ಕುಂಬಳಗೋಡು ಬಸವ ಮೂರ್ತಿಗೆ ನೆರವು ನೀಡಲು ಸೋಮಣ್ಣ ಭರವಸೆ

ಬಸವ ಮೀಡಿಯಾ
ಬಸವ ಮೀಡಿಯಾ

ಧರ್ಮಗುರು ಬಸವಣ್ಣನವರ, ನೀಲಮ್ಮ ತಾಯಿಯವರ ಲಿಂಗೈಕ್ಯ ಸಂಸ್ಮರಣಾ ಸಮಾರಂಭ

ಬೆಂಗಳೂರು

ಕುಂಬಳಗೋಡಿನಲ್ಲಿ ನಿರ್ಮಾಣವಾಗುತ್ತಿರುವ ಬಸವಣ್ಣನವರ ಮೂರ್ತಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯಸಚಿವರಾದ ವಿ. ಸೋಮಣ್ಣನವರು ಭಾನುವಾರ ಭರವಸೆ ನೀಡಿದರು.

ನಗರದ ಸರ್ ಕೆ. ಪಿ. ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ನಡೆದ ಧರ್ಮಗುರು ಬಸವಣ್ಣನವರ 831ನೇ ಲಿಂಗೈಕ್ಯ ಸಂಸ್ಮರಣೆ ಹಾಗೂ ನೀಲಮ್ಮ ತಾಯಿಯವರ ಲಿಂಗೈಕ್ಯ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಗತ್ತಿಗೆ ಗುರು ಬಸವಣ್ಣನವರು ಕೊಟ್ಟ ಕೊಡುಗೆಗಳನ್ನು ಸ್ಮರಿಸುತ್ತಾ, ಇತರೆ ಯಾರನ್ನೂ ಬಸವಣ್ಣನವರಿಗೆ ಹೋಲಿಸಿ ಮಾತನಾಡುವುದನ್ನು ಸೋಮಣ್ಣ ತೀವ್ರವಾಗಿ ವಿರೋಧಿಸಿದರು.

ಬಸವಧರ್ಮ ಪೀಠದ ದ್ವಿತೀಯ ಜಗದ್ಗುರುಗಳಾದ ಡಾ. ಗಂಗಾ ಮಾತಾಜಿಯವರು ಮಾತನಾಡುತ್ತ, ಧರ್ಮಗುರು ಬಸವಣ್ಣನವರು ಮತ್ತು ನೀಲಮ್ಮ ತಾಯಿಯವರು ಯೋಗಪ್ರಕ್ರಿಯೆಯ ಮೂಲಕ ಇಚ್ಛಾಮರಣಿಗಳಾಗಿ ದೇಹತ್ಯಾಗ ಮಾಡುವ ಮೂಲಕ ಕಾಯಲಿಂಗೈಕ್ಯ ಹೊಂದಿದರು ಎಂದು ತಿಳಿಸಿದರು.

ವಿಶ್ವಕಲ್ಯಾಣ ಮಿಷನ್ ಚಾರಿಟಬಲ್ ಟ್ರಸ್ಟ್ ಹಾಗೂ ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿಯ ವತಿಯಿಂದ ನಡೆದ ಸಂಸ್ಮರಣೆ ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ವಿಶ್ರಾಂತ ಉಪಲೋಕಾಯುಕ್ತರಾದ ಸುಭಾಷ ಬಿ. ಆದಿ ಅವರು ಬಸವ ಧ್ವಜಾರೋಹಣ ನೆರವೇರಿಸಿದರು.

ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ, ಸಂಗೀತ ಹಾಗೂ ಚಲನಚಿತ್ರ ನಿರ್ದೇಶಕರು ಹಾಗೂ ನಿರ್ಮಾಪಕರಾದ‌ ಸಾಧುಕೋಕಿಲ ಅವರಿಗೆ ಶ್ರೀ ಬಹುರೂಪಿ ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.

“ಸಚ್ಚಿದಾನಂದ ಪ್ರಿಯೆಯ ವಚನಗಳು,” “ವಚನಸಂಗಮ” ಮತ್ತು “ಅಂತರಂಗ ಇದೇ ಬಹಿರಂಗ” ಮೂರು ಪುಸ್ತಕಗಳ ಬಿಡುಗಡೆ ಮಾಡಲಾಯಿತು.

ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜ್ಞಾನೇಶ್ವರಿ ಮಾತಾಜಿ, ಪ್ರಭುಲಿಂಗ ಸ್ವಾಮೀಜಿ, ಬಸವಯೋಗಿ ಸ್ವಾಮೀಜಿ, ಡಾ. ಎಸ್.‌ ಪಿ. ದಯಾನಂದ, ನಿರ್ದೇಶಕರು ಡಿ. ಎಸ್‌ ಮ್ಯಾಕ್ಸ್‌ ಸಮೂಹ ಸಂಸ್ಥೆ ಬೆಂಗಳೂರು, ತಾಯ್ನಾಡು ರಾಘವೇಂದ್ರ, ಸಂಸ್ಥಾಪಕ ರಾಜ್ಯಾಧ್ಯಕ್ಷರು, ಕರವೇ ಗಜಸೇನೆ ಬೆಂಗಳೂರು, ಶ್ರೀಮತಿ ಸಿಂಧೂರ ಮುಖ್ಯ ನಿರೂಪಕರು ಪವರ್‌ ಟಿ.ವಿ, ಡಾ. ಅಮರೇಶ ಮಿಣಜಗಿ ಮತ್ತಿತರರು ಉಪಸ್ಥಿತರಿದ್ದರು.

ಕೆ. ವೀರೇಶಕುಮಾರ, ರಾಜ್ಯಾದ್ಯಕ್ಷರು ರಾಷ್ಟ್ರೀಯ ಬಸವದಳ ಇವರು‌ ಅಧ್ಯಕ್ಷತೆ ವಹಿಸಿದ್ದರು, ಚಂದ್ರಮೌಳಿ ಎನ್‌. ಲಿಂಗಾಯತ, ಪ್ರಧಾನಕಾರ್ಯದರ್ಶಿ ರಾಷ್ಟ್ರೀಯ ಬಸವದಳ ಕೇಂದ್ರ ಸಮಿತಿ ಇವರು ಸ್ವಾಗತಿಸಿದರು.
ನಿರೂಪಣೆಯನ್ನು ಭದ್ರಾವತಿ ರಾ.ಬ.ದಳದ ನಂದಿನಿ ವೈ. ಮಾಡಿದರು. ನೂರಾರು ಬಸವಭಕ್ತರು ಉಪಸ್ಥಿತರಿದ್ದರು.

ಪ್ರತಿವರ್ಷವೂ ಶ್ರಾವಣ ಮಾಸದ ಐದನೇ ದಿನದಂದು ವಿಶ್ವಗುರು ಬಸವಣ್ಣನವರು ಲಿಂಗೈಕ್ಯರಾದ ಪ್ರಯುಕ್ತ ಆ ದಿನವನ್ನು “ಬಸವಪಂಚಮಿ” ಎಂದೂ ಮತ್ತು ಆರನೇ ದಿನ ಬಸವಣ್ಣನವರ ವಿಚಾರಪತ್ನಿ ನೀಲಾಂಬಿಕೆ ಅವರು ಲಿಂಗೈಕ್ಯರಾದ ಪ್ರಯುಕ್ತ ಆ ದಿನವನ್ನು ನೀಲಾಂಬಿಕಾ ಷಷ್ಟಿ ಎಂದೂ ಬಸವಾನುಯಾಯಿಗಳು ಮತ್ತು ಬಸವಾಭಿಮಾನಿಗಳು ಶ್ರದ್ದಾಭಕ್ತಿಯಿಂದ ಸ್ಮರಿಸಿಕೊಳ್ಳುತ್ತಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
2 Comments
  • ಒಳ್ಳೆಯ ಕಾರ್ಯಕ್ರಮವಾಗಿದೆ.ಜೈಬಸವ

  • ಈ ರೀತಿಯ ಬಸವ ಧರ್ಮ / ಲಿಂಗಾಯತ ಧರ್ಮದ ಸಂಪ್ರದಾಯಗಳು ಲಿಂಗಾಯಿತ ಧರ್ಮೀಯರಲ್ಲಿ ಸಾರ್ವತ್ರಿಕವಾಗಿ ವ್ಯಾಪಕವಾಗಿ ಆಚರಣೆಯಲ್ಲಿ ಬರಬೇಕು. ಧರ್ಮ ಶ್ರದ್ಧೆ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಧರ್ಮ ಉಳಿಯುತ್ತದೆ.

Leave a Reply

Your email address will not be published. Required fields are marked *