ಶರಣಸಂಸ್ಕೃತಿ ಉತ್ಸವದಲ್ಲಿ ಯೋಗ-ಆರೋಗ್ಯ ಶಿಬಿರ

ಬಸವ ಮೀಡಿಯಾ
ಬಸವ ಮೀಡಿಯಾ

ಯೋಗ ಅಶಿಸ್ತಿನ ದಿನಚರಿಗೆ ಕಡಿವಾಣ ಹಾಕಿ ಶಿಸ್ತನ್ನು ಕಲಿಸಲು ಪ್ರೇರಕ: ಡಾ. ಬಸವಕುಮಾರ ಶ್ರೀ

ಚಿತ್ರದುರ್ಗ :

ನಮ್ಮಲ್ಲಿನ ಕೆಲ ಅಶಿಸ್ತಿನ ದಿನಚರಿಯ ಕಾರಣ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಿ ಅನಾರೋಗ್ಯಕ್ಕೆ ತುತ್ತಾಗುತ್ತ ಅಲ್ಪಾಯುಷ್ಯದಲ್ಲಿಯೇ ಮರಣ ಹೊಂದುತ್ತಿರುವುದು ವಿಷಾದಕರ ಸಂಗತಿ. ಇದನ್ನು ಗಮನಿಸಿ ಶ್ರೀಮಠವು ಪ್ರತಿವರ್ಷ ನಡೆಸುತ್ತಿರುವ ಶರಣಸಂಸ್ಕೃತಿ ಉತ್ಸವ ಸಂದರ್ಭದಲ್ಲಿ ಮಾನಸಿಕ ಸದೃಢತೆಗೆ ಸಹಜ ಶಿವಯೋಗ ಏರ್ಪಡಿಸುತ್ತ ಬರುತ್ತಿತ್ತು.

ಅದರೊಂದಿಗೆ ಶರೀರವೂ ಸದೃಢವಾಗಿರಲೆಂದು ಕಳೆದೆರಡು ವರ್ಷಗಳಿಂದ ಯೋಗಾಸನ ತರಬೇತಿಯನ್ನು ಆಯೋಜಿಸಲಾಗುತ್ತಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ನುಡಿದರು.

ಅವರು ಶ್ರೀಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿಂದು ಶರಣಸಂಸ್ಕೃತಿ ಉತ್ಸವ-೨೦೨೬ರ ಸಂದರ್ಭದಲ್ಲಿ ಯೋಗಾಸನ ತರಬೇತಿ ಏರ್ಪಡಿಸುವ ಸಲುವಾಗಿ ನಡೆದ ನಗರದ ವಿವಿಧ ಬಡಾವಣೆಗಳಲ್ಲಿ ಯೋಗಾಸನ ತರಬೇತಿ ನಡೆಸುತ್ತಿರುವ ಮುಖ್ಯಸ್ಥರು, ತರಬೇತಿ ಪಡೆಯುವವರು ಹಾಗೂ ವಿವಿಧ ಸಮಾಜ ಸಂಘಟನೆಗಳ ಪದಾಧಿಕಾರಿಗಳ ಸಮಾಲೋಚನಾ ಸಭೆಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಇಂದಿನ ದಿನಮಾನದಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಬಹಳ ಜನರು ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿದ್ದಾರೆ. ಹೆಚ್ಚಾಗಿ ಯುವಜನತೆಯೂ ಸೇರಿರುವುದು ದುರಂತದ ಸಂಗತಿ. ತಿಂದುಂಡು ದಷ್ಟಪುಷ್ಟವಾಗಿರುವ ಸಮಯದಲ್ಲಿ ಚೆನ್ನಾಗಿ ಓದುವ ಸಂದರ್ಭದಲ್ಲಿ ಕೆಟ್ಟ ಚಟಗಳಿಗೆ ದಾಸರಾಗಿ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ತಪ್ಪಿಸಲು ಏಕಾಗ್ರತೆಗಾಗಿ ಶರೀರದ ಸಮಸ್ಥಿತಿ ಹಾಗೂ ಸಮತೋಲನಕ್ಕಾಗಿ ಯೋಗಾಸನದಿಂದ ಸಾಧ್ಯವಿದೆ. ಇದನ್ನು ನಡೆಸಿಕೊಡುವವರು ಅವರಿಗೆ ಬಿಡುವಿಲ್ಲ ಅಂತಹ ಯೋಗಗುರು ವೈದ್ಯಶ್ರೀ ಚೆನ್ನಬಸವಣ್ಣನವರನ್ನು ಒಪ್ಪಿಸಿ ಕರೆಸಲಾಗುತ್ತಿದೆ. ಆರೋಗ್ಯ ಹದಗೆಟ್ಟಾಗ ಯೋಗದ ಕಡೆ ಬರುವುದಕ್ಕಿಂತ ಅದಕ್ಕೂ ಪೂರ್ವದಲ್ಲಿಯೇ ಈ ತರಬೇತಿ ಪಡೆಯುತ್ತ ಇದ್ದರೆ ಮುಂದಾಗುವ ಸಮಸ್ಯೆಗಳನ್ನು ತಪ್ಪಿಸಬಹುದು.

ಲಿಂಗಭೇದವಿಲ್ಲ ವಯೋಮಾನದ ಮಿತಿಯಿರುವುದಿಲ್ಲ ಆಸಕ್ತರು ಯಾರಾದರೂ ಬರಬಹುದು. ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬಲ್ಲ ಎಲ್ಲರೂ ಭಾಗವಹಿಸಿರಿ. ಇದು ಎಲ್ಲ ಕ್ಷೇತ್ರದವರಿಗೂ ಅಗತ್ಯವಿದೆ.

ಒಂದುದಿನ ಬೆಳಗ್ಗೆ ಪ್ರಾಣಾಯಾಮ, ಧ್ಯಾ‌ನ, ಆಸನ ಮಾಡುವುದರಿಂದ ಇಡೀ ದಿನ ನೀವು ಲವಲವಿಕೆಯಿಂದ ಇರಲು ಪುಷ್ಠಿ, ಶಕ್ತಿ ಮತ್ತು ಪ್ರೇರಕ. ಚಿತ್ರದುರ್ಗದ ಜನತೆ ಯಾವುದೇ ಸಂಕೋಚ ಇಲ್ಲದೆ ಭಾಗವಹಿಸಿರಿ. ಬೆಳಗ್ಗೆ ೫.೩೦ಕ್ಕೆ ಸರಿಯಾಗಿ ಆರಂಭವಾಗಿ ೬.೪೫ ಅಥವಾ ೭ಕ್ಕೆ ಮುಗಿಸಿ ಮತ್ತೆ ಯಥಾಸ್ಥಿತಿ ನಿಮ್ಮ ನಿಮ್ಮ ಕೆಲಸಗಳಿಗೆ ಹೋಗಬಹುದಾಗಿದೆ.

ನಗರದ ಯಾವ ಯಾವ ಕಡೆಗಳಿಂದ ಬರುತ್ತೀರಾ ಅಲ್ಲಲ್ಲಿ ೧೦-೨೦ ಜನ ಸೇರಿಸಿ ಒಂದು ಪಾಯಿಂಟ್ ಮಾಡಿಕೊಂಡು ಹೇಳಿದರೆ ಆ ಜಾಗಕ್ಕೆ ವಾಹನ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಮುಂದುವರೆದು ಶರಣ ಸಂಸ್ಕೃತಿಯ ಕಾರ್ಯಕ್ರಮಗಳ ಒಂದು ಸೂಕ್ಷ್ಮ ಪರಿಚಯ ಮಾಡಿಕೊಟ್ಟ ಶ್ರೀಗಳು, ಅಕ್ಟೋಬರ್ ೧೩ರಿಂದ ೧೫ರವರೆಗೆ ಜಮುರಾ ಕ್ರೀಡಾಕೂಟ ನಡೆಯಲಿದೆ. ಇದರಲ್ಲಿ ಮಹಿಳಾ ಕ್ರೀಡಾಕೂಟವೂ ಇರುತ್ತದೆ. ವಚನ ಕಂಠಪಾಠ, ಶರಣರ ವೇಷಭೂಷಣ ಸ್ಪರ್ಧೆ, ರಂಗೋಲಿ ಸ್ಪರ್ಧೆ, ದೇಸಿ ಅಡುಗೆ ತಯಾರಿಕೆ ಸೇರಿದಂತೆ ಸ್ಪರ್ಧೆ ನಡೆದು ೧೫ರಂದು ಕ್ರೀಡಾಕೂಟ ಸಮಾರೋಪ, ಎಸ್. ಜಾನಕಿಯವರ ಸ್ಮರಣಾರ್ಥ ಗಾಯನವನ್ನು ೬೫ ಕಲಾವಿದರು ನಡೆಸಿಕೊಡಲಿದ್ದಾರೆ.

