ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ, ಜನರ ದುಶ್ಚಟಗಳನ್ನು ದೂರ ಮಾಡಲು ಮಹಾಂತ ಜೋಳಿಗೆ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿ ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದರು.
ಅವರಿಂದ ಪ್ರೇರಿತರಾಗಿ ಸಾವಿರಾರು ಜನ ದುಶ್ಚಟಗಳನ್ನು ತ್ಯಜಿಸಿದರು. ರಾಜ್ಯಸರ್ಕಾರ ೨೦೧೭ ರಲ್ಲಿ ಅವರ ಜನ್ಮದಿನವನ್ನು (ಆಗಸ್ಟ್ ೧) ‘ವ್ಯಸನಮುಕ್ತ ದಿನ’ ಎಂದು ಘೋಷಿಸಿತು.