ಭಾಲ್ಕಿ:
ಭಾರತದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಎಂಜಿನಿಯರ್ಗಳ ಕೊಡುಗೆ ಅಪ್ರತಿಮವಾಗಿದೆ ಎಂದು ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಕುಂದುರು ಕನ್ಸಟ್ರಕ್ಷನ್ಸ್ ಬೆಂಗಳೂರು ಮತ್ತು ಶ್ರೀನಿವಾಸ ಇನ್ ಫ್ರಾ ಔರಂಗಾಬಾದ್ ಸಹಯೋಗದಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರ 166ನೆಯ ಜನ್ಮದಿನದ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಎಂಜನಿಯರ್ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕೃಷಿಗೆ ನೀರುಣಿಸುವ ಜಲಾಶಯದಿಂದ ಹಿಡಿದು ಕೈಯಲ್ಲಿ ಹಿಡಿಯುವ ಸ್ಮಾರ್ಟ್ಫೋನ್ವರೆಗೆ ಮತ್ತು ಭೂಮಿಯ ರಸ್ತೆಯಿಂದ ಹಿಡಿದು ಬಾಹ್ಯಾಕಾಶದ ಉಪಗ್ರಹದವರೆಗೆ ದೇಶದ ಪ್ರತಿಯೊಂದು ಪ್ರಗತಿಯ ಹೆಜ್ಜೆಯಲ್ಲೂ ಎಂಜಿನಿಯರ್ಗಳ ಬೆವರಿನ ಹನಿಯಿದೆ ಎಂಬುದನ್ನು ಯಾರೂ ಕೂಡ ಮರೆಯುವಂತಿಲ್ಲ.

ಎಂಜನಿಯರ್ ಗಳ ಸೇವೆಯನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಕೂಡ ಯುವ ಎಂಜನಿಯರ್ ಗಳು ದೇಶದ ಪ್ರಗತಿಗೆ ವಿಭಿನ್ನ ಕೊಡುಗೆ ನೀಡುವಂತಾಗಲಿ ಹಾರೈಸಿದರು.
ನಿವೃತ್ತ ಮುಖ್ಯ ಅಭಿಯಂತರ ಜಗನ್ನಾಥ ಹಲಂಗೆ ಮಾತನಾಡಿ, ಭಾರತವನ್ನು ವಿಶ್ವದ ಮೂರನೇ ಅತಿ ದೊಡ್ಡ ಸ್ಟಾರ್ಟ್ಅಪ್ ವ್ಯವಸ್ಥೆಯನ್ನಾಗಿ ಮಾಡುವಲ್ಲಿ ಎಂಜಿನಿಯರ್ಗಳ ಐಡಿಯಾಗಳು ಮತ್ತು ತಾಂತ್ರಿಕ ಕೌಶಲ್ಯ ಪ್ರಮುಖ ಕಾರಣವಾಗಿವೆ ಎಂದು ತಿಳಿಸಿದರು.

ಉದ್ಯಮಿ ಬಸವರಾಜ ಧನ್ನೂರ ಮಾತನಾಡಿದರು. ಡಾ. ಸಂಗಶೆಟ್ಟಿ ಕಲ್ಯಾಣಿ ಅನುಭವ ನುಡಿದರು. ನಿವೃತ್ತ ಎಂಜನಿಯರ್ ಸಿದ್ದಯ್ಯ ಕಾವಡಿಮಠ ಅಧ್ಯಕ್ಷತೆ ವಹಿಸಿದ್ದರು.
ದೇವೀಂದ್ರ ಸಿರಿಗಿರೆ ಬಸವ ಗುರುವಿನ ಪೂಜೆ ನೆರವೇರಿಸಿದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಚನ್ನಬಸವಣ್ಣ ಬಳತೆ, ವಿಶ್ವನಾಥ ಒಡೆಯರ್, ಮಧು ಬಡಿಗೇರ, ಸಚಿನ ಉಚಾಟೆ, ರಾಹುಲ ಹರಸೂರ, ಪ್ರಶಾಂತ ರೆಡ್ಡಿ, ಮಲ್ಲಿಕಾರ್ಜುನ ಬಳತೆ, ಬಸವರಾಜ ಕೆಂಗನಾಳ, ರಾಜೇಂದ್ರ ನರೋಣೆ, ಶರಣಪ್ಪ ಮೇತ್ರೆ, ದಯಾನಂದ ನರೋಣೆ, ಆಕಾಶ ನರೋಣೆ ಸೇರಿದಂತೆ ಹಲವರು ಇದ್ದರು.
ವಿದ್ಯಾರ್ಥಿನಿ ಸೃಷ್ಟಿ ಬಾಬು ವಚನ ಗಾಯನ ನಡೆಸಿ ಕೊಟ್ಟರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿದರು. ಮಧುಕರ ಗಾಂವಕರ್ ನಿರೂಪಿಸಿದರು. ನಾಮದೇವ ಎಸ್. ವಂದಿಸಿದರು.
51 ಸಾವಿರ ರೂ ಪ್ರೋತ್ಸಾಹ ಧನ
ಚನ್ನಬಸವೇಶ್ವರ ಗುರುಕುಲದಲ್ಲಿ ಕಲಿತು ಐಐಟಿ ತಿರುಪತಿಯಲ್ಲಿ ಅಧ್ಯಯನ ಮಾಡುತ್ತಿರುವ ಔರಾದ ತಾಲೂಕಿನ ಚಿಂತಾಕಿ ಗ್ರಾಮದ ಭಾಗ್ಯಶ್ರೀ ಸಿದ್ರಾಮ ಪೋಷಕರಿಗೆ 51 ಸಾವಿರ ರೂ. ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಕುಂದುರು ಕನ್ಸಟ್ರಕ್ಷನ್ಸ್ ಬೆಂಗಳೂರು ಮತ್ತು ಶ್ರೀನಿವಾಸ ಇನ್ ಫ್ರಾ ಔರಂಗಾಬಾದ್ ವತಿಯಿಂದ ಭಾಗ್ಯಶ್ರೀ ಸಿದ್ರಾಮ ಪೂಜಾರಿ ಅವರಿಗೆ ನಗದು ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು.

ಎಂಜನಿಯರ್ ಗಳಿಗೆ ಸನ್ಮಾನ
ಇದೇವೇಳೆ ಎಂಜನೀಯರಿಂಗ್ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಎಂಜನಿಯರ್ ಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಎಂಜನಿಯರ್ ವಿಶ್ವನಾಥಪ್ಪ ಬಿರಾದಾರ, ಬಸವನಗೌಡ, ಸಚಿನ್, ಅಮೃತಪ್ಪ ಪಾಟೀಲ, ಚಂದ್ರಕಾಂತ ಬೋರಾಳ ಮತ್ತು ಶಿವಕುಮಾರ ತಳವಾಡೆ ಅವರನ್ನು ಸನ್ಮಾನಿತರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6
