ಶ್ರಾವಣ; ಮನೆಯಲ್ಲಿ ಮಹಾಮನೆ ಕಾರ್ಯಕ್ರಮ
ಹಾವೇರಿ:
ಸರ್ವಸಮಾನತೆ, ಸಕಲ ಜೀವಿಗಳಿಗೆ ಲೇಸು, ಸತ್ಯ, ನ್ಯಾಯ, ನೀತಿ, ಸಂಸ್ಕಾರ ನೀಡುವ ಸರಳ ಮಾರ್ಗಗಳೇ ಶರಣರ ಬದುಕಿನ ಆಧಾರ ಸ್ತಂಭಗಳು ಎಂದು ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮಿಜಿ ಹೇಳಿದರು.
ಬಸವ ಬಳಗದಿಂದ ಶ್ರಾವಣ ಮಾಸದ ಅಂಗವಾಗಿ ನಗರದ ವಿನಾಯಕ ನಗರದಲ್ಲಿ ಮಲ್ಲಿಕಾರ್ಜುನ ಹಿಂಚಿಗೇರಿ ಅವರ ಮನೆಯಲ್ಲಿ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬದುಕನ್ನು ಪ್ರೀತಿಸುವ, ಮಾನವೀಯ ಸಂಬಂಧಗಳನ್ನು ಪರಸ್ಪರ ಗಟ್ಟಿಗೊಳಿಸಿ ಸಮಸಮಾಜ ನಿರ್ಮಿಸುವುದೇ ಶರಣರ ಉದ್ದೇಶವಾಗಿತ್ತು ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಹಾವೇರಿ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ ಮಾತನಾಡಿ, ಶರಣರ ತ್ಯಾಗ ಇದೀಗ ಅತ್ಯಂತ ಫಲಪ್ರದವಾಗಿ ಸಮಾಜಕ್ಕೆ ಸದ್ವಿನಿಯೋಗವಾಗುತ್ತಿದೆ. ಅವರ ನಡೆ-ನುಡಿ ಮನುಷ್ಯನ ಅಂತರಂಗ ಹಾಗೂ ಬಹಿರಂಗದ ಶುದ್ದಿಗೆ ಅಡಿಪಾಯ.
ವಚನಗಳು ಬರಿ ವಾಕ್ಯಗಳಾಗಿರದೆ ಮನುಷ್ಯನ ಬದುಕಿನ ಭಾವ ಬಿಂಬಗಳಾಗಿವೆ ಎಂದರು.
ಬಳಗದ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ ಪ್ರಾಸ್ತಾವಿಕ ಮಾತನಾಡಿ, ಶಿವಶರಣರ ಆಚಾರ, ವಿಚಾರ, ವಚನಗಳ ಸಾರದ ಶ್ರೇಷ್ಠತೆಯನ್ನು ಮನೆ ಮತ್ತು ಮನಕ್ಕೆ ಮುಟ್ಟಿಸಿ, ಅರ್ಥೈಸಲು ಪ್ರಯತ್ನಿಸುವುದೇ ಮನೆಯಲ್ಲಿ ಮಹಾಮನೆಯ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.
ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಮಾತನಾಡಿ, ವಚನ ಸಾಹಿತ್ಯ ಸರ್ವಜನಾಂಗಕ್ಕೂ, ಸರ್ವಕಾಲಕ್ಕೂ ಸಲ್ಲುವ ಸಾಹಿತ್ಯವಾಗಿದ್ದು ವಚನಕಾರರ ಆಶಯವನ್ನು ಅನುಷ್ಠಾನಕ್ಕೆ ತರುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕಿದೆ ಎಂದರು.
ಶಿವಬಸಪ್ಪ ಮುದ್ದಿ ಶರಣ ಸಾಹಿತ್ಯದ ಕುರಿತಾಗಿ ಮಾತನಾಡಿದರು. ಕಾವ್ಯ ಅಂಗಡಿ, ಅಕ್ಕಮಹಾದೇವಿ ಹಾನಗಲ್ಲ ವಚನ ಸಂಗೀತ ನೀಡಿದರು. ದರ್ಶನ ಹಿಂಚಿಗೇರಿ ಸ್ವಾಗತಿಸಿದರು. ಐಶ್ವರ್ಯ ವಂದಿಸಿದರು. ದಿವ್ಯಾ ಹಿಂಚಿಗೇರಿ ಪ್ರಾರ್ಥಿಸಿದರು. ಎನ್.ಬಿ.ಕಾಳೆ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಗುರುಶಾಂತಪ್ಪ ಹಿಂಚಿಗೇರಿ, ಸುರೇಶ್ ಎ.ಆರ್, ಚನ್ನವೀರಪ್ಪ ಬಿ, ಬಳಗದ ಗೌರವಾಧ್ಯಕ್ಷ ಮುರಿಗೆಪ್ಪ ಕಡೆಕೊಪ್ಪ, ಈಶ್ವರ ಪತ್ರಿ, ಉಳಿವೆಪ್ಪ ಪಂಪಣ್ಣವರ, ಕೆ.ಸಿ. ಪಾವಲಿ, ಸ್ವರೂಪ, ಶಿವಯೋಗಿ ಬೆನ್ನೂರ, ರಾಜೇಂದ್ರ ಕಾಳೆ, ಚಂದ್ರಶೇಖರಯ್ಯ ಚುಚಿ೯ಹಾಳಮಠ, ಬಸವರಾಜ ಬೆಲ್ಲದ, ಮಲ್ಲಿಕಾರ್ಜುನ ಅಗಡಿ, ಚಂದ್ರಶೇಖರ ಮಾಳಗಿ, ಕೆ.ಎಂ. ವಿಜಾಪುರ, ಮಠಪತಿ, ಪುಟ್ಟಪ್ಪ, ನಾಗರಾಜ ವಿಭೂತಿ, ಮುತ್ತಣ್ಣ ಪುರದ, ಚೇತನ್ ಯಳಗೇರಿ, ಡಿ. ಎಸ್. ಗುತ್ತಲ, ನಾಗೇಂದ್ರಪ್ಪ ಮಂಡಕ್ಕಿ, ಈರಣ್ಣ ಹಿಂಚಿಗೇರಿ, ನಾಗೇಶ ಅಕ್ಕಿ, ಮಂಜುನಾಥ ಅಂಗಡಿ, ಎಸ್.ಎಸ್. ಸೋಮನಾಳ, ಶಿವನಾಗಪ್ಪ, ಅಭಿಷೇಕ, ಆತೀಶ, ಸೌರಭ, ಶಿವಯೋಗಿ ಅಂಗಡಿ, ಸಿದ್ಲಿಂಗಪ್ಪ ಗಾಂಜಿ, ಲಲಿತಾ, ಅನಿತಾ, ಗೀತಾ ಎ. ಎಸ್, ಭಾರತಿ, ಕೃತಿಕಾ, ಶೋಭಾ, ಮಹದೇವಮ್ಮ, ಉಮಾ ಅಕ್ಕಿ , ರೇಷ್ಮಾ, ಶಾಂತಮ್ಮ ಉಳ್ಳಾಗಡ್ಡಿ, ಅನೇಕರು ಭಾಗಿಯಾಗಿದ್ದರು.
