ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
ಬೈಲಹೊಂಗಲ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೨೨ ಶಿವಯೋಗ ಕಮ್ಮಟ ನಡೆಯಿತು. ಸುಮಾರು ೨೦೦ ಜನರು ಶಿಬರಾರ್ಥಿಗಳು ಹಾಜರಿದ್ದರು. ಈ ಎರಡು ದಿನದ ಕಾರ್ಯಕ್ರಮದಲ್ಲಿ ನಾನೂ ಸಹ ಭಾಗವಹಿಸಿದ್ದೆ. (ಮಾಹಿತಿ: ಅಂಬಾರಾಯ. ಎಸ್. ಬಿರಾದಾರ, ಕಲಬುರಗಿ.)
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಮಾಲಿಕೆ – ದಿನ – ೦೩. (ವಿಷಯ ಷಟ್ ಸ್ಥಲಗಳು. ಪ್ರವಚನ - ಶರಣ ಬಸವರಾಜಪ್ಪ, ಬಸವ ಭವನ, ಶಿರಗುಪ್ಪಿ)
"ಮನೆಯಲ್ಲಿ ಮಹಾಮನೆ" ಕಾರ್ಯಕ್ರಮ
ಗದಗ-ಬೆಟಗೇರಿಯ ಬಸವ ದಳ,ಬಸವ ಕೇಂದ್ರ,ಲಿಂಗಾಯತ ಪ್ರಗತಿಶೀಲ ಸಂಘ ಇವುಗಳ ಜಂಟಿ ಆಶ್ರಯದಲ್ಲಿ, ಗದುಗಿನ ಶರಣರಾದ ಮಹಾಂತೇಶ ಬಸವರಾಜ ಚಿತ್ತರಗಿ ಇವರ ಮನೆಯಲ್ಲಿ ಗುರುವಾರದಂದು 882ನೇ ಮಹಾಮನೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶರಣೆ ಗಿರಿಜಕ್ಕ ಧರ್ಮರೆಡ್ಡಿ ಹಾಗೂ ಶರಣ ಅಶೋಕ ಬರಗುಂಡಿಯವರು ವಚನ ಚಿಂತನಗೈದರು.
ಈ ಸಂದರ್ಭದಲ್ಲಿ ಸೇರಿದವರೆಲ್ಲ ಬಸವ ಪ್ರಾರ್ಥನೆ ಹಾಗೂ ವಚನ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದಲ್ಲಿ ಸಂಘಟನೆಗಳ ಸದಸ್ಯರು,ಚಿತ್ತರಗಿ ಕುಟುಂಬದವರು ಪಾಲ್ಗೊಂಡಿದ್ದರು. (ವರದಿ - ರವೀಂದ್ರ ಹೊನವಾಡ)
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ (ದಿನ ೦೪). ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮಹಾಂತಸ್ವಾಮಿ ಅವರಿಂದ ಪಂಚಾಚಾರಗಳು ವಿಷಯದ ಮೇಲೆ ಪ್ರವಚನ.
List of Images
1/8

Leave a comment