ಗಂಗಾವತಿ
ನಗರದಲ್ಲಿ ಮಂಗಳವಾರ ನಡೆದ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದಲ್ಲಿ ಕನ್ನೇರಿ ಸ್ವಾಮಿ ಮತ್ತೊಂದು ಕಟ್ಟುಕಥೆ ಕಟ್ಟಿ ಶೋಷಿತ, ಅಸ್ಪ್ರೃಷ್ಯ ಸಮುದಾಯಗಳ ತಲೆಕೆಡಿಸುವ ಪ್ರಯತ್ನ ಮಾಡಿದರು.
ಮನುಸ್ಮೃತಿಯನ್ನು ಸಮರ್ಥಿಸುತ್ತಾ, ಬಾಬಾ ಸಾಹೇಬರು ಮನುಸ್ಮೃತಿಯನ್ನು ಯಾಕೆ ಸುಟ್ಟರು ಎನ್ನುವ ಪ್ರಸಂಗ ಬಗ್ಗೆ ಮಾತನಾಡಿದರು.
ನೀವು ಯಾಕೆ ಮನುಸ್ಮೃತಿ ಸುಟ್ಟಿರಿ ಅಂತ ಬಾಬಾ ಸಾಹೇಬರನ್ನು ಯಾರೋ ಒಬ್ಬರು ಹಿರಿಯರು ಕೇಳಿದರಂತೆ. ಅದಕ್ಕೆ ಬಾಬಾ ಸಾಹೇಬ್ರು ಹೇಳಿದರಂತೆ ಮನುಸ್ಮೃತಿಯಲ್ಲಿ ಶೂದ್ರರು ವೇದ ಕೇಳಿದರೆ, ