿದ್ದಿರಿ ನಿಮಗೆ ನಮ್ಮ ಬೆಂಬಲ 👍🏻👏🏻ಶರಣು 👏🏻👏🏻

Leave a Reply

Your email address will not be published. Required fields are marked *