ಬೆಳಗಾವಿ :
ಇತ್ತೀಚೆಗೆ ಲಿಂಗಾಯತ ಧರ್ಮ ಮತ್ತು ಶರಣರ ವೈಚಾರಿಕತೆಯ ಮೇಲೆ ನಿರಂತರ ರಾಜಕೀಯ ಮತ್ತು ಸಾಂಸ್ಕೃತಿಕ ದಾಳಿಯಾಗುತ್ತಿದೆ. ಇದಕ್ಕೆ ಪರಿಹಾರವೆಂದರೆ ಲಿಂಗಾಯತ ಸಮುದಾಯ ತನ್ನದೇ ಸ್ವತಂತ್ರ ರಾಜಕೀಯ ಪಕ್ಷವನ್ನು ಹುಟ್ಟುಹಾಕಬೇಕು, ಬಸವತತ್ವ ಚಿಂತಕ, ನ್ಯಾಯವಾದಿ ಸುನೀಲ ಸಾಣಿಕೊಪ್ಪ ಹೇಳಿದರು.
ನಗರದಲ್ಲಿ ಇತ್ತೀಚೆಗೆ ನಡೆದ ವಚನ ವಿಶ್ಲೇಷಣೆ ಸಾಮೂಹಿಕ ಪ್ರಾಥ೯ನೆಯಲ್ಲಿ ಮಾತನಾಡಿದರು.
ಎಲ್ಲರೂ ಚರ್ಚಿಸಿ ‘ಲಿಂಗಾಯತ ಜನತಾ ಪಕ್ಷ’ದ ರೂಪರೇಷೆಯನ್ನು ನಿರ್ಧರಿಸಿದ ನಂತರ ಪಕ್ಷವನ್ನು ನೋಂದಣಿ ಮಾಡಲಾಗುವುದು. ಇದಕ್ಕೆ ಒಂದು ವಾಟ್ಸಾಪ್ ಗ್ರುಪ್ ಕೂಡ ರಚಿಸಲಾಗಿದ್ದು ಸಮಾನ ಮನಸ್ಕರು ಹೆಚ್ಚೆಚ್ಚು ಅದರಲ್ಲಿ ಸೇರಿಕೊಂಡು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು .

ಲಿಂಗಾಯತ ರಾಜ್ಯದಲ್ಲಿ ಅತ್ಯಂತ ಪ್ರಬಲ ಮತ್ತು ದೊಡ್ಡ ಸಮುದಾಯವಾಗಿದ್ದರೂ ಲಿಂಗಾಯತ ಸಮಾಜ, 2-3 ರಾಜಕೀಯ ಪಕ್ಷಗಳಲ್ಲಿ ಹರಿದು ಹಂಚಿಹೋಗಿದೆ. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತನ್ನದೇ ಆದ ಅಜೆಂಡಾ ಇದ್ದು, ಅದರ ಪ್ರಕಾರ ಪಕ್ಷದ ಸದಸ್ಯರು ನಡೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಅಲ್ಲಿ ಲಿಂಗಾಯತ ಸಮುದಾಯಕ್ಕೆ ಸಿಗಬೇಕಾದ ರಾಜಕೀಯ ಸ್ಥಾನಮಾನದ ಕೊರತೆಯಿಂದ ಶರಣತತ್ವಕ್ಕೆ ಆದ್ಯತೆ ಇಲ್ಲದಂತಾಗಿದೆ.
‘ಲಿಂಗಾಯತ ಜನತಾ ಪಕ್ಷ’ದಿಂದಲೇ ಲಿಂಗಾಯತ ಧರ್ಮಮಾನ್ಯತೆ ದೊರಕಲಿದೆ ಎಂದು ಸಾಣಿಕೊಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಇತಿಹಾಸದಲ್ಲಿ ಯಾವ ಧರ್ಮಕ್ಕೆ ರಾಜಾಶ್ರಯ ದೊರಕಿದೆಯೋ ಅದು ಬೆಳೆದಿದೆ, ಆಶ್ರಯ ತಪ್ಪಿದಾಗ ಅವನತಿ ಹೊಂದಿದೆ. ಅದಕ್ಕೆ ಲಿಂಗಾಯತ ಧರ್ಮವೂ ಹೊರತಾಗಿಲ್ಲ ಎಂದರು.

