ಅನುಭವ ಮಂಟಪಕ್ಕೆ ವೈದಿಕ ಹೆಸರು ಇಡುವ ಯಾವುದೇ ಆದೇಶವಿಲ್ಲ: ಅಧಿಕಾರಿ ಸ್ಪಷ್ಟನೆ

ಬಸವ ಮೀಡಿಯಾ
ಬಸವ ಮೀಡಿಯಾ

‘ಧರ್ಮ’, ‘ಅರ್ಥ’, ‘ಕಾಮ’, ‘ಮೋಕ್ಷ’ ಹೆಸರುಗಳನ್ನು ಇಡಲಾಗುತ್ತಿದೆ ಎನ್ನುವುದು ಗಾಳಿ ಸುದ್ದಿ

ಬೆಂಗಳೂರು

ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪದ ನಾಲ್ಕು ಪ್ರವೇಶ ದ್ವಾರಗಳಿಗೆ ವೈದಿಕ ಹೆಸರುಗಳನ್ನು ಇಡುವ ಆದೇಶವನ್ನು ಡಿ.ಕೆ. ಶಿವಕುಮಾರ್ ಸರಕಾರ ಹೊರಡಿಸಿದೆ ಎನ್ನುವ ಮಾತು ಹರಿದಾಡುತ್ತಿದೆ.

ಈ ‘ಸುದ್ದಿ’ಯ ಪ್ರಕಾರ ಹಿಂದೂ ಧರ್ಮದ ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳನ್ನು ನಾಲ್ಕು ದ್ವಾರಗಳಿಗೆ ಇಡಲಾಗುತ್ತಿದೆ.

ಇಂದು ಬಸವ ಮೀಡಿಯಾದ ಜೊತೆ ಮಾತನಾಡಿದ ಹಿರಿಯ ಸರಕಾರಿ ಅಧಿಕಾರಿಯೊಬ್ಬರು ಇದು ಸುಳ್ಳು ಸುದ್ದಿ ಎಂದು ಖಂಡಿಸಿ ಆ ರೀತಿಯ ಯಾವುದೇ ಆದೇಶವನ್ನು ಕಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ನೂತನ ಅನುಭವ ಮಂಟಪದ ದ್ವಾರಗಳಿಗೆ ಮೂಲ ಯೋಜನೆಯಂತೆಯೇ ಶರಣ ಪರಂಪರೆಯ ಪಂಚಾಚಾರದ ಹೆಸರುಗಳನ್ನೇ ಇಡಲಾಗುತ್ತಿದೆ ಎಂದು ಅವರು ಹೇಳಿದರು.

ಇದರ ಪ್ರಕಾರ ಅಲ್ಲಿನ ನಾಲ್ಕು ದ್ವಾರಗಳನ್ನು ‘ಸದಾಚಾರ’, ‘ಶಿವಾಚಾರ’, ‘ಗಣಾಚಾರ’, ‘ಭೃತ್ಯಾಚಾರ’ವೆಂದು ಕರೆಯಲಾಗುವುದು. ಮಧ್ಯದಲ್ಲಿರುವ ಇಷ್ಟಲಿಂಗಾಕಾರದ ಕಟ್ಟಡಕ್ಕೆ ‘ಲಿಂಗಾಚಾರ’ ಎಂದು ಹೆಸರಿಡಲಾಗುವುದು.

ಯಾರೋ ಅಧಿಕಾರಿಯೊಬ್ಬರು ವಿಷಯ ತಿಳಿದುಕೊಳ್ಳದೆ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದರಿಂದ ಈ ಗೊಂದಲ ಉಂಟಾಯಿತು ಎಂದು ಹೇಳಿದರು.

ಲಿಂಗಾಯತರ ಮೇಲೆ ನಡೆಯುತ್ತಿರುವ ಸಾಂಸ್ಕೃತಿಕ, ಸೈದ್ಧಾಂತಿಕ ದಾಳಿಯ ಹಿನ್ನಲೆಯಲ್ಲಿ ಅನುಭವ ಮಂಟಪದ ದ್ವಾರಗಳಿಗೆ ವೈದಿಕ ಹೆಸರು ಇಡಲಾಗುತ್ತಿದೆಯೆಂಬ ವದಂತಿ ಬಸವಾನುಯಾಯಿಗಳಲ್ಲಿ ತೀವ್ರವಾದ ಆತಂಕ ಮೂಡಿಸಿದೆ.

