ವಚನ ಚಾರಿಟೇಬಲ್ ಸೊಸೈಟಿ ವಾರ್ಷಿಕೊತ್ಸವ: ವಿವಿಧ ಸ್ಪರ್ಧೆಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

ವಚನ ಚಾರಿಟೇಬಲ್ ಸೊಸೈಟಿ ಸುಮಾರು ಆರು ವರ್ಷಗಳಿಂದ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಅನೇಕ ಸಮಾಜಮುಖಿ ಸತ್ಕಾರ್ಯಗಳು ಮಾಡುತ್ತ ಜನಸಾಮಾನ್ಯರ ಭಾವನೆಗೆ ಸ್ಪಂದಿಸುತ್ತ ದಾಪುಗಾಲು ಹಾಕುತ್ತ ಮುನ್ನಡೆಯುತ್ತಿದೆ.

ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೊಭಾವನೆ ಹಾಗೂ ವಿವಿಧ ವಿಷಯಗಳ ಚಿಂತನ ಮಂಥನೆಗಾಗಿ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ವಿಧ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು ಏರ್ಪಡಿಸಲಾಗಿದೆ. ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸೂಕ್ತ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗುತ್ತಿದೆ.

ಪ್ರಥಮ ಬಹುಮಾನ: ಮೂರು ಸಾವಿರ, ದ್ವಿತೀಯ ಬಹುಮಾನ: ಎರಡು ಸಾವಿರ, ತೃತೀಯ ಬಹುಮಾನ: ಒಂದು ಸಾವಿರ ರೂಪಾಯಿ.

ವಚನಕಂಠ ಪಾಠ:

ಮೂರು ವರ್ಷದ ಮಗುವಿನಿಂದ ಮೂರನೆಯ ತರಗತಿಯವರೆಗೆ, ನಾಲ್ಕನೇ ತರಗತಿಯಿಂದ ಆರನೆಯ ತರಗತಿಯವರೆಗೆ, ಏಳರಿಂದ ೧೦ನೆಯ ತರಗತಿಯವರೆಗೆ, ಹಾಗೂ ೨೨ ವರ್ಷದ ಮೇಲ್ಪಟ್ಟ ಮಹಿಳೆಯರಿಗಾಗಿ ವಚನಕಂಠ ಪಾಠ ಸ್ಪರ್ಧೆ.

ಭಾಷಣ ಸ್ಪರ್ಧೆ :

ಏಳರಿಂದ ಹತ್ತನೆಯ ತರಗತಿಯವರೆಗೆ, (ವಿಷಯ : ಮಕ್ಕಳಲ್ಲಿ ಮೊಬೈಲ್ ಬಳಕೆಯ ದುಷ್ಪರಿಣಾಮಗಳು).

ಪಿಯುಸಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ, (ವಿಷಯ : ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವಜನತೆ).

ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ (ವಿಷಯ: ಕೃಷಿ ಚಟುವಟಿಕೆಯಲ್ಲಿ ಯುವಜನತೆಯ ಪಾತ್ರ).

ಪ್ರಬಂಧ ಸ್ಪರ್ಧೆ :

ಏಳನೇ ತರಗತಿಯಿಂದ ೧೦ನೇ ತರಗತಿಯವರೆಗೆ, (ವಿಷಯ : ಗುರು ಹಿರಿಯರಿಗೆ ಗೌರವ).

ಪಿಯುಸಿಯಿಂದ ಸ್ನಾತಕೋತ್ತರ ಮಕ್ಕಳಿಗಾಗಿ, (ವಿಷಯ : ನಿರುದ್ಯೋಗ ಸಮಸ್ಯೆ ಮತ್ತು ಸ್ವಾವಲಂಬಿ ಜೀವನ).

ಚಿತ್ರಕಲಾ ಸ್ಪರ್ಧೆ :

ಮುಕ್ತ ಅವಕಾಶ (ಚಿತ್ರಕಲಾ ಕೋರ್ಸ್ ಮಾಡುತ್ತಿರುವ/ ಮಾಡಿರುವ ವಿದ್ಯಾರ್ಥಿಗಳು ಭಾಗವಹಿಸುವಂತಿಲ್ಲ)

ಹಿರಿಯರ ಚಿಂತನೆ:

೬೦ ವರ್ಷ ಮೇಲ್ಪಟ್ಟ ಹಿರಿಯರು (ಆಯ್ದ ವಚನಗಳನ್ನು ಅರ್ಧಗಂಟೆ ಮುಂಚಿತವಾಗಿ ಸ್ಪರ್ಧೆ ನಡೆಯುವ ಸ್ಥಳದಲ್ಲಿಯೇ ನೀಡಲಾಗುವುದು).

ವಿಶೇಷ ಸೂಚನೆಗಳು:

ಒಂದನೆ ತರಗತಿಯಿಂದ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಅವಕಾಶ, ಪ್ರವೇಶ ಉಚಿತ. ಸ್ಪರ್ಧಾಳುಗಳು ಸಮಯಕ್ಕೆ ಸರಿಯಾಗಿ ಹಾಜರಿರತಕ್ಕದ್ದು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

ಇಚ್ಛೆಯುಳ್ಳ ಮಕ್ಕಳು, ಸ್ಪರ್ಧಾಳುಗಳು ೯೯೭೨೬೭೭೫೦೮ ಸದರಿ ಮೊಬೈಲ್‌ಗೆ ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.

ನೇರವಾಗಿ ಬರುವ ಮಕ್ಕಳಿಗೆ ಅವಕಾಶವಿರುವದಿಲ್ಲ. ಪ್ರತಿ ಶಾಲೆ/ ಕಾಲೇಜುಗಳಿಂದ ಕೇವಲ ಐದು ಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ. ಸ್ಪರ್ಧೆ ನಡೆಯುವ ಸ್ಥಳ ನೇರವಾಗಿ ಮಕ್ಕಳ ಮೊಬೈಲಿಗೆ ಫೋನಾಯಿಸಿ ಮಾಹಿತಿ ನೀಡಲಾಗುವುದು. ನೋಂದಾಯಿಸಿಕೊಳ್ಳಲು ೨೨/೦೮/೨೦೨೬ ಕೊನೆಯ ದಿನವಾಗಿರುತ್ತದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *