ನಿಜಾಚರಣೆ: ನಂಜನಗೂಡಿನಲ್ಲಿ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ನಂಜನಗೂಡು:

ಇಲ್ಲಿನ ವಿದ್ಯಾನಗರ ಬಡಾವಣೆಯ ಜಯದೇವಿತಾಯಿ ಲಿಗಾಡೆ ಮಾರ್ಗ ನಿವಾಸಿಯಾಗಿರುವ ನಿವೃತ್ತ ಶಿಕ್ಷಕ ನೀಲಕಂಠಪ್ಪ ಮತ್ತು ಮಾದಲಾಂಬಿಕೆ ಅವರ ಮಗಳು ‘ರಂಜಿತಾ’ ಅವರಿಗೆ ಈಚೆಗೆ ಗರ್ಭಲಿಂಗ ದೀಕ್ಷೆ ಕಾರ್ಯಕ್ರಮ ನಡೆಸಲಾಯಿತು.

ಗುಂಡ್ಲುಪೇಟೆ ತಾಲೂಕಿನ ಮೂಡಗೂರು ವಿರಕ್ತಮಠದ ಶ್ರೀ ಇಮ್ಮಡಿ ಉದ್ದಾನ ಸ್ವಾಮಿಗಳವರು ಇಷ್ಟಲಿಂಗ ಪೂಜೆ ಕಾರ್ಯಕ್ರಮದೊಂದಿಗೆ ಗರ್ಭವತಿ ರಂಜಿತಾ ಅವರಿಗೆ ಗರ್ಭಲಿಂಗ ದೀಕ್ಷೆ ನೀಡಿದರು.

ದೀಕ್ಷೆಯನ್ನು ನೀಡುತ್ತ ಅನುಭಾವ ನೀಡಿದ ಶ್ರೀಗಳು, 12ನೇ ಶತಮಾನದಲ್ಲಿ ಬಸವಣ್ಣನವರು ಮತ್ತು ಬಸವಾದಿ ಶರಣರು ವಿಶೇಷವಾಗಿ, ವಿಶಿಷ್ಟವಾಗಿ ಈ ದೀಕ್ಷೆ ನಡೆಸಿಕೊಂಡು ಬರುತ್ತಿದ್ದರು.

ಬಸವಣ್ಣನವರು ತಮ್ಮ ಅಕ್ಕ ನಾಗಲಾಂಬಿಕೆ ಅವರಿಗೆ ಈ ದೀಕ್ಷೆ ನೀಡಿದ್ದರೆಂದು ವಚನಗಳು ಮತ್ತು ಕೆಲವು ಗ್ರಂಥಗಳಲ್ಲಿ ಉಲ್ಲೇಖವಾಗಿರುವುದು ಕಂಡುಬರುತ್ತದೆ ಎಂದರು.

ಈ ಸಂಸ್ಕಾರ ವಿಶೇಷವಾಗಿದ್ದು ಮತ್ತು ವಿಶಿಷ್ಟವಾಗಿದ್ದು ಇದೊಂದು ವೈಜ್ಞಾನಿಕ ಕ್ರಮವೂ ಆಗಿರುತ್ತದೆ. ಆದ್ದರಿಂದ ಗರ್ಭವತಿಯಾದ ತಾಯಿ ಶರಣರ ಕಾಯಕ, ದಾಸೋಹ, ಶಿವಚಿಂತನೆ ಮತ್ತು ಸದೃಢ ರಾಷ್ಟ್ರವನ್ನು ಕಟ್ಟುವ ಬಗೆಯ ಚಿಂತನೆಯೊಂದಿಗೆ ಒಳ್ಳೆಯ ವಿಚಾರಗಳನ್ನು ಆಲೋಚನೆ ಮಾಡುವಂತಿರಬೇಕು. ಮತ್ತು ಉತ್ತಮವಾದ ಆಹಾರವನ್ನು ಸೇವಿಸಬೇಕೆಂದು ಶ್ರೀಗಳು ಆಶೀರ್ವಚನ ನೀಡಿ ಅರಿವು ಮೂಡಿಸಿದರು.

ಈ ರೀತಿಯ ಕಾರ್ಯಕ್ರಮ, ಆಲೋಚನೆಗಳಿಂದ ಹುಟ್ಟುವ ಮಗು ಉತ್ತಮ ಆಲೋಚನೆಯೊಂದಿಗೆ ಮುಂದೆ ಬೆಳೆಯಬಲ್ಲದೆಂದು ವೈಜ್ಞಾನಿಕ ಕಾರಣಗಳೊಂದಿಗೆ ಗಣಾಚಾರಿ ಚೌಹಳ್ಳಿ ಲಿಂಗರಾಜಪ್ಪನವರು ಮತ್ತು ಕಾಸು ನಂಜಪ್ಪನವರು ತಿಳಿಸಿ ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವ ಬಸವ ಸೇನೆಯ ಅಧ್ಯಕ್ಷರಾದ ಬಸವಯೋಗೇಶ ಗುರುಗಳು ಹಾಜರಿದ್ದು ಕಾರ್ಯಗಳ ನಡೆಸಿಕೊಟ್ಟರು.

ರಂಜಿತಾ ಅವರ ಮಾವ-ಅತ್ತೆ ಕಮರಹಳ್ಳಿಯ ನಂಜುಂಡಸ್ವಾಮಿ-ಸೌಭಾಗ್ಯ ಅವರು, ಗಂಡನಾಗಿರುವ  ಕಿರಣಕುಮಾರ ಅವರು ಇದ್ದರು.

ಕಾರ್ಯಕ್ರಮದಲ್ಲಿ ಹಂಗಳಪುರ ಬೋರಮ್ಮ, ಸುರೇಶಣ್ಣ, ಜ್ಯೋತಿಅಕ್ಕ, ಅಕ್ಕಮಹಾದೇವಿ ಹಾಸ್ಟೆಲಿನ ಅಧ್ಯಕ್ಷರಾದ ಬಿ. ಚನ್ನಪ್ಪಣ್ಣ, ವಸಂತಕ್ಕ, ಅನ್ನಪೂರ್ಣ ನಂದೀಶ್ವರ, ಮಧು ಶಂಕರ, ಸುಜಾತಮ್ಮ ಗಂಗಾಧರ, ರೂಪಕ್ಕ, ಕವಿತಕ್ಕ, ಕಣ್ಣೆನೂರ ನಾಗೇಶ, ಎಂ.ಪಿ. ಪ್ರಕಾಶ, ಕಮರಹಳ್ಳಿ ನಾಗರಾಜ, ಮಲ್ಕುಂಡಿ ಜಗದೀಶ ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ. ಜೈ ಬಸವ

Leave a Reply

Your email address will not be published. Required fields are marked *