‘ವಚನ ಸಾಹಿತ್ಯದಲ್ಲಿ ಸಮಾಜವನ್ನು ಒಂದುಗೂಡಿಸುವ ಸತ್ವವಿದೆ’

ಬೆಳಗಾವಿ:

ಸಮಾಜದಲ್ಲಿ ಒಗ್ಗಟ್ಟು ಮತ್ತು ಉತ್ತಮ ನಾಯಕತ್ವ ಇದ್ದರೆ ಮಾತ್ರ ಎಲ್ಲ ಅವಕಾಶಗಳನ್ನು ನಾವು ಪಡೆಯಲು ಸಾಧ್ಯವಾಗುತ್ತದೆ. ಬಸವಾದಿ ಶರಣರ ವಚನ ಸಾಹಿತ್ಯದಲ್ಲಿ ಎಲ್ಲರನ್ನೂ ಒಂದುಗೂಡಿಸುವ ಸತ್ವವಿದೆ. ವಿಶ್ವಗುರು ಬಸವಣ್ಣನವರ ಕಾಯಕ ತತ್ವದ ಅಡಿಯಲ್ಲಿ ಎಲ್ಲರೂ ಶ್ರಮವಹಿಸಿದ್ದೇ ಆದರೆ ನಾವು ಸೌಕರ್ಯಗಳನ್ನು ಪಡೆದು ಪ್ರಗತಿ ಹೊಂದಲು ಸಾಧ್ಯವಿದೆ ಎಂದು ಲಿಂಗಾಯತ ಸಂಘಟನೆಯ ಮುಖಂಡರಾದ ಸದಾಶಿವ ದೇವರಮನಿ ಹೇಳಿದರು.

ಈಚೆಗೆ ಲಿಂಗಾಯತ ಸಂಘಟನೆ ವತಿಯಿಂದ ನಗರದ ಹಳಕಟ್ಟಿ ಭವನದಲ್ಲಿ ಹಮ್ಮಿಕೊಳ್ಳಲಾದ ವಾರದ ಸತ್ಸಂಗ, ಪ್ರಾರ್ಥನೆ ಕಾರ್ಯಕ್ರಮದಲ್ಲಿ ವಚನಗಳ ವಿಶ್ಲೇಷಣೆ ಮಾಡುತ್ತಾ ಮಾತನಾಡಿದರು.

ಶಂಕರ ಗುಡಸ ಮಾತನಾಡಿ, ನಾವೆಲ್ಲಾ ಒಂದು ನಾವೆಲ್ಲ ಬಂಧು ಎಂಬ ತತ್ವದ ಅಡಿಯಲ್ಲಿ ನಾವೆಲ್ಲ ಕಾಯಕ ಮಾಡಬೇಕಿದೆ. ಸ್ವಹಿತಾಸಕ್ತಿ ಮರೆತು ಸಮಾಜದ ಏಳಿಗೆಗಾಗಿ ನಾವೆಲ್ಲ ಶ್ರಮ ವಹಿಸೋಣ ಎಂದರು.

ಹಲವು ಸದಸ್ಯರು ವಚನಗಳನ್ನು ಹೇಳುವುದರ ಜೊತೆಗೆ ಅವುಗಳ ವಿಶ್ಲೇಷಣೆ ಮಾಡಿ ನಮ್ಮ ಅಂತರಂಗ ಶುದ್ಧಿಗೊಳಿಸಿಕೊಳ್ಳುವತ್ತ ಹೆಜ್ಜೆ ಹಾಕೋಣ ಎಂದರು.

ಕಾಯಕ, ದಾಸೋಹ ತತ್ವದಡಿಯಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀದೇವಿ ಮತ್ತು ಸುರೇಶ ನರಗುಂದ ದಂಪತಿಗಳನ್ನು ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಆನಂದ ಕರ್ಕಿ, ಶಿವಾನಂದ ನಾಯಕ, ಶಶಿಭೂಷಣ ಪಾಟೀಲ, ಶ್ರೀದೇವಿ ನರಗುಂದ, ಜ್ಯೋತಿ ಬದಾಮಿ, ವಿರೂಪಾಕ್ಷ ದೊಡ್ಡಮನಿ, ಆನoದ ಕರಕಿ, ಮ.ಬ. ಕರಿಕಟ್ಟಿ, ಬಸವರಾಜ ಬಿಜ್ಜರಗಿ, ಶoಕರ ರಾವಳ, ಮ. ಬಿ. ಖಾಡೆ, ರೂಪಾ ಚೌಗಲೆ, ದೀಪಾ ಪಾಟೀಲ, ಶಿವಾನಂದ ವಾಘರವಾಡಿ ತಿಗಡಿ, ಶಿವಾನಂದ ತಲ್ಲೂರ, ಸೇರಿದಂತೆ ಶರಣರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾರ್ಥನೆ ಮಾಡಿಸಿದರು. ಸಂಗಮೇಶ ಅರಳಿ ಸ್ವಾಗತಿಸಿ, ನಿರೂಪಿಸಿದರು. ಸುರೇಶ ನರಗುಂದ ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *