ಹುಟ್ಟಿದ 11ನೇ ದಿನಕ್ಕೆ ಮಗುವಿನ ಪರವಾಗಿ ತಂದೆ ತಾಯಿಗಳಿಗೆ ಬಸವಧರ್ಮದ ಪ್ರತಿಜ್ಞಾ ವಿಧಿಗಳನ್ನು ಭೋದಿಸಲಾಯಿತು.
ಚಿತ್ರದುರ್ಗ:
ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ, ನಿವೃತ್ತ ಉಪನ್ಯಾಸಕರಾದ ನಂದೀಶ ಜಿ. ಟಿ. ಅವರ ಮಗಳಾದ ಬಸವದೀಪ್ತಿ ಮತ್ತು ಅಭಿಷೇಕ ದೇವಿಗೆರೆ ಶರಣ ದಂಪತಿಗಳ ಮಗಳಿಗೆ ಭಾನುವಾರ ಲಿಂಗಾಯತ ಧರ್ಮದ ಸಂಸ್ಕಾರದಂತೆ ಲಿಂಗಧಾರಣೆ ಕಾರ್ಯ ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ಶಿವಲಿಂಗ ಶಾಸ್ತ್ರಿಗಳು ಹಾಗೂ ಹೊಳಲ್ಕೆರೆಯ ಶ್ರೀ ಮರುಘರಾಜೇಂದ್ರ ಒಂಟಿಕಂಬ ಮಠದ ಪೂಜ್ಯ ತಿಪ್ಪೇರುದ್ರ ಸ್ವಾಮಿಗಳವರು ಬಸವಾದಿ ಪ್ರಮಥರ ವಚನಗಳನ್ನು ಹೇಳುವ, ಹಾಡುವ ಮುಖಾಂತರ ಲಿಂಗಾಯತ ಧರ್ಮದ ಪದ್ಧತಿಯಂತೆ ಹಸುಗೂಸಿಗೆ ಲಿಂಗಧಾರಣೆಯನ್ನು ಮಾಡಿ ಧರ್ಮ ಸಂಸ್ಕಾರವನ್ನು ನೀಡಿದರು.

ಮಗುವಿನ ಪರವಾಗಿ ತಂದೆ ತಾಯಿಗಳಿಗೆ ಬಸವಧರ್ಮದ ಪ್ರತಿಜ್ಞಾ ವಿಧಿಗಳನ್ನು ಭೋದಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಲಿಂಗ, ಪಾದೋದಕ, ಪ್ರಸಾದ ವಿತರಿಸಲಾಯಿತು.
ನವಜಾತ ಶಿಶುವಿಗೆ ತಿಂಗಳೊಳಗಾಗಿ ಲಿಂಗಧಾರಣೆಯ ಧರ್ಮ ಸಂಸ್ಕಾರ ನೀಡಲಾಗುತ್ತದೆ. ಅದರಂತೆ ಹನ್ನೊಂದನೇ ದಿನಕ್ಕೆ ಮಗುವಿಗೆ ಸಂಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕುಟುಂಬದ ಸಂಬಂಧಿಕರು ಉಪಸ್ಥಿತರಿದ್ದರು. ಬಸವಗೀತೆಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.


ಶರಣು ಶರಣಾರ್ಥಿಗಳು 🙏🙏🌺
ಈ ಕಾರ್ಯಕ್ರಮವನ್ನು ಮಾಡಿ ಬಸವ ತತ್ವವನ್ನು ಬೆಳೆಸಲು ಕಾರಣರಾದ ಶರಣ ದಂಪತಿಗಳಿಗೆ ಅಪ್ಪ ಧರ್ಮಗುರು ಬಸವಣ್ಣನವರು ಹಾಗೂ ಲಿಂಗ ದೇವನಲ್ಲಿ ಬೇಡಿಕೊಳ್ಳುತ್ತೇನೆ ಶರಣು ಶರಣಾರ್ಥಿ