ವಿ.ಕೆ. ಪಾಟೀಲ ವಕೀಲರು ಮಾತನಾಡಿ, ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ಟರ ವಿರುದ್ಧ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಇತರ ಬಸವಪರ ಸಂಘಟನೆಯಿಂದ ಕೈಗೊಂಡ ಕಾನೂನು ಕ್ರಮ ಕುರಿತು ವಿವರಿಸಿದರು.
ಶರಣ ಮಹಾಂತೇಶ ತೋರಣಗಟ್ಟಿ ಮಾತನಾಡಿ, ಶರಣರು ಎಂದಿಗೂ ಅನ್ಯಾಯದ ಗಳಿಕೆಯನ್ನು ವಿರೋಧಿಸಿದರು, ಸ್ವಾಭಿಮಾನದ ಕಾಯಕದ ಮೂಲಕ ಗಳಿಸಬೇಕೆಂಬ ತತ್ವ ಹೊಂದಿದ್ದರು ಎಂಬ ಲಿಂಗಾಯತದ ಅರಿವು, ಆಚಾರ-ವಿಚಾರಗಳ ಮಹತ್ವವನ್ನು ವಿವರಿಸಿದರು.
ಸಿಖ್ಖರಂತೆ ಲಿಂಗಾಯತರು ತಮ್ಮ ಧರ್ಮದ ರಕ್ಷಣೆಗೆ ಮತ್ತು ಅಸ್ಮಿತೆಗೆ ಹೋರಾಡಲು ಬದ್ಧರಾಗಿರಬೇಕು. ಅದಕ್ಕಾಗಿ ಶರಣರ ಗಣಾಚಾರ ತತ್ವವನ್ನು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಈರಣ್ಣ ದೇಯಣ್ಣವರ ಮಾತನಾಡಿ, ಬಸವಕಲ್ಯಾಣದಲ್ಲಿ 47ನೇ ಶರಣಕಮ್ಮಟ, ಅನುಭವಮಂಟಪ ಉತ್ಸವ-2026ರ ಕುರಿತು ವಿವರ ನೀಡಿದರು.
ಶoಕರ ಗುಡಸ ಅವರು ಮಾತನಾಡಿ, ಸಿಖ್ಖ ಮತ್ತು ಮುಸಲ್ಮಾನರಲ್ಲಿ ಯಾವ ರೀತಿ ಹುಟ್ಟಿನಿಂದ ಧರ್ಮದ ಸಂಸ್ಕಾರ ನೀಡಲಾಗುತ್ತದೆ, ಅದೇ ರೀತಿ ನಾವು ನಮ್ಮ ಮಕ್ಕಳಿಗೆ ಲಿಂಗಾಯತ ಧರ್ಮದ ಸಂಸ್ಕಾರ ಕೊಟ್ಟು ಬೆಳೆಸಬೇಕು. ಲಿಂಗಾಯತ ಜನತಾ ಪಕ್ಷವು ಯಶಸ್ವಿಯಾಗಬೇಕಾದರೆ, ಅದು ದ್ರಾವಿಡ ಸಂಸ್ಕೃತಿ ಮತ್ತು ಸಮಾಜವನ್ನು ಪ್ರತಿನಿಧಿಸಬೇಕು ಎಂದು ಸಲಹೆ ನೀಡಿದರು.

ಜಯಶ್ರೀ ಚಾವಲಗಿ, ಪೂಜಾರ ಮುಂತಾದವರು ಲಿಂಗಾಯತ ಧರ್ಮದ ಅಸ್ಮಿತೆಯ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಶರಣು ಸಾಹಿತಿ ಪ್ರಕಾಶ ಗಿರಿಮಲ್ಲನವರ ಅವರ “ಲಿಂಗಾಯತ ಧರ್ಮ ಮತ್ತು ಸಂವಿಧಾನ” ಪುಸ್ತಕ ಬಿಡುಗಡೆ ಮಾಡಲಾಯಿತು.
