ಮಲೆಬೆನ್ನೂರಲ್ಲಿ ಶರಣರಾದ ಅಪ್ಪಣ್ಣ, ಗುಂಡಯ್ಯ, ಹಳಕಟ್ಟಿ ಅವರುಗಳು ಜಯಂತಿ

ಹರಿಹರ:

ತಾಲೂಕಿನ ಮಲೆಬೆನ್ನೂರು ಪಟ್ಟಣದ ಡಾ. ರಾಜಕುಮಾರ ಬಡಾವಣೆಯ ಬಸವ ಮಂಟಪದಲ್ಲಿ ಅಕ್ಕನ ಬಳಗ, ಅಣ್ಣನ ಬಳಗ ಮತ್ತು ರಾಷ್ಟ್ರೀಯ ಬಸವ ದಳದ ಸಹಯೋಗದಲ್ಲಿ ಶರಣರಾದ ಹಡಪದ ಅಪ್ಪಣ್ಣ, ಕುಂಬಾರ ಗುಂಡಯ್ಯ ಹಾಗೂ ವಚನ ಸಾಹಿತ್ಯ ಪರಿಚಾರಕ ಫ.ಗು. ಹಳಕಟ್ಟಿ ಅವರ ಜಯಂತಿ ಆಚರಿಸಲಾಯಿತು.

ಚಿತ್ರದುರ್ಗದ ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ಕುಂಬಾರ ಗುಂಡಯ್ಯ ಸ್ವಾಮೀಜಿ ಮೊದಲಿಗೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಅಕ್ಕನ ಶರಣೆಯರಿಂದ ವಚನ ಪ್ರಾರ್ಥನೆ ಜರುಗಿತು.

ಷಣ್ಮುಖಪ್ಪ ಸಾಲಿ, ಶಿವಪ್ರಸಾದ ಕರ್ಜಗಿ, ರಾಜೇಶ್ವರಿ ಅವರುಗಳು ಮೂವರು ಶರಣರ ಕುರಿತು ಉಪನ್ಯಾಸ ನೀಡಿದರು.

ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ವೈ. ನಾರೇಶಪ್ಪ ಶರಣರ ಜಯಂತಿಯ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಿವಾಜಿ ಪಾಟೀಲ, ಬಸವರಾಜಪ್ಪ, ಪ್ರಭುಸ್ವಾಮಿ, ನಾಗರಾಜ, ಕೆ. ಸಿದ್ದಪ್ಪ, ಎಸ್ ಆಂಜನೇಯ, ಪರಮೇಶ್ವರಪ್ಪ ಹಾಗೂ ಅಕ್ಕನ ಬಳಗ, ಅಣ್ಣನ ಬಳಗದ ಅನೇಕ ಶರಣ ಶರಣೆಯರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *