ಸಂವಿಧಾನದಲ್ಲಿ ಮನುಸ್ಮೃತಿ: ಕನ್ನೇರಿ ಸ್ವಾಮಿಯ ಅವಿವೇಕತನದ ಪರಮಾವಧಿ

ಪುಣೆ

ಜಗತ್ತಿನ ಸರ್ವಶ್ರೇಷ್ಠ ಸಂವಿಧಾನಗಳಲ್ಲಿ ಒಂದಾದ ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಆಳವಾದ ಅಧ್ಯಯನ, ಸಾಮಾಜಿಕ ಚಿಂತನೆ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಸಿದ್ಧಾಂತಗಳ ಸಮನ್ವಯತೆಯೇ ಸಂವಿಧಾನ.

ಇಂತಹ ಅಪರೂಪದ ಪ್ರಬುದ್ಧ ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿವೆ ಎಂದು ಹೇಳಿರುವ ಕನ್ನೆರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳ ಅವಿವೇಕತನದ ಪರಮಾವಧಿ ನಿಜಕ್ಕೂ ಖಂಡನೀಯವಾಗಿದೆ.

ಕನ್ನೇರಿ ಸ್ವಾಮಿ ಒಂದು ಸಂಘದ ಗುಲಾಮರಂತೆ ತಮ್ಮನ್ನು ತಾವು ಬಲು ಶ್ರೇಷ್ಠ ಎನ್ನುವ ಭ್ರಮೆಯಲ್ಲಿದ್ದಾರೆ.
ವಾಚಾಳಿತನ ಬಿಟ್ಟು ಕನ್ನೇರಿ ಸ್ವಾಮಿಗಳಿಗೆ ಮತ್ತೇನೂ ಗೊತ್ತಿಲ್ಲ.

ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿರುವ ಇಂತಹ ಸ್ವಾಮಿಯ ಮೇಲೆ ಕರ್ನಾಟಕ ಸರಕಾರ ಸುಮೊಟೊ ಪ್ರಕರಣ ದಾಖಲಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳ ಬೇಕು.

ಲಿಂಗಾಯತ ಧರ್ಮದ ಬಗ್ಗೆ ಅತ್ಯಂತ ಗೊಂದಲದ ವಿಚಾರ ಹರಿಬಿಡುವ ಇವರ ಮೂರ್ಖತನದ ಬಗ್ಗೆ ಬಸವ ಭಕ್ತರು ಎಚ್ಚರದಿಂದ ಇರಬೇಕು. ಇಂತಹ ವಿವಾದ ಹುಟ್ಟಿಸುವ ಸ್ವಾಮಿಗಳ ಕಾರ್ಯಕ್ರಮಗಳನ್ನು ಎಲ್ಲರೂ ಬಹಿರಂಗವಾಗಿ ಬಹಿಷ್ಕರಿಸಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *