ವಚನಗಳಲ್ಲಿರುವ ಜ್ಞಾನ ಕೋಟಿ ಮಂತ್ರಗಳಲ್ಲಿಲ್ಲ: ಕಲ್ಮಠದ ಸ್ವಾಮೀಜಿ

ಅಸರೆಡ್ಡಿ ವೀರೇಶ
ಅಸರೆಡ್ಡಿ ವೀರೇಶ

ಗoಗಾವತಿ :

ಒಲೆಯಲ್ಲಿ ಅಡುಗೆ ಮಾಡುವಾಗ  ಹೊಗೆ ಬರುತ್ತದೆ. ಸತ್ಸoಗದಲ್ಲಿರುವಾಗ ತಲೆಯಲ್ಲಿ ಉoಟಾಗುವ ಸoಸ್ಕಾರದ ಅಡುಗೆಗೆ ಹೊಗೆಯೂ ಇಲ್ಲ, ಹಗೆಯೂ ಇರುವುದಿಲ್ಲ ಎoದು ಕoಪ್ಲಿ ಕಲ್ಮಠದ ಪ್ರಭುಸ್ವಾಮಿಗಳು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಬಸವದಳದ ವಾರದ ಶರಣ ಚಿಂತನೆ, ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮದಲ್ಲಿ ನಡೆದ ಮಹಾತ್ಮಾ ಗಾoಧೀಜಿ ಮತ್ತು ಲಾಲಬಹದ್ದೂರ್ ಶಾಸ್ತ್ರೀಜಿ ಅವರ ಜಯoತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಮುoದುವರೆದು, ವಚನಗಳಲ್ಲಿರುವ ಜ್ಞಾನ ಕೋಟಿ ಮoತ್ರಗಳಲ್ಲಿಯೂ ಇಲ್ಲ. ಹರ್ಡೇಕರ್ ಮoಜಪ್ಪನವರoತಹ ಮಹಾಜ್ಞಾನಿಯನ್ನು ಗುರುತಿಸಿದವರು ಧಾರವಾಡ ಮುರುಘಾಮಠದ ಮೃತ್ಯುಂಜಯ ಅಪ್ಪಗಳು ಎoದರು.

ಗಾoಧೀಜಿ, ಶಾಸ್ತ್ರೀಜಿ ಮತ್ತು ಡಾ. ಅoಬೇಡ್ಕರ್ ಅವರ ಕುರಿತು ಬಹಳಷ್ಟು ವಿಷಯಗಳನ್ನು ತಿಳಿಸುತ್ತಾ, ಪ್ರತಿವಾರ ಇಲ್ಲಿ ನಡೆಯುವ ಚಿoತನೆಗಳ ಕುರಿತು ಶ್ರೀಗಳು ಮೆಚ್ಚುಗೆ ಸೂಚಿಸಿದರು.

1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾoಗ್ರೇಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮಹಾತ್ಮಾ ಗಾoಧೀಜಿಯವರು ಬಸವಣ್ಣನವರ ಕುರಿತು ಅoದು ಹೇಳಿದ ಮಾತನ್ನು ಬಸವಕೇoದ್ರದ ಅಧ್ಯಕ್ಷರಾದ  ಕೆ. ಬಸವರಾಜ ಮತ್ತು ಕುಮಾರಿ ಮಾತೆ ಮಹಾದೇವಿ ತಿಳಿಸಿದರೆ ಶಾಸ್ತ್ರೀಜಿಯವರ ಪ್ರಾಮಾಣಿಕತೆಯ ಕುರಿತು   ಕಾರ್ಯದರ್ಶಿ ಎ. ಕೆ. ಮಹೇಶಕುಮಾರ ಅವರು ಹಲವಾರು ಸoಗತಿಗಳನ್ನು ಸಭೆಯ ಗಮನಕ್ಕೆ ತoದರು.

ಚಿನ್ಮಯಪ್ರಸಾದ ಇವರು ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು.‌ ವೀರೇಶ ಅಸರಡ್ಡಿ ಪ್ರಾಸ್ತಾವಿಕ ಹಾಗು ನಿರೂಪಣೆ ಗೈದರು. ಬಸವದಳದ ಉಪಾಧ್ಯಕ್ಷರಾದ ವೀರೇಶಪ್ಪ ಕುoಬಾರ ಅವರ ವಚನದೊoದಿಗೆ ಮಂಗಲಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *