ಧಾರವಾಡ
ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಧಾರವಾಡ ಜಿಲ್ಲೆಯಲ್ಲಿ ಶನಿವಾರ ಶುರುವಾಯಿತು.
ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ ಸಮಾಜ, ಧರ್ಮದ ಮುಂದಿರುವ ಸವಾಲುಗಳ ಹಾಗೂ ಬಸವ ಸಂಘಟನೆಗಳ ರಾಜಕೀಯ ಪ್ರಭಾವ ಹಾಗು ಪ್ರಜ್ಞೆಯ ಬಗ್ಗೆ ಎರಡು ದಿನಗಳ ಗಂಭೀರ ಚರ್ಚೆ ನಡೆಯಲಿದೆ.







































ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ
ಲಿಂಗಾಯತರಲ್ಲಿ ಜಾಗ್ರತೆ ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ನಡೆಯಬೇಕು. ಮುಖ್ಯವಾಗಿ ಹಣಕಾಸಿನ ವ್ವವಸ್ಥೆಯನ್ನು ಜಾಗರೂಕತೆಯಿಂದ ಜನರ ಮನವೊಲಿಸಿ ಮಾಡಿಕೊಳ್ಳಬೇಕು. ಏಕೆಂದರೆ ಇಂದಿನ ದಿನಮಾನಗಳಲ್ಲಿ ದೂರದ್ರೃಷ್ಟಿ ಉಳ್ಳವರ ಸಂಖ್ಯೆ ಬಹಳ ಕಡಿಮೆ. ನೂರಾರು ಬಿರಿ ಕರೆದಮೇಲೆ ಬರುವದು ತಮಗೆ ಸಂಬಂಧವಿಲ್ಲವೆನ್ನುವಂತೆ ಇತರರಿಗೆ ಹಾಗಾಗಬೇಕಿತ್ತು ಹೀಗಾಗಬೇಕಿತ್ತು ಎಂದು ಎಗ್ಗಿಲ್ಲದೇ ಉಪದೇಶ ನೀಡಿ ಉಂಡು ತಿಂದು ಜಾರಿಕೊಳ್ಳುವದು. ಇದು ಕೇವಲ ಬಸವ ಮೀಡಿಯಾದ ಜವಾಬ್ದಾರಿ ಆಗಬಾರದು, ಎಲ್ಲಾ ಬಸವ ಸಂಘಟನೆಗಳ, ಬಸವಾಭಿಮಾನಿಗಳ ಜವಾಬ್ದಾರಿ ಆಗಬೇಕು. ನಿಮ್ಮ ದಕ್ಷತೆಗೆ, ಜವಾಬ್ದಾರಿಗೆ ನೂರೊಂದು ನಮನಗಳು.
ದಾರವಾಡ ಹಾಗು ಉತ್ತರ ಕರ್ನಾಟಕದಲ್ಲಿ ನಡೆಯುವ ಲಿಂಗಾಯತ ಧರ್ಮಜಾಗೃತಿ ದಕ್ಷಿಣ ಕರ್ನಾಟಕದಲ್ಲಿ ನಡೆಯುತ್ತಿಲ್ಲ.ಸುತ್ತೂರು ಶ್ರೀಗಳ ಆಶ್ರಯದಲ್ಲಿ ಲಿಂಗಾಯತರು ಸನಾತನಿಗಳಾಗುತ್ತಿದ್ದಾರೆ.
ಎಲ್ಲಿದ್ದರೂ ನಾವು ಗೌರವಸ್ಥರು ಎಂಬ ಮನಸ್ಥಿತಿಯವರನ್ನು
ಬಿಟ್ಟುಬಿಡಿ. ಈಗ ಬಸವ ಸಂಘಟನೆಗಳಿಗೆ ರಾಜಕೀಯ ಪ್ರಭಾವ ಮತ್ತು ಪ್ರಜ್ಞೆ ಮೂಡಿಸುವ ಸಲುವಾಗಿ ಬಸವ ಶಕ್ತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ, ಇದು ಸ್ತುತ್ಯಾರ್ಹ ಕ್ರಮವಾಗಿದೆ. ಬಸವ ಮೀಡಿಯಾ ಹಲವಾರು ಕಾರ್ಯಕ್ರಮಗಳಿಗೆ ಒತ್ತಾಶಯವಾಗಿ ನಿಂತಿದೆ ಬಸವಾದಿ ಶರಣರ ಮಹಾ ಮಣಿಹದಲ್ಲಿ (ಮಹಾನ್ ಕಾರ್ಯದಲ್ಲಿ) ತೊಡಗಿರುವ ಸರ್ವರಿಗೂ ಅಭಿನಂದನೆಗಳು ಮತ್ತು ಅಭಿವಂದನೆಗಳು 🌹🌹….🙏🙏……