೧೬ರ ಬೆಳಗ್ಗೆ ಕೃಷಿಮೇಳ ಇದರಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಮುಂದುವರಿದ ಭಾಗವಾಗಿ ಸಾಧಕ- ಬಾಧಕಗಳ ಚರ್ಚೆ ಸೇರಿದಂತೆ ಇತರ ವಿಷಯಗಳ ಪ್ರಸ್ತಾಪ ನಡೆಯಲಿದೆ. ಜಿಲ್ಲೆಯ ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ. ೧೬ರ ಸಂಜೆ ೪ ಕೃತಿಗಳು, ಶ್ರೀ ಮುರಿಗಾ ಶಾಂತವೀರರ ಕುರಿತು, ಶ್ರೀ ಜಯವಿಭವ ಮುರುಘರಾಜೇಂದ್ರರ ಕುರಿತು ಕೃತಿಗಳ ಲೋಕಾರ್ಪಣೆ. ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರು ಮತ್ತಿತರ ಗಣ್ಯರು ಬಿಡುಗಡೆಗೊಳಿಸಲಿದ್ದಾರೆ.

೧೭ರ ಬೆಳಗ್ಗೆ ಸಾವಿರಾರು ಜನರ ಕಂಠಸಿರಿಯಲ್ಲಿ ವಚನ ಪಠಣ, ಗಾಯನ ಮತ್ತು ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮವಿದೆ. ಸಂಜೆ ಯುವಜನ ಗೋಷ್ಠಿ ನಡೆಯಲಿದೆ. ಮಹಿಳಾಗೋಷ್ಠಿ, ಜಾನಪದ ಗೋಷ್ಠಿ, ಮಕ್ಕಳ ಗೋಷ್ಠಿ ಮತ್ತು ಸಂಗೀತ ಸಂಭ್ರಮದ ಮೂಲಕ ಮುಕ್ತಾಯಗೊಳ್ಳಲಿದೆ.

ಜಯದೇವ ಜಂಗೀಕುಸ್ತಿ, ಪೀಠಾರೋಹಣ, ಶ್ವಾನಪ್ರದರ್ಶನ, ಪ್ರಾಚೀನ ವಚನ ಹಸ್ತಪ್ರತಿಗಳ ಮೆರವಣಿಗೆ ಸೇರಿದಂತೆ ಸಹಜ ಶಿವಯೋಗ, ಪ್ರತಿನಿತ್ಯ ದಾಸೋಹ ನಡೆದಿರುತ್ತದೆಂದು ವಿವರಿಸಿದರು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಲಹೆ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‌ಪೀರ್ ಮಾತನಾಡಿ, ಯೋಗ ಮಾಡಲು ಯಾವುದೇ ಜಾತಿ ಮತ ಪಂಥಗಳ ನಿರ್ಬಂಧವಿಲ್ಲ.

ಯಾರಾದರೂ ಮಾಡಬಹುದು. ನಮ್ಮ ಚಿತ್ರದುರ್ಗ ಜಿಲ್ಲೆಗೆ ಯೋಗದ ಇತಿಹಾಸವಿದೆ. ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು ಇದಕ್ಕೆ ಕಾರಣ ಎಂದರು.

ಯೋಗಾಚಾರ್ಯ ಎಚ್.ಎಸ್. ಚಿನ್ಮಯಾನಂದ ಅವರು, ಯೋಗಾಸಕ್ತರೆಲ್ಲರೂ ಈ ಸುಸಂದರ್ಭವನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳಲು ಒಂದು ತರಬೇತಿ ಇದಾಗಿದೆ. ಸದ್ಬಳಕೆ ಮಾಡಿಕೊಳ್ಳಿ, ಹೊಸ ಹೊಸ ವಿಚಾರಗಳನ್ನು ಚೆನ್ನಬಸವಣ್ಣ ಹೇಳುತ್ತಾರೆ ಎಂದು ಪ್ರಾಸ್ತಾವಿಕವಾಗಿ ಹೇಳಿದರು.

ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರುಗಳಾದ ಸಿ.ಟಿ. ಕೃಷ್ಣಮೂರ್ತಿ, ಹೆಚ್.ಸಿ. ನಿರಂಜನಮೂರ್ತಿ, ಟಿ. ವೀರಭದ್ರಸ್ವಾಮಿ, ಬಸವರಾಜ ಕಟ್ಟಿ, ಗಾಯತ್ರಿ ಶಿವರಾಂ ದಂಪತಿ, ಕೆಂಚವೀರಪ್ಪ, ವೈ.ಟಿ. ಮಹೇಂದ್ರನಾಥ, ರುದ್ರಪ್ಪ ಗೌಳಿ, ಇಂದಿರಮ್ಮ, ಮಮತಾ ಕೊಟ್ರಪ್ಪ, ನೀಲಮ್ಮ ಶಿವಯೋಗಿ, ಹೇಮಾವತಿ ಪಿ., ಡಾ. ರಘುನಾಥರೆಡ್ಡಿ, ಕುಮಾರಸ್ವಾಮಿ, ಎಸ್.ವಿ. ರವಿಶಂಕರರೆಡ್ಡಿ, ನೇತ್ರಾವತಿ, ಎಸ್.ವಿ. ಗುರುಮೂರ್ತಿ, ದೇವಾನಂದ, ನಾಗಭೂಷಣ ಬೆಣ್ಣೆ, ಪಿ.ಎಂ. ಮಲ್ಲೇಶ್, ದೇವಾನಂದನಾಯ್ಕ, ರಾಜಶೇಖರ ಎಸ್.ಟಿ., ಜೆ.ಎಸ್. ಗುರುಮೂರ್ತಿ, ಜೆ.ಎಸ್. ಮುರುಘೇಶ, ಎಲ್. ಬಸವರಾಜ, ಪ್ರಸನ್ನಕುಮಾರ, ಮಂಜುನಾಥ್, ರಾಮಾಂಜನೇಯ, ನಾಗಲಕ್ಷ್ಮಿ, ಡಾ.ಎಸ್.ಎ. ಖಾನ್, ವಿಶ್ವೇಶ್ವರಯ್ಯ, ರುದ್ರೇಶ್ ಕಿಚಡಿ, ಮೋಹನ್, ಮುರಿಗೆಮ್ಮ, ಶಶಿಕಲಾ, ಕಲ್ಲೇಶ್ ಆರ್.ಟಿ., ತಿಪ್ಪೇಸ್ವಾಮಿ ಎಂ., ವಿಜಯಕುಮಾರ್ ಪಿ.ಎಸ್., ಲೋಕೇಶ್, ಕೆ. ಬಸವರಾಜ, ದೇವರಾಜ ಮೂರ್ತಿ ಉಪ್ಪಾರ, ನೇಕಾರ ಲಿಂಗರಾಜು, ತಿಪ್ಪೇಸ್ವಾಮಿ, ಕಣಿವೆಮಾರಮ್ಮ ತಿಪ್ಪೇಸ್ವಾಮಿ ಸೇರಿದಂತೆ ನೂರಾರು ಜನ ಭಾಗವಹಿಸಿ ಸಲಹೆಗಳನ್ನು ನೀಡಿ ಯಶಸ್ವಿಯಾಗಿ ಈ ಆರೋಗ್ಯ ಸಂಭ್ರಮದಲ್ಲಿ ಪಾಲ್ಗೊಳ್ಳೋಣ ಎಂದರು.

ಶಿಕ್ಷಕ ಬಸವನಗೌಡ ಸ್ವಾಗತಿಸಿ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *