ಮಹಾ ಅಧಿವೇಶನ: 112 ಅಡಿ ಬಸವ ಪುತ್ಥಳಿ ನಿರ್ಮಾಣಕ್ಕೆ ನೆರವಾಗಲು ಬಸವ ಭಕ್ತರಿಗೆ ಕರೆ
ಕೂಡಲಸಂಗಮ :
ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ಬಸವನಿಷ್ಠೆ, ಲಿಂಗಾಯತ ಧರ್ಮನಿಷ್ಠೆ, ವೈಚಾರಿಕ ಪ್ರಜ್ಞೆ ಇರುವವರ ಕೈಯಲ್ಲಿ ಇರಬೇಕು, ಅಂದಾಗ ಸರ್ಕಾರ ಖರ್ಚು ಮಾಡಿದ್ದು ಸಾರ್ಥಕವಾಗುತ್ತದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿದರು.
ಕೂಡಲಸಂಗಮ ಬಸವ ಧರ್ಮ ಪೀಠದಲ್ಲಿ ನಡೆದ ರಾಷ್ಟ್ರೀಯ ಬಸವ ದಳದ ಮಹಾ ಅಧಿವೇಶನ ಹಾಗೂ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಅವರ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಅವರಿಗೆ ದೂರದೃಷ್ಠಿ ಇತ್ತು. ರಾಜ್ಯದಲ್ಲಿ ದೊಡ್ಡ ದೊಡ್ಡ ಮಠಗಳು ಇದ್ದರೂ ಬಸವಣ್ಣನ ವಿದ್ಯಾಭೂಮಿ, ಐಕ್ಯಸ್ಥಳ ಕೂಡಲಸಂಗಮ, ಕಾರ್ಯಕ್ಷೇತ್ರ ಬಸವ ಕಲ್ಯಾಣವನ್ನು ಯಾರು ಅಭಿವೃದ್ಧಿ ಮಾಡದ ಕಾಲಘಟ್ಟದಲ್ಲಿ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಅವರು ಬಸವ ಧರ್ಮ ಪೀಠ ಸ್ಥಾಪಿಸಿ ಶರಣ ಮೇಳ, ಕಲ್ಯಾಣ ಪರ್ವದ ಮೂಲಕ ವಿಶ್ವಕ್ಕೆ ಬಸವಣ್ಣನ ಕ್ಷೇತ್ರಗಳನ್ನು, ವಿಚಾರಗಳನ್ನು ಪರಿಚಯಿಸಿ, ಅಭಿವೃದ್ಧಿಪಡಿಸಿದರು.
ನಂತರ ಸರ್ಕಾರ ಯೋಜನೆ ಹಾಕಿಕೊಂಡು ಅಭಿವೃದ್ಧಿ ಮಾಡಿತು. ಧರ್ಮ ಬೇರೆಯವರಿಗೆ ಹೇಳುವುದಲ್ಲ ನಾವು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಂದಿದ್ದ ಬೈಲೂರು ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಸ್ವಾಮೀಜಿ ಪೂಜ್ಯ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಅವರು ನಂಬಿದ ತತ್ವಕ್ಕೆ ಮೋಸ ಮಾಡಲಿಲ್ಲ, ಯಾರೊಂದಿಗೂ ತತ್ವಬಿಟ್ಟು ಹೊಂದಾಣಿಕೆಯಾಗಲಿಲ್ಲ, ಬುದುಕಿನುದ್ದಕ್ಕೂ ನಂಬಿದ ತತ್ವದಂತೆ ಬದುಕಿದರು. ತತ್ವ, ಸಿದ್ದಾಂತದ ಮೇಲೆಯೇ ಬಸವ ಧರ್ಮ ಪೀಠ ಕಟ್ಟಿದ್ದಾರೆ ಎಂದು ಹೇಳಿದರು.
ಇಂದು ನಾವು ಕೇವಲ ಅಭಿಮಾನಿಗಳು ಆಗುತ್ತಿದ್ದೆವೆ, ಅನುಭಾವಿಗಳು ಆಗುತ್ತಿಲ್ಲ. ಸಿಟ್ಟು ಎಂಬುದು ಒಂದು ಪುಟ, ಸಂಬಂಧ ಒಂದು ದೊಡ್ಡ ಪುಸ್ತಕ. ಪುಸ್ತಕದ ಪುಟ ಹರಿದು ಸಂಬಂಧ ಕಳೆದುಕೊಳ್ಳುವುದು ಬೇಡ, ಪುಸ್ತಕ ಇಟ್ಟುಕೊಂಡು ಸಂಬಂಧ ಉಳಿಸಿಕೊಳ್ಳೋಣ. ನಾವು ನಕಾರಾತ್ಮಕ ಆಲೋಚನೆ ಬಿಟ್ಟು ಸಕಾರಾತ್ಮಕ ಆಲೋಚನೆ ಮಾಡಬೇಕು ಎಂದರು.

ಇಲಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಅವರು ಬಸವ ತತ್ವ ಸಾಧಕರ ತಂಡಗಳನ್ನೇ ನಿರ್ಮಿಸಿದ್ದರು. ಇಂದು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಭಕ್ತರ, ಸಾಧಕರ ಪಡೆಯೇ ಇದೆ. ಕೆಲವರು ಸನ್ಯಾಸಿಗಳಾಗಿ, ಇನ್ನೂ ಕೆಲವರು ಗೃಹಸ್ಥರಾಗಿ ತತ್ವಪ್ರಚಾರ ಮಾಡುತ್ತಿದ್ದಾರೆ ಎಂದರು.
ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ ಮಾತನಾಡಿ, ಲಿಂಗಾಯತ ಮಠಾಧೀಶರ ಒಕ್ಕೂಟದ ಮೂಲಕ ಪ್ರಧಾನಮಂತ್ರಿಗಳಿಗೆ ಲಿಂಗಾಯತ ಸ್ವತಂತ್ರ ಧರ್ಮ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಮನವಿ ಕೊಡುವ ಕಾರ್ಯ ಮಾಡಬೇಕು. ಭಕ್ತರು ತತ್ವನಿಷ್ಠೆ ಇಲ್ಲದ ಶ್ರೀಗಳಿಂದ ದೂರ ಇರಬೇಕು, ಹತ್ತಿರವೇ ಸೇರಿಸಿಕೊಳ್ಳಬಾರದು, ತಿರಸ್ಕರಿಸಬೇಕು ಎಂದರು.
ಸಾನಿಧ್ಯ ವಹಿಸಿ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿ, ಬಸವಾದಿ ಶರಣತತ್ವ ಪ್ರಸಾರಕ್ಕಾಗಿಯೇ ಹುಟ್ಟಿದ್ದೆ ಬಸವ ಧರ್ಮ ಪೀಠ, ತತ್ವ ಸಿದ್ದಾಂತದಂತೆ ಕಾರ್ಯ ನಿರ್ವಹಿಸುವುದು ಎಂದರು.
ಸಮಾರಂಭದಲ್ಲಿ ಶಿರೂರ ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ, ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ, ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಮಾತೆ ಜ್ಞಾನೇಶ್ವರಿ, ಉಳವಿ ಅಕ್ಕನಾಗಲಾಂಬಿಕಾ ಪೀಠದ ಮಾತೆ ದಾನೇಶ್ವರಿ, ಬಸವ ಕಲ್ಯಾಣದ ಸಿದ್ದರಾಮೇಶ್ವರ ಸ್ವಾಮೀಜಿ, ಹೈದರಾಬಾದ ಬಸವ ಮಂಟಪದ ಅನಿಮಿಷಾನಂದ ಸ್ವಾಮೀಜಿ, ಮಾತೆ ಬಸವರತ್ನಾದೇವಿ, ಮಾತೆ ಅಕ್ಕನಾಗಲಾಂಬಿಕೆ, ಬಸವಯೋಗಿ ಸ್ವಾಮೀಜಿ, ಬಸವಕುಮಾರ ಸ್ಚಾಮೀಜಿ, ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ಚಂದ್ರಮೌಳಿ ಲಿಂಗಾಯತ ರಾಷ್ಟ್ರೀಯ ಬಸವ ದಳದ ರಾಜ್ಯಾಧಕ್ಷ ಕೆ. ವೀರೇಶ, ಮುಂತಾದವರು ಇದ್ದರು.

ಅಧಿವೇಶನದ ನಿರ್ಣಯಗಳು:
ರಾಷ್ಟ್ರೀಯ ಬಸವದಳ ಮಹಾ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳನ್ನು ರಾಷ್ಟ್ರೀಯ ಬಸವ ದಳದ ರಾಜ್ಯಾಧಕ್ಷ ಕೆ. ವೀರೇಶ, ರಾಷ್ಟ್ರೀಯ ಬಸವ ದಳದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಲಿಂಗಾಯತ ಘೋಷಿಸಿದರು.
1. ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ಉದ್ಘಾಟನೆ, ನಿರ್ವಹಣೆ ಬಸವತತ್ವ ಅನುಯಾಯಿಗಳ, ಪೂಜ್ಯರ ನೇತೃತ್ವದಲ್ಲಿ ನಡೆಯಬೇಕು.
2. ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದಿಂದ ಕೂಡಲಸಂಗಮದಲ್ಲಿ ನಿರ್ಮಾಣವಾಗುತ್ತಿರುವ ಬಸವ ಅಂತಾರಾಷ್ಟ್ರೀಯ ಕೇಂದ್ರದ ಕಾಮಗಾರಿ ಸ್ಥಗಿತಗೊಂಡಿದ್ದು, ಕಾಮಗಾರಿ ಆರಂಭಿಸಿ ಮುಂದಿನ ವರ್ಷ ಸರ್ಕಾರ ಉದ್ಘಾಟನೆ ಮಾಡಬೇಕು.
3. ಬೆಂಗಳೂರಿನ ಕುಂಬಳಗೋಡು ಬಸವ ಗಂಗೋತ್ರಿ ಆಶ್ರಮದಲ್ಲಿ ನಿರ್ಮಾಣವಾಗುತ್ತಿರುವ 112 ಅಡಿ ಬಸವ ಪುತ್ಥಳಿ ನಿರ್ಮಾಣ ಕಾರ್ಯ ಮುಕ್ತಾಯ ಮಾಡಲು ಬಸವ ಭಕ್ತರು ಸಂಕಲ್ಪ ಮಾಡಬೇಕು.
4. ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು, ಬಸವಾನುಯಾಯಿಗಳು ಚುಣಾವಣೆಯಲ್ಲಿ ಆಮಿಷಕ್ಕೆ ಒಳಗಾಗದೇ, ವಿವೇಕಯುತವಾಗಿ ಮತ ಚಲಾಯಿಸಬೇಕು.

೧೧೨ ಅಡಿ ಬಸವ ಮೂರ್ತಿ ಮಾಡುವ ಬದಲು ಅದೇ ಹಣದಲ್ಲಿ ವಚನಗಳನ್ನು ಸಮಾಜಕ್ಕೆ ಮುಟ್ಟಿಸಿ..
ಬಸವಾದಿ ಶರಣರು ಮೂರ್ತಿ ಪೂಜೆ ಬೇಡ ಅಂದರು ನೀವಕ ನೋಡಿದರ ಅವರ ಮೂರ್ತಿ ಮಾಡಿ ಅವರನ್ನು ದೇವರ ಮಾಡಿ ಸ್ಥಾವರ ಮಾಡತಾ ಇದ್ಧೀರಿ…
ಒಂದೊಂದು ಸಂಘಟನೆ ಒಂದೊಂದು ರೀತಿ ಹೋದರೆ ಹೇಗೆ ಎಲ್ಲರೂ ಸೇರಿ ಶರಣರ ದರ್ಶನ ಪ್ರಚಾರ ಆದಾಗ ಲಿಂಗಾಯತ ಧರ್ಮ ಆಗುವದು…
೧೧೨ ಅಡಿ ಬಸವಣ್ಣನವರ ಮೂರ್ತಿ ನಿರ್ಮಾಣ ಕಾರ್ಯದಿಂದ, ಅನ್ಯ ರಾಜ್ಯದವರಿಗೆ, ವಿದೇಶಿಯರಿಗೆ ಗುರು ಬಸವಣ್ಣನವರ ಪರಿಚಯವಾಗುತ್ತಿದೆ. ನಾನು ಬೆಂಗಳೂರಿನ ಪ್ರತಿಷ್ಠಿತ ಯುರೋಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದೇನೆ. ನನ್ನ ವಿದೇಶಿ ಸಹ ಉದ್ಯೋಗಿಗಳ ಜೊತೆಗೆ ಬಿಡದಿ ರೆಸಾರ್ಟ್ ಹೋಗುವ ಸಂದರ್ಭದಲ್ಲಿ, ನಿರ್ಮಾಣವಾಗುತ್ತಿರುವ ಬಸವ ಮೂರ್ತಿ ನೋಡಿ, ಮತ್ತು ಕೈಯಲ್ಲಿ ಹಿಡಿದಿರುವ ಲಿಂಗವನ್ನು ನೋಡಿ ಇದು ಏನೆಂದು ಕೇಳಿದರು. ನನಗೆ ಇಷ್ಟಲಿಂಗ ತತ್ವ, ಕಾಯಕ ತತ್ವ, ಕಲ್ಯಾಣ ಕ್ರಾಂತಿ ಅವರಿಗೆ ಪರಿಚಯಿಸಲು ಅನುಕೂಲವಾಯಿತು.
ಇವಾಗ ನೀವು ಹೇಳು, ಇಷ್ಟು ವರ್ಷ ವಚನ ಸಾಹಿತ್ಯ ಸಮಾಜಕ್ಕೆ ಮುಟ್ಟಿಸಿ ಎಂದು ಹೇಳುವ ನೀವು, ವಿದೇಶಿಯರಿಗೆ ಬಿಡಿ, ಎಷ್ಟು ಜನ ಅನ್ಯ ರಾಜ್ಯದವರಿಗೆ ಇದರಿಂದ ಬಸವ ತತ್ವ ಪರಿಚಯವಾಗಿದೆ??
ಮಾತಾಜಿಯವರು ಅತ್ಯಂತ ದೂರ ದೃಷ್ಟಿ ಇಂದ ಗುರು ಬಸವಣ್ಣನವರ ಮೂರ್ತಿ ನಿರ್ಮಾಣದ ಸಂಕಲ್ಪ ಮಾಡಿದ್ದಾರೆ. ಎಲ್ಲದಕ್ಕೂ ಅಡ್ಡ ಯೋಚನೆ ಮಾಡಬೇಡಿ. ನಾವು ಇದೆ ರೀತಿ ಚಿಂತನೆ ಮಾಡುತ್ತಿದ್ದರೆ ಬಸವ ಧರ್ಮ ವಿಶ್ವ ಧರ್ಮ ಆಗುವುದು ಯಾವಾಗ?
Only leftists are saying that Basavanna statue is required. But according to the real followers of vishwa Guru Basavanna statue of Basavanna is very much required to show to teach his principles.
ಗುರು ಬಸವಣ್ಣವರ ಮೂರ್ತಿ ಸ್ಥಾಪನೆ ಮಾಡುವದರಿಂದ ಸ್ಥಾವರ ತತ್ವ ಹೇಗೆ ಪ್ರತಿಪಾದನೆ ಮಾಡಿದಂತಾಗುತ್ತೆ? ಗುರು ಬಸವಣ್ಣವರ ಮೂರ್ತಿ ಪ್ರತಿ ಜಿಲ್ಲೆ ಗಳಲ್ಲೂ ಇವೆ. ಇದರಿಂದ ಅನೇಕ ಬೆಂಗಳೂರಿಗರಿಗೆ, ಬೆಂಗಳೂರಿಗೆ ಬಂದು ಮೈಸೂರು ನೋಡಲು ತೆರಳುವ ವಿದೇಶಿಯರಿಗೆ ಬಸವ ತತ್ತ್ವ ಪರಿಚಯವಾಗುತ್ತದೆ.
ಬರಿ ಮಾತಾಜಿ ಇಂತಹ ಕಾರ್ಯ ಮಾಡುತ್ತಿದರೆ ಅನ್ನುವ ಕಾರಣಕ್ಕೆ ಕಲ್ಲು ಹಾಕುವದು. ನೀವು ಇದೆ ರೀತಿ ಸ್ಥಾವರ ಜಂಗಮ ಅನ್ಕೊಂಡು ಇರಿ. ಲಿಂಗಾಯತ ಧರ್ಮ, ಬೀದರ ಕಲಬುರಗಿ ಗಡಿ ದಾಟಲು ಬಿಡಬೇಡಿ. 🙏🙏🙏
“ಬಸವನ ಮೂರ್ತಿಯೇ ಧ್ಯಾನಕ್ಕೆ ಮೂಲ” – ಸಿದ್ದರಾಮೇಶ್ವರರು
“ಪಾವನವಾದೇನು ಬಸವಣ್ಣ ನಿಮ್ಮ ಪಾವನ ಮೂರ್ತಿಯ ಕಂಡು “ – ಸಿದ್ದರಾಮೇಶ್ವರರು
“ನಿಮ್ಮ ಮೂರ್ತಿ ಗೊಳಿಸುವೆನಯ್ಯ ಬಸವಣ್ಣ, ಅಹಂ ಸೋಹಂ ಎಂಬ ಭಾವವುಳ್ಳನಕ್ಕ”