ಪ್ರಾರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾಥ೯ನೆ ನಡೆಸಿಕೊಟ್ಟರು. ಶಿವಕುಮಾರ ಅವರು ನಾಡಗೀತೆ ಹಾಡಿದರು. ಮಹಾದೇವ ಘಾಟೆ ದಾಸೋಹ ಸೇವೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅರವಿoದ ಪಾರುಶೆಟ್ಟಿ ದoಪತಿ, ದಾನಮ್ಮ ಜಳಕಿ, ಪ್ರಕಾಶ ಗಿರಿಮಲ್ಲನವರ, ಶಿವಾನಂದ ನಾಯಕ, ಶ್ರೀದೇವಿ ನರಗುಂದ, ಅಕ್ಕಮಹಾದೇವಿ ತೆಗ್ಗಿ, ಗುರುಸಿದ್ದಪ್ಪ ರೇವಣ್ಣವರ, ಕೆಂಪಣ್ಣ ರಾಮಾಪುರಿ, ಬಾಬು ತಿಗಡಿ, ಚೆನ್ನಪ್ಪ ನರಸಣ್ಣವರ, ಅನೀಲ ರಘಶೆಟ್ಟಿ, ಸುದೀಪ ಪಾಟೀಲ ಉಪಸ್ಥಿತರಿದ್ದರು.
ಸಂಗಮೇಶ ಅರಳಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ ನರಗುಂದ ಶರಣು ಸಮರ್ಪಿಸಿದರು.


Sir i am supported for Shimoga
ಒಳ್ಳೇದು ವಿಚಾರ ಸಾಧಿಸಬೇಕು ಅಂದರೆ ಲಿಂಗಾಯತ ಧರ್ಮ ರಕ್ಸಿ ಸಬೇಕು 👍🏻ಧನ್ಯವಾದಗಳು 💐
ಓಳ್ಳೇಯ ಚಿಂತನೆ ಆದರೆ ಲಿಂಗಾಯತ ಜನತಾ ಪಕ್ಷದ ಬದಲು ಬಸವಣ್ಣ ನವರು ಕಟ್ಟಿದ ಅನುಭವ ಮಂಟಪ ಪ್ರಾದೇಶಿಕ ಪಕ್ಷ ವಾಗಲಿ, ಹಾಗೂ ಎಲ್ಲರನ್ನೂ ಒಳಗೊಂಡತೆ ಸಂಘಟನೆ ಯಾಗಬೇಕು ,ಪಕ್ಷದ ಧ್ಯೇಯ ಉಚಿತ ಶಿಕ್ಷಣ, ಆರೋಗ್ಯ, ಪ್ರತಿಯೊಬ್ಬರೂ ಕಾಯಕ ಯೋಗಿಗಳಾಗಬೇಕು, ಸಹಕಾರದ ತತ್ವ ದಲ್ಲಿ ಬದುಕನ್ನು ನಡೆಸಬೇಕು, ಹೀಗೆ ಬಸವಣ್ಣನವರ ಮಾಗ೯ದಲ್ಲಿ ಪಕ್ಷ ಸಂಘಟನೆ ಯಾಗಲಿ ಈಗಿನ ಪಕ್ಷದ ರೀತಿ ಯಲ್ಲಿ ಮಾಡುವುದಾದರೆ ಬೇಡವೇ ಬೇಡ
ಒಳ್ಳೆಯ ವಿಚಾರ ಎಲ್ಲಾ ಉಪ ಪಂಗಡದವರನ್ನು ಸೇರಿಸಿ ಮಾಡಬೇಕು
ಧರ್ಮ ರಕ್ಷಕ ದಳ
I support Veeresh Mahamane’s opinions about Starting anyone who can start New political party..
ಒಳ್ಳೆಯ ವಿಚಾರ ಲಿಂಗಾಯತ ಜನತಾ ಪಕ್ಷ ಉದಯವಾಗಲಿ.ಅದಕ್ಕೆ ನಮ್ಮ ಬೆಂಬಲವಿದೆ. ಜೈ ಬಸವ ಶರಣು ಶರಣಾರ್ಥಿ
Please stop these all .. ಬೇಕಿದ್ರೆ ಸಂಘಟನೆ ಮಾಡಿ.. ಅದನ್ನ ಬಿಟ್ಟು ಲಿಂಗಾಯತರ ರಾಜಕೀಯ ಪಕ್ಷ ಯಾಕೆ.. ಎಷ್ಟು ಜನ vote ಹಾಕತಾರೆ.. ಬರೀ vote.. ವಡಿ ತಿರಾ.. Aste….