ಕನ್ನೇರಿ ಸ್ವಾಮಿಯನ್ನು ಟಿಶ್ಯೂ ಪೇಪರ್ ಥರ ಬಳಸಿಕೊಂಡು ಎಸೆಯುತ್ತಾರೆ: ಡಾ.ರವಿ ಬಿರಾದಾರ
ವಿಜಯಪುರ
ಆರ್ಎಸ್ಎಸ್, ಬಿಜೆಪಿಯವರು ಕನ್ನೇರಿ ಸ್ವಾಮಿ ಮೂಲಕ ಕೋಮುವಾದ ಪ್ರಚೋದಿಸಿ, ಸಮಾಜ ಒಡೆಯುವ ಕೆಲಸಕ್ಕೆ ಬಿಟ್ಟಿದ್ದಾರೆ, ಎಂದು ಬಸವಾದಿ ಶರಣರ ಹಾಗೂ ಜಿಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡ ಚಂದ್ರಶೇಖರ ಕೊಡಬಾಗಿ ಬುಧವಾರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅದೇ ರೀತಿಯಾಗಿ ಕನ್ನೇರಿ ಸ್ವಾಮಿ ಸಮಾಜದಲ್ಲಿ ಸ್ವಾಸ್ಥ್ಯ ಹಾಳು ಮಾಡಲು ಹೊರಟಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕನ್ನೇರಿ ಸ್ವಾಮಿ ಇದನ್ನು ನಿಲ್ಲಿಸದೇ ಇದ್ದರೆ ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಅವರು ಭಾಗವಹಿಸುವ ಸಭೆ, ಸಮಾರಂಭವನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಆರ್ಎಸ್ಎಸ್ನವರ ಮಾತನ್ನು ನಂಬಿ ಕಂಣ್ರಿ ಸ್ವಾಮಿ ಸಮಾಜದಲ್ಲಿ ವಿಷಬೀಜ ಬಿತ್ತಬಾರದು, ಎಂದು ಕಿವಿ ಮಾತು ಹೇಳಿದರು.

ನಗರದಲ್ಲಿ ನಡೆದ ಬಸವಾದಿ ಶರಣರ ಹಾಗೂ ಜಿಲ್ಲಾ ಪ್ರಗತಿಪರ ಸಂಘಟನೆಗಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ದೇವಸ್ಥಾನಗಳ ಟ್ರಸ್ಟ್ಗಳಲ್ಲಿ ಆರ್ಎಸ್ಎಸ್ ಹಾಗೂ ವಿಶ್ವ ಹಿಂದು ಪರಿಷತ್ ಹಿನ್ನೆಲೆಯುಳ್ಳ ಜನರೇ ಇದ್ದಾರೆ.
ಈ ಟ್ರಸ್ಟ್ಗಳ ಮೂಲಕ ಜನರ ಹಣವನ್ನು ಎತ್ತುವಳಿ ಮಾಡುತ್ತಿದ್ದಾರೆ. ಹಾಗಾಗಿಯೇ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ಆರ್ ಎಸ್ಎಎಸ್ ನೋಂದಣಿ ಬಗ್ಗೆ ಮಾತನಾಡಿದ್ದಾರೆ.
ಯಾವುದೇ ಸಂಘಟನೆ ನೋಂದಣಿ ಮಾಡಲೇಬೇಕು ಎಂಬ ನಿಯಮ ಇರುವುದರಿಂದ ಆರ್ಎಸ್ಎಸ್ ಕೂಡ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಲೇಬೇಕು ಎಂದು ಒತ್ತಾಯಿಸಿದರು.
ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್ನ ಪ್ರತಿನಿಧಿಗಳೇ ರಾಮಜನ್ಮ ಭೂಮಿ ಟ್ರಸ್ಟ್ ಅನ್ನು ಮುನ್ನಡೆಸುತ್ತಿವೆ. ಅಯೋಧ್ಯಾ ಶ್ರೀರಾಮ ಮಂದಿರದ ಹುಂಡಿ ಕಳವಿನ ಸಂಪೂರ್ಣ ಹೊಣೆಯನ್ನು ಈ ಸಂಘಟನೆಗಳೇ ಹೊರಬೇಕು, ಎಂದು ಹೇಳಿದರು.
ಆರ್ಎಸ್ಎಸ್ ಹಾಗೂ ಬಿಜೆಪಿ ಮುಖಂಡರು ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸುತ್ತಾರೆ. ಬಡವರ ಮಕ್ಕಳು ಮಾತ್ರ ದೇಶ ಕಾಯಲು ಹೋಗುತ್ತಾರೆ, ಎಂದರು.
ಡಾ.ರವಿ ಬಿರಾದಾರ ಮಾತನಾಡಿ, ‘ಬಸವಣ್ಣನ ತತ್ವವನ್ನು ಮುಚ್ಚಿಹಾಕಲು ಕನ್ನೇರಿ ಸ್ವಾಮಿ ಮೂಲಕ ಆರ್ಎಸ್ಎಸ್ ಪ್ರಯತ್ನ ನಡೆಸಿದೆ. ಬಸವಾದಿ ಶರಣರ ತತ್ವ, ಸಿದ್ಧಾಂತಕ್ಕೆ ಅವಮಾನ ಮಾಡುತ್ತಿರುವ ಕನ್ನೇರಿ ಸ್ವಾಮಿ ಬಸವಾದಿ ಶರಣರ ಮಠದ ಬದಲಿಗೆ ಸನಾತನ ಮಠವೊಂದಕ್ಕೆ ಸ್ವಾಮೀಜಿ ಆಗಲಿ ನೋಡೋಣ ಎಂದು ಹೇಳಿದರು.

ಕನ್ನೇರಿ ಸ್ವಾಮಿ ಬಸವಣ್ಣವನರ ಅನ್ನ ತಿಂದು ದ್ರೋಹ ಬಗೆಯುತ್ತಿದ್ದಾರೆ. ಕನ್ನೇರಿ ಸ್ವಾಮಿಯನ್ನು ಟಿಶ್ಯೂ ಪೇಪರ್ ಥರ ಬಳಕೆ ಮಾಡಿಕೊಂಡು ಎಸೆಯುತ್ತಾರೆ ಎಂಬುದನ್ನು ಅರಿಯಬೇಕು ಎಂದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಬಸವಣ್ಣ ಪ್ರತಿಪಾದಿಸಿದ ತತ್ವ, ಸಿದ್ಧಾಂತ, ಸಮಾನತೆ ವಿರೋಧಿಯಾಗಿ ಆರ್ಎಸ್ಎಸ್ ನೀತಿ ಇದೆ. ರೈತರ ಬಗ್ಗೆ, ನಿರುದ್ಯೋಗದ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಎಂದೂ ಮಾತನಾಡುವುದಿಲ್ಲ.
ಕೇವಲ ಅಹಿಂದ ವರ್ಗದ ಯುವ ಸಮೂಹದಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತಿ ದಾರಿ ತಪ್ಪಿಸುತ್ತಿದೆ’ ಎಂದು ದೂರಿದರು.
ಕನ್ನೇರಿ ಸ್ವಾಮಿ ವಿಜಯಪುರ ಜಿಲ್ಲೆಯಲ್ಲಿ ರಾಜಕಾರಣ ಪ್ರವೇಶಿಸಲು ಪ್ರಯತ್ನ ನಡೆಸಿದ್ದಾರೆ, ಅದು ಎಂದಿಗೂ ಸಾಧ್ಯವಿಲ್ಲ, ಜಿಲ್ಲೆ ಪ್ರವೇಶಿಸದಂತೆ ಮಾಡುತ್ತೇವೆ, ಎಂದು ದಲಿತ ಮುಖಂಡ ಅಡಿವೆಪ್ಪ ಸಾಲಗಲ್ಲ, ಹೇಳಿದರು.
ಮುಖಂಡರಾದ ಅಭಿಷೇಕ ಚಕ್ರವರ್ತಿ, ಸುರೇಶ ಗೊಣಸಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