‘ಇದು ಸುಳ್ಳು ವದಂತಿ ಆದರೆ ಬಸವಾನುಯಾಯಿಗಳು ಜಾಗೃತರಾಗಿರುವುದು ಒಳ್ಳೆಯದು,’ ಎಂದು ಮೇಲೆ ಮಾಹಿತಿ ನೀಡಿದ ವಿಧಾನಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
4 Comments
  • ಫ.ಗು.ಹಳಕಟ್ಟಿ, ಹರ್ಡೇಕರ ಮಂಜಪ್ಪ ಭವನ ಅಂತ ಹೆಸರಿಸಬಹುದು

  • ಓಂ ಶ್ರೀಗುರುಬಸವಲಿಂಗಾಯನಮಃ
    ವಿಶ್ವಬಸವಧರ್ಮ ವಿಶ್ವಕಾಯಕ ಸತ್ಯ ಶುದ್ಧ ಪ್ರಮಾಣಿಕ ಮಾರ್ಗದರ್ಶನ ಜಂಗಮ ಸುಕ್ಷೇತ್ರ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಸೂಟಿಶ್ರೀಫಲಹಾರ ಶಿವಯೋಗಿಗಳವರ ತಪೋಭೂಮಿಹೊಸಕೇರಿಬಸವನಗರ ಅಂಚೆ.ಮು.ತಿಮ್ಮಾಪೂರ ತಾ.ರಾಮದುರ್ಗ ಜಿ. ಬೆಳಗಾವಿ.ಪ್ರಥಮ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜನ್ಮ ತಪೋಭೂಮಿಹೊಸಕೇರಿಬಸವನಗರ 01,09,1961, ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜನ್ಮ ಭೂಮಿಯಲ್ಲಿ .ಜನ್ಮ ಶ್ರೀ ಶಿವಪುತ್ರಯ್ಯ ಶಿದ್ಧಲಿಂಗಯ್ಯ ಅರಳಿಕಟ್ಟಿಮಠ ತಂದೆ. ತಾಯಿ.ಶ್ರೀ.ಮಾತೋಶ್ರೀ ಶಾರದಮ್ಮ ಶಿವಪುತ್ರಯ್ಯ ಅರಳಿಕಟ್ಟಿಮಠ ಗರ್ಭದೊಳಗಣ ಕಾರಣಿಕ ಶಿವಯೋಗಿ ವಿಶ್ವವಿಭೂತಿ ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ ಪುರಾಣ ಮಂಗಲ ಶುಭ ಸಂದರ್ಭ ವಿಶ್ವಗುರುಬಸವಣ್ಣನವರ ವಿಶ್ವಬಸವಧರ್ಮ ವಿಶ್ವಕಾಯಕ ಪ್ರತಿಜ್ಞೆಯ ಸಂಕೇತ ವಚನ ಸಾಹಿತ್ಯ ನಿಜಬದುಕಿನ ಸತ್ಯ ದರ್ಶನ ವಿಶ್ವಬಸವಧರ್ಮಜೀವನವಚನಸಂವಿಧಾನ ನಡೆ ಚನ್ನ ನುಡಿಚನ್ನ ರವಿ ಸೂರ್ಯ ಪ್ರಕಾಶದಂತೆ ಭೂಕೈಲಾಸ ಭಕ್ತರ ಅಂಗಳ ಸ್ವರ್ಗ ಆನಂದ ಸಂಭ್ರಮ ಸಂತೋಷ ಗುರುಲಿಂಗಜಂಗಮ ಪಾದೋದಕ ಪ್ರಸಾದ ಪಡೆದ ಪವಿತ್ರ ಮಹಾಚೇತನ ಪಡೆದವರು .ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜೀವನ ದರ್ಶನ ಲೇಖಕರು 1984 ರಂದು ಶ್ರೀಫಲಹಾರೇಶ್ವರ ಪ್ರೌಢಶಾಲೆಯ ಆರಂಭ ಹರಕ ಜೊಳಿಗೆ ಮುರುಕ ಬೆತ್ತ ಶ್ರೀ ಶಿವಪುತ್ರಯ್ಯ ಶಿದ್ದಲಿಂಗಯ್ಯ ಅರಳಿಕಟ್ಟಿಮಠ ಶ್ರಮ ಸೇವೆ ಶ್ರೀ ಎಸ್. ಮಲ್ಲಯ್ಯನವರ ಪ್ರೇರಣೆ ಚಿತ್ರದುರ್ಗ ಜಗದ್ಗುರುಮುರುಘರಾಜೇಂದ್ರಬೃಹನ್ಮಠ ಶ್ರೀಮನ್ಮಾಹಾರಾಜಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಕೃಪೆಯಿಂದ ಹೊಸಹಳ್ಳಿ ಹರ್ತಿ ಸೈದಾಪೂರ ಪಾದಯಾತ್ರೆಯ ಮೂಲಕ ಬೆಳಗಾವಿ.ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹೊಸಕೇರಿಬಸವನಗರ ನಿಜವಾದ ಬಸವಧರ್ಮ ಪ್ರಸಾರ ಶ್ರೀಫಲಹಾರಸ್ವಾಮಿಮಠ ಮಹಾರಥೋತ್ಸವ ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜೀವನ ಸ್ವಾರ್ಥಕತೆಯ ಮಂಥನ ಅಸೂಟಿಶ್ರೀಫಲಹಾರೇಶ್ವರ ಜೀವನ ಚರಿತ್ರೆ ರಚಿಸಿ ಭಕ್ತಿಯ ಆದರ್ಶ ಜೀವನ ಪ್ರಸಾರ ಕೀರ್ತಿ ಕಲ್ಯಾಣ ಕರ್ನಾಟಕ ವಿಭಾಗದ ಕಲಬುರಗಿ ಜಿಲ್ಲೆಯ ಆಳಂದ.ತಾಲ್ಲೂಕಿನ ಶ್ರೀಜಗದ್ಗುರುಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಅಧಿಕಾರ 15,12,1996,ಸ್ವೀಕಾರ. 15,12,197,ಪ್ರಥಮ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನ ,15,12,1998,ಮಹಿಳಾ ಚರಮೂರ್ತಿಗಳ ನೇಮಕ. ಖಂಡಾಳ ಕೋರಣೇಶ್ವರ ಚರಮೂರ್ತಿಗಳ ಅಗಲಿಕೆ ಶ್ರೀ ಚಂದ್ರಕಾಂತ ಚನ್ನಬಸಪ್ಪ ನಾಗಾ ಶ್ರೀಬಸವರಾಜ ಬಾಬಶೇಟ್ಟಿ ಶ್ರೀ ಚಂದ್ರಕಾಂತ ಹನುಮಂತಪ್ಪ ವಾರಿಕ ಅಗಲಿಕೆ ತುಂಬಾ ನೋವು ಅನುಭವಿಸಿ ಚೇತರಿಕೆಯ ಪರಿಣಾಮ ಮಹಾಮಠ ನಿರ್ಮಾಣ ಆರಂಭ ಶ್ರೀ ರೇವು ನಾಯಕ ಶಾಸಕರು ಶ್ರೀ ಸುಭಾಷ ಆರ್ ಗುತ್ತೆದಾರ ಆಳಂದ ಶ್ರೀ ರಾಮಚಂದ್ರವೀರಪ್ಪ ಲೋಕಸಭಾಸದಸ್ಯರು. ಹುಮನಾಬಾದ. ತುಲಾಭಾರ ಕಾರ್ಯಕ್ರಮ 15,12,2000 ಆಳಂದ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ. ಡಾ.ಟಿ.ಎಮ್.ಭಾಸ್ಕರ. ಕನ್ನಡ ಅಧ್ಯಯನ ಪೀಠ ಕಲಬುರಗಿ ವಿಶ್ವವಿದ್ಯಾಲಯ ದಲಿತ ಚಳವಳಿಗಾರರು. ಪ್ರಥಮ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆಯ್ಕೆ ಮಾಡಿ ಕನ್ನಡ ಸಾಹಿತ್ಯ ಪುಸ್ತಕ ರಥೋತ್ಸವ ಖಜೂರಿ ಶ್ರೀಜಗದ್ಗುರುಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಐತಿಹಾಸಿಕ ಮಹತ್ವ ಸಾಧನೆ ಪ್ರಥಮ ಕೃಷಿ ಸಾಹಿತ್ಯ ಸಮ್ಮೇಳನ. ಕನ್ನಡ ಭವನ ನಿರ್ಮಾಣ ಶ್ರೀಜಗದ್ಗುರುಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಜಾಗೆ ಕೊಡುಗೆ ಶ್ರೀ ಮುಖ್ಯಮಂತ್ರಿ ಚಂದ್ರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಮುದಾಯ ಭವನ ಆರಂಭ ಶ್ರೀ ಬಸವರಾಜ ಪಾಟೀಲ ಸೇಡಂ ಲೋಕಸಭಾ ಸದಸ್ಯರ ಅನುದಾನ ಶ್ರೀ ಬಿ ಆರ್ ಪಾಟೀಲ ಅನುದಾನ ಶ್ರೀ ರಾಮಚಂದ್ರವೀರಪ್ಪ ಲೋಕಸಭಾ ಸಂಸದರ ಅನುದಾನ ಮಹಿಳಾ ಸಮುದಾಯ ಭವನ ಕಮಲಾಪೂರ ಕ್ಷೇತ್ರದ ಶ್ರೀ ರೇವುನಾಯಕ ಶಾಸಕರ ಅನುದಾನ ಸರ್ಕಾರದಿಂದ ಅನುದಾನ ಪಡೆದು ಸಮಗ್ರ ಶ್ರೀಜಗದ್ಗುರುಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಕಟ್ಟಡ ನಂತರ ಡಾ.ಶಿವಮುರ್ತಿಮುರುಘಾಶರಣರ ದಿವ್ಯಪ್ರಕಾಶ ಅನುಗ್ರಹ ಮಠದ ಅಭಿವೃದ್ಧಿಯ ವಿಶಾಲ ಮನೋಭಾವ ಹೊಲದ ಹರಾಜ ಕ್ರಿಯೆ ಹಣದಿಂದ ಶ್ರೀಜಗದ್ಗುರುಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಅಭಿವೃದ್ಧಿ ಮಠದ ಆವರಣ ಗೋಡೆಯ ರಚನೆ . ಪ್ರಗತಿಪರ ಆಲೋಚನೆ ನಾಡು ನುಡಿ ಸಂಸ್ಕೃತಿಯ ಪ್ರತೀಕ ನಿಜಾಚರಣೆ ವಸತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆರಂಭ ನಿಜದನಿಲುವು ವಿಶ್ವ ಬಸವ ಧರ್ಮ ಬಸವಕೇಂದ್ರ ಜನಪದ ವಚನ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಶ್ರೀ ಮ.ನಿ.ಪ್ರ.ಸ್ವ.ಜ ಮುರುಘರಾಜೇಂದ್ರ ಕೋರಣೇಶ್ವರ ಮಹಾಸ್ವಾಮಿಗಳವರ ಸಾಧನೆ ಬೆಳಗು ಪುಸ್ತಕ ಡಾ.ಟಿ.ಎಮ್ ಭಾಸ್ಕರ ಕುಲಪತಿಗಳು ಕನ್ನಡ ಜನಪದ ವಿಶ್ವವಿದ್ಯಾಲಯ ಅವರಿಂದ ಶ್ರೀ ಮ.ನಿ.ಪ್ರ.ಸ್ವ.ಜ ಮುರುಘರಾಜೇಂದ್ರ ಕೋರಣೇಶ್ವರ ಮಹಾಸ್ವಾಮಿಗಳವರ ಕುರಿತು ಜೀವನ ಚರಿತ್ರೆ. ಡಾ. ಹನುಮಂತರಾವ ಭೀಮರಾವ ದೊಡ್ಡಮನಿ ಖಜೂರಿ ಶ್ರೀ ಕೋರಣೇಶ್ವರ ಕಾವ್ಯ ದರ್ಶನ ತ್ರಿಪದಿ ಪುಸ್ತಕ ಪ್ರಕಾಶನ ನಡೆ ನುಡಿ ಕಲಿಸಿದ ಶ್ರೀ ಮ.ನಿ.ಪ್ರ.ಸ್ವ.ಜ ಮುರುಘರಾಜೇಂದ್ರ ಕೋರಣೇಶ್ವರಶ್ರೀಗಳು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜನ್ಮ ಭೂಮಿಯಲ್ಲಿ ಇಸ್ಲಾಂನ ದಿವಾನ್ ಶರೀಪ ಇವರಿಗೆ ಇಷ್ಟಲಿಂಗ ದೀಕ್ಷೆಯಿಂದ ಹಿಂದು ಮುಸ್ಲಿಮರ ಭಾವೈಕ್ಯ ಶ್ರೀಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಾಂತಿಧಾಮ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಆರಹಟ್ಟಿ ಶ್ರೀ ಜಗದ್ಗುರುಮುರುಘರಾಜೇಂದ್ರ ಕೋರಣೇಶ್ವರಮಠ ಮಹಾರಥೋತ್ಸವ ಪಂಚಮಸಾಲಿ ಶ್ರೀ ತೋಟಪ್ಪ ಬಸಪ್ಪ ಹಡಗಲಿ ಚರಮೂರ್ತಿಗಳ ನೇಮಕ ಮಾಡಿ ಭವ್ಯ ಮಹಾರಥೋತ್ಸವ ನಿರ್ಮಾಣ. ಶ್ರೀ ಮಹೇಶ ಬಾಣದ ಶರಣರ ನೇಮಕ ಶ್ರೀ ಶಂಕರ ಪಾಟೀಲ ಮಾಜಿ ಶಾಸಕರ ಅನುದಾನದಿಂದ ಆರಹಟ್ಟಿ ಮಠ ನಿರ್ಮಾಣ ಪ್ರಗತಿ ಹಂತದಲ್ಲಿರುವ ಈಗ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹೊಸಕೇರಿಬಸವನಗರ ಅಸೂಟಿಶ್ರೀಫಲಹಾರ ಶಿವಯೋಗಿಗಳವರ ತಪೋಭೂಮಿ ಅಭಿವೃದ್ಧಿ ಪಥ ಲೋಕಹಿತ ವಿಶ್ವದರ್ಶನ ಕನ್ನಡ ದಿನ ಪತ್ರಿಕೆಯ ಡಾ ಎಸ್ ಎಸ್ ಪಾಟೀಲ ಇವರ ಮೂಲಕ ಅರಿವಿನ ಮಹಾಮನೆಯ ಸಂಸ್ಕಾರ ನೀಡುವ ಜ್ಞಾನ ದಾಸೋಹ ನಡೆದಿರುವುದು ಶ್ರೀಗಳವರ ಜೀವನ ಸಾಧನೆ ಆರೋಗ್ಯ ಜ್ಞಾನ ದಾಸೋಹ ತ್ರಿಕಾಲ ಇಷ್ಟಲಿಂಗ ಪೂಜಾನಿರತ ವಚನ ವಿಶೇಷ ಆಸಕ್ತಿಯಿಂದ ಪ್ರಸಾರ ಶರಣು ಶರಣಾರ್ಥಿಗಳು ಶ್ರೀ ಗೌಡಪ್ಪಗೌಡ ದ್ಯಾಮನಗೌಡ ದ್ಯಾಮನಗೌಡ್ರ. ನಿವೃತ್ತ ಶಿಕ್ಷಕರು ಅಸೂಟಿ ಪರಿಚಯ ಲೇಖಕರು ಶರಣು ಶರಣಾರ್ಥಿಗಳು 01,09,2026, ಗುರುವಂದನಾ ಕಾರ್ಯಕ್ರಮ ಸಕಲರಿಗೂ ಹಾರ್ದಿಕ ಸ್ವಾಗತ ಸಮಸ್ತ ಭಕ್ತರು ಅಸೂಟಿಶ್ರೀಫಲಹಾರ ಶಿವಯೋಗಿಗಳವರ ತಪೋಭೂಮಿಹೊಸಕೇರಿಬಸವನಗರ ಅಂಚೆ.ಮು.ತಿಮ್ಮಾಪೂರ ತಾ.ರಾಮದುರ್ಗ ಆಗಮಿಸಿ 67ನೇ ಹುಟ್ಟುಹಬ್ಬ

  • ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಬೇಡ ಕಾರಣ ಮತ್ತೆ ವೈದಿಕತೆ ನುಸಳಲಿದೆ. ಕಾರಣ ಅರಿವು, ಆಚಾರ, ಕಾಯಕ ಮತ್ತು ದಾಸೋಹ ಎನ್ನುವ ಹೆಸರಗಳನ್ನು ಇಡಿ. ಇದು ನಮ್ಮ ಕಳಕಳಿಯ ಮನವಿ. ಇಲ್ಲದಿದ್ದರೆ ಫ.ಗು.ಹಳಕಟ್ಟಿ, ಎಂ.ಎಂ. ಕಲಬುರ್ಗಿ, ಹರಡೇಕರ ಮಂಜಪ್ಪ ಮತ್ತು ರೆವರಂಡ ಉತ್ತಂಗಿ ಚನ್ನಪ್ಪನಂತಹ ಮಹಾನ ಚೇತನಗಳ ಹೆಸರಿಡಿ.

  • This time we should fiercely protect Basavanna’s Lingayat principles and teachings. We have been corrupted enough and stayed long way in being the conscionsnes that Basavanna guided us to.

Leave a Reply

Your email address will not be published. Required fields are marked *