ಬೀದರ:
ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು ಕಳೆದ ೨೮ ವರ್ಷಗಳಿಂದ ವಚನ ಕಮ್ಮಟ ಪರೀಕ್ಷೆ ನಡೆಸುತ್ತ ಬಂದಿದೆ. ಶರಣ ಸಂಸ್ಕೃತಿ ಮತ್ತು ವಚನ ಸಾಹಿತ್ಯ ಅಧ್ಯಯನ ಅನುಷ್ಠಾನದ ಅವಕಾಶಗಳನ್ನು ಸಾರ್ವತ್ರೀಕರಿಸುವುದು ಹಾಗೂ ವಿದ್ಯಾರ್ಥಿಗಳು ಮತ್ತು ನಾಗರಿಕರಲ್ಲಿ ಸುಜ್ಞಾನ ಸನ್ನಡತೆ ಮತ್ತು ಶುದ್ಧ ಆಲೋಚನೆಗಳನ್ನು ರೂಪಿಸುವುದು ಈ ಪರೀಕ್ಷೆಗಳ ಮುಖ್ಯ ಉದ್ದೇಶವಾಗಿದೆ ಎಂದು ಯುವ ಬಸವಕೇಂದ್ರದ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಅವರು ತಿಳಿಸಿದ್ದಾರೆ.
ವಚನ ಕಮ್ಮಟ ಪರೀಕ್ಷೆಗಳನ್ನು ಪ್ರಾಥಮಿಕ ೫ನೇ ತರಗತಿಯಿಂದ ಪಿಯುಸಿ, ಐಟಿಐ, ಪದವಿ ಮತ್ತು ಬಿಎಡ್ ತರಗತಿ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಬಹುದು.
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ರೂ. ೮೦ ನಿಗದಿಪಡಿಸಿದ್ದು ಪರೀಕ್ಷೆಗಳು ನವೆಂಬರ್ ೩ ನೇ ಭಾನುವಾರ ಜರುಗಲಿವೆ. ಮತ್ತು ಪಿಯುಸಿ ಇಂದ ಪದವಿ ವಿದ್ಯಾರ್ಥಿಗಳಿಗೆ ರೂ. ೧೦೦ ನಿಗದಿಪಡಿಸಲಾಗಿದೆ. ಪರೀಕ್ಷೆಗಳು ಡಿಸೆಂಬರ್ ೩ ನೇ ಭಾನುವಾರ ಜರುಗಲಿವೆ. ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಬಹುದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೩೧ ಅಗಸ್ಟ್ ೨೦೨೬. ಆಸಕ್ತ ಶಿಕ್ಷಣ ಸಂಸ್ಥೆಯ ಪ್ರಮುಖರು ಹಾಗೂ ವಿದ್ಯಾರ್ಥಿಗಳು ಜಿಲ್ಲೆಯ ಈ ಕೆಳಗಿನ ತಾಲ್ಲೂಕು ಸಂಚಾಲಕರನ್ನು ಸಂಪರ್ಕಿಸಬಹುದು.
ಸಂತೋಷ ಮಂಗಳೂರೆ ಬೀದರ ೯೯೧೬೯೦೦೩೬೦, ಮಲ್ಲಿಕಾರ್ಜುನ ಟಂಕಸಾಲೆ ಔರಾದ ೯೯೭೨೯೩೨೫೨೬, ರಮೇಶ ಚಿದ್ರಿ ಭಾಲ್ಕಿ ೯೪೪೯೦೫೦೪೯೮, ಡಾ. ರುದ್ರಮಣಿ ಮಠಪತಿ ಬಸವಕಲ್ಯಾಣ ೯೯೪೫೯೭೩೨೯೪, ನಾಗರಾಜ ಹಾವಣ್ಣ ಹುಲಸೂರ ೯೯೭೨೪೫೫೧೦೯, ಸಚಿನ ಮಠಪತಿ ಹುಮನಾಬಾದ ೯೮೮೬೮೭೮೯೧೦, ರಮೇಶ ಸಲಗರ ಚಿಟಗುಪ್ಪ ೯೯೭೨೧೪೬೪೯೮, ಪ್ರಶಾಂತ ಮಠಪತಿ ಕಮಲನಗರ ೯೦೦೮೫೬೨೭೦೭ ಇವರುಗಳನ್ನು ಸಂಪರ್ಕಿಸಬಹುದು.
ಶಿಕ್ಷಣ ಸಂಸ್ಥೆಗಳ ಪ್ರಮುಖರು, ಉಪನ್ಯಾಸಕರು ಮತ್ತು ಶಿಕ್ಷಕರು ತಮ್ಮ ಶಾಲಾ ಕಾಲೇಜಿನ ಹೆಚ್ಚಿನ ವಿದ್ಯಾರ್ಥಿಗಳನ್ನು ಪರಿಕ್ಷೆಗೆ ಕೂರಿಸಿ ಆದರ್ಶ ವಿದ್ಯಾರ್ಥಿಗಳನ್ನಾಗಿ ರೂಪಿಸಲು ಸಹಕರಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸುರೇಶ ಚನಶೆಟ್ಟಿ ಜಿಲ್ಲಾ ಸಂಚಾಲಕರು ೯೯೮೬೭೯೨೩೨೩, ಶಿವಶಂಕರ ಟೋಕರೆ ಜಿಲ್ಲಾ ಸಹಸಂಚಾಲಕರು ೯೪೩೧೬೫೨೧೩೧ ಇವರನ್ನು ಸಂಪರ್ಕಿಸಬಹುದಾಗಿದೆ.
