ಶಿಕ್ಷಕರ ದಿನಾಚರಣೆ
ಬೆಳಗಾವಿ:
ಗುರುವಿನ ಸ್ಥಾನ ಪರಮ ಪವಿತ್ರವಾದದ್ದು. ಶಿಕ್ಷಕರಾಗಿ ದೊರೆತಿರುವ ಅವಕಾಶವನ್ನು ಸಮಾಜಕ್ಕೆ ಧಾರೆ ಎರೆಯುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ. ಅದನ್ನವರು ಪ್ರಾಮಾಣಿಕವಾಗಿ ಮಾಡಬೇಕೆಂದು ಶ್ರೀದೇವಿ ನರಗುಂದ ಹೇಳಿದರು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಲಿಂಗಾಯತ ಸಂಘಟನೆ ವತಿಯಿಂದ ಡಾ ಫ.ಗು. ಹಳಕಟ್ಟಿ ಭವನದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆಯನ್ನು ಸದಾಶಿವ ದೇವರಮನಿ ವಹಿಸಿದ್ದರು. ಅತಿಥಿಗಳಾಗಿ ಸುರೇಶ ನರಗುಂದ, ಗುರುಸಿದ್ದಪ್ಪ ರೇವನ್ನವರ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಏಳು ಜನ ನಿವೃತ್ತ ಮತ್ತು ಏಳು ಜನ ಸೇವಾನಿರತ ಶಿಕ್ಷಕರಿಗೆ ‘ಕಾಯಕ ನಿಷ್ಠ ಶಿಕ್ಷಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಸನ್ಮಾನಿತರ ಪರವಾಗಿ ಮಹೇಶ ಅಕ್ಕಿ, ಮಹಾದೇವಿ ಪಾಟೀಲ ಮಾತನಾಡಿದರು.
ಲಕ್ಷ್ಮಣ ತಿಪ್ಪನ್ನವರ ದಾಸೋಹ ಸೇವೆ ಮಾಡಿದರು. ಮಹಾದೇವಿ ಅರಳಿ ಸಾಮೂಹಿಕ ಪ್ರಾಥ೯ನೆ ನಡೆಸಿಕೊಟ್ಟರು. ಸಂಗಮೇಶ ಅರಳಿ ನಿರೂಪಿಸಿದರು.

ಬಸವರಾಜ ಕರಡಿಮಠ, ಶಂಕರ ಗುಡಸ, ಆನಂದ ಕಕಿ೯, ಅನೀಲ ರಘಶೆಟ್ಟಿ, ಪೂಜೇರಿ, ಪ.ಬ. ಕರಿಕಟ್ಟಿ, ಶೇಖರ ವಾಲಿ ಇಟಗಿ, ಪ್ರಸಾದ ಹಿರೇಮಠ, ಜಯಶ್ರೀ ಚವಲಗಿ, ಸುವಣಾ೯ ಗುಡಸ, ಸುನಂದಾ ಮಹದೇವ, ಕೆಂಪಿಗೌಡರ, ಶೀವಲೀಲಾ ಗೌಡರ, ನಂದಾ ಬಗಲಿ, ಅಕ್ಕಮಹಾದೇವಿ ತೆಗ್ಗಿ, ಎಂ. ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ, ಸುನೀಲ ಪರೀಟ, ಎಂ.ಎಂ. ಕೆಂಪೆಗೌಡ್ರ, ಬಸವರಾಜ ಬಿಜ್ಜರಗಿ, ಎಂ.ಎಸ್. ಹೊಂಗಲ, ಮಾಲಾ ಅಕ್ಕಿಶೆಟ್ಟಿ, ಶರಣ ಶರಣೆಯರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
