ಶ್ರೀ ಒಪ್ಪೊತ್ತಿನ ಚೆನ್ನವೀರ ಸ್ವಾಮಿಗಳವರ ಸ್ಮರಣೆ
ಚಿತ್ರದುರ್ಗ:
ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಮೂಲಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಶ್ರಾವಣಮಾಸದ ಪ್ರಯುಕ್ತ ಬುಧವಾರ ವಚನಾಭಿಷೇಕ ಮತ್ತು ಇನ್ನಿತರ ಪೂಜಾ ಕೈಂಕರ್ಯಗಳು ನೆರವೇರಿದವು.
ನಂತರ ಮುರುಘಾ ಪರಂಪರೆಯ ೮ನೇ ಪೀಠಾಧಿಪತಿಗಳಾದ ಶ್ರೀ ಒಪ್ಪೊತ್ತಿನ ಚೆನ್ನವೀರ ಸ್ವಾಮಿಗಳವರ ಸ್ಮರಣೆ ಮಾಡಿ ನಂತರ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಗೌರವ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ, ಕೊಲ್ಲಾಪುರದ ಶಿವಾನಂದ ಸ್ವಾಮಿಗಳು, ಗುರುಮಠಕಲ್‌ನ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು, ಗುಬ್ಬಿಯ ಬಸವ ಬೃಂಗೇಶ್ವರ ಸ್ವಾಮಿಗಳು, ಬಸವ ಚೇತನ ಸ್ವಾಮಿಗಳು ಹಾಗೂ ಬಸವೇಶ್ವರ ಆಸ್ಪತ್ರೆಯ ಸಿಬ್ಬಂದಿಗಳು, ಮತ್ತಿತರರು ಭಾಗವಹಿಸಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
