ಗದಗ
ಇಂದು ಬೆಳಿಗ್ಗೆ ೧೦-೩೦ಕ್ಕೆ ಬಸವದಳದ ೧೭೧೬ನೇ ಶರಣ ಸಂಗಮ ಸಮಾರಂಭದಲ್ಲಿ ಬಸವ ಸಮುದಾಯ ಭವನ ಲೋಕಾರ್ಪಣೆಗೊಳ್ಳುವುದು.
ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ನಡೆಯಲಿರುವ ಸಮಾರಂಭದ ಸಾನಿಧ್ಯವನ್ನು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ ಹಾಗೂ ಗೌರವಾಧ್ಯಕ್ಷರು, ಬಸವದಳ, ಗದಗ-ಬೆಟಗೇರಿ ಇವರು ವಹಿಸುವರು.

ಪೂಜ್ಯ ಡಾ. ನೀಲಮ್ಮತಾಯಿ ಅಸುಂಡಿ ಅಧ್ಯಾತ್ಮ ಆಶ್ರಮ, ಗದಗ ಇವರು ಸಮ್ಮುಖ ವಹಿಸಿಕೊಳ್ಳಲಿರುವರು. ಅಧ್ಯಕ್ಷತೆಯನ್ನು ವಿ. ಕೆ. ಕರೇಗೌಡ್ರ ಅಧ್ಯಕ್ಷರು, ಬಸವದಳ, ಗದಗ-ಬೆಟಗೇರಿ ಇವರು ವಹಿಸಿಕೊಳ್ಳಲಿರುವರು.
ಮುಖ್ಯ ಅತಿಥಿಗಳಾಗಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳು ಹಾಗೂ ಲೋಕಸಭಾ ಸದಸ್ಯರು, ಹಾವೇರಿ-ಗದಗ, ಎಚ್. ಕೆ. ಪಾಟೀಲ, ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರು, ಗದಗ, ಎಸ್. ವ್ಹಿ. ಸಂಕನೂರ, ಶಾಸಕರು, ವಿಧಾನ ಪರಿಷತ್, ಗದಗ, ಡಿ. ಆರ್. ಪಾಟೀಲ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ, ಬೆಂಗಳೂರು ಇವರುಗಳು ಆಗಮಿಸುವರು.
ಎಸ್. ಎಸ್. ಹರ್ಲಾಪೂರ, ಪ್ರಾಚಾರ್ಯರು, ನಿಂಗಮ್ಮ ಹೂಗಾರ ಪದವಿ ಪೂರ್ವ ಕಾಲೇಜು, ಅಣ್ಣಿಗೇರಿ ಇವರು ಉಪನ್ಯಾಸ ಮಾಡುವರು.

ಅತಿಥಿಗಳಾಗಿ ಚಂದ್ರಶೇಖರ ತಡಸದ ಸದಸ್ಯರು, ನಗರಸಭೆ, ವಿದ್ಯಾವತಿ ಎ. ಗಡಗಿ ಸದಸ್ಯರು, ನಗರಸಭೆ, ಬಿ. ಬಿ. ಅಸೂಟಿ ಅಧ್ಯಕ್ಷರು, ಪಂಚ ಗ್ಯಾರಂಟಿ ಸಮಿತಿ, ಕೆ. ಎಸ್. ಚೆಟ್ಟಿ ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭೆ, ಡಾ. ಉಮೇಶ ಪುರದ ಅಧ್ಯಕ್ಷರು, ಲಿಂಗಾಯತ ಪ್ರಗತಿಶೀಲ ಸಂಘ, ಬಸವರಾಜ ಎಂ. ವೆಂಕಟಾಪೂರ ಶರಣ ಸಾಹಿತಿಗಳು, ಶಿರಗುಪ್ಪ, ಬಸವರಾಜ ಜಿ. ಹೆರಕಲ್ಲ ಇಂಜಿನೀಯರ್, ಎಂ. ಸಿ. ಐಲಿ ಇಂಜಿನೀಯರ್, ಎಸ್. ಎಂ. ಅಂಗಡಿ ಇಂಜಿನೀಯರ್, ಜಿ. ಬಿ. ಹಳ್ಯಾಳ ಅಧ್ಯಕ್ಷರು, ಬಸವ ಕೇಂದ್ರ, ಹುಬ್ಬಳ್ಳಿ, ಕೆ. ಎಸ್. ಕಲ್ಲನಗೌಡ್ರ, ಗೌರವಾಧ್ಯಕ್ಷರು, ಶಿವಾನಂದ ನಗರ ಕ್ಷೇಮಾಭಿವೃದ್ಧಿ ಸಂಘ, ಗದಗ ಇವರುಗಳು ಆಗಮಿಸುವರು.

ಬಸವದಳ, ಬಸವಕೇಂದ್ರ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘ, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಅಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಸಂಘಟಕರ ಪರವಾಗಿ ಪ್ರಕಾಶ ಅಸುಂಡಿಯವರು ವಿನಂತಿಸಿದ್ದಾರೆ.
