ನ್ಯಾಯ, ನಿಸ್ವಾರ್ಥ ಸಮಾಜ ಸೇವೆಯ ಕಾಯಕ ಮಾಡಿದ ಶರಣರು: ಇಳಕಲ್ಲ ಸ್ವಾಮೀಜಿ

ಎಸ್ಕೆ ಕೊನೆಸಾಗರ
ಎಸ್ಕೆ ಕೊನೆಸಾಗರ

ವಚನ ದರ್ಶನ ಪ್ರವಚನ ಮಂಗಲ

ಹುನಗುಂದ:

ಜಂಗಮ ಎಂಬುದು ಬಂಧು ಸ್ವರೂಪಿ. ಅದು ಅನನ್ಯ ಶಕ್ತಿ ಹಾಗೆಯೇ ಕಲ್ಯಾಣದ ಹಾದಿ. ಜ್ಞಾನ, ಅರಿವು, ಆಚಾರಗಳ ಮಹಾಸಂಗಮ. ಭೇದ ಕಾಣದ, ಮಾಡದ ಜಂಗಮ ಬದುಕು ಇಂದಿನ ಅಗತ್ಯ ಎಂದು ಡಾ.ಗುರುಮಹಾಂತ ಅಪ್ಪಗಳು ಹೇಳಿದರು.

ಅವರು ಇಲ್ಲಿನ ಬಸವ ಮಂಟಪದಲ್ಲಿ ನಡೆದ ಶ್ರಾವಣ ಮಾಸ ನಿಮಿತ್ತದ ವಚನ ದರ್ಶನ ಪ್ರವಚನ ಮಂಗಲ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಶರಣರದು ನ್ಯಾಯ, ನೀತಿ ಹಾಗೂ ನಿಸ್ವಾರ್ಥ ಸಮಾಜ ಸೇವೆಯ ಕಾಯಕ. ಅವರ ವಚನಗಳು ಆದರ್ಶ ಬದುಕಿಗೆ ಬೆಳಕಿನ ಹಾದಿ. ಅವರು ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಮಾನವ ಕಲ್ಯಾಣಕ್ಕೆ ಸಮಾನತೆ, ಭಾತೃತ್ವ, ಕಾಯಕ, ದಾಸೋಹದಂಥ ಮೌಲ್ಯಗಳನ್ನು ತಿಳಿಸಿದರು.

ಇದಕ್ಕೆ ಬಸವಣ್ಣ ಮತ್ತು ಅಲ್ಲಮನ ವೈಚಾರಿಕ ಬೆಳಕಿತ್ತು ಎಂದರು.

ನೇತೃತ್ವ ವಹಿಸಿದ ಶಿರೂರ ಡಾ. ಬಸವಲಿಂಗ ಶ್ರೀಗಳು, ಗುಳೇದಗುಡ್ಡದ ಗುರುಸಿದ್ದೇಶ್ವರ ಶ್ರೀಗಳು, ಸಂತೆಕೆಲೂರ ನವಲಿಂಗ ಶರಣರು ಮಾತನಾಡಿದರು.

ಲಿಂಗಸುಗೂರು ಸಿದ್ಧಲಿಂಗ ಶ್ರೀಗಳು, ದಾವಣಗೆರೆ ಬಸವಚೇತನ ಶ್ರೀಗಳು, ಶರಣೆ ಸಾವಿತ್ರಿ, ದೇವಿಕಾ, ಸಾಧಕ ಬಸನಗೌಡ ಬೇವೂರ, ವಿಜಯ ಮಹಾಂತೇಶ ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಅತಿಥಿಗಳಾಗಿದ್ದರು. ಬಸವ ಕೇಂದ್ರ ಅಧ್ಯಕ್ಷ ಶಿವಣ್ಣ ನಾಗೂರ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗುರುಮಹಾಂತ ಶ್ರೀಗಳು, ಪ್ರವಚನಕಾರ ಡಾ. ಬಸವಾನಂದ ಶ್ರೀಗಳು, ವಿವಿಧ ಕ್ಷೇತ್ರಗಳ ಸಾಧಕರು ಮತ್ತು ದಾನಿಗಳನ್ನು ಸತ್ಕರಿಸಲಾಯಿತು.

ಕಾರ್ಯಕ್ರಮ ನಿಮಿತ್ತ ಮಹಾಪ್ರಸಾದ ಹಾಗೂ ವಚನ ಸಂಗೀತ ಹಮ್ಮಿಕೊಳ್ಳಲಾಗಿತ್ತು. ಚಿಂತನಾ ಭಾವಿಕಟ್ಟಿ ವಚನ ಪ್ರಾರ್ಥನೆ ಸಲ್ಲಿಸಿದರು. ವೀರಣ್ಣ ಬಳೂಟಗಿ ಸ್ವಾಗತಿಸಿದರು. ಸಂಗಮೇಶ ಹೊದ್ಲೂರ ನಿರೂಪಿಸಿದರು. ಗೀತಾ ತಾರಿವಾಳ ವಂದಿಸಿದರು. ಚಂದ್ರು ಹಲಕಾವಟಗಿ, ಶರಣಪ್ಪ ಪತ್ತಾರ ಮತ್ತು ಮುತ್ತಣ್ಣ ಭಜಂತ್ರಿ ಸಂಗೀತ ಸೇವೆ ಸಲ್ಲಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ. ಜೈ ಬಸವ

Leave a Reply

Your email address will not be published. Required fields are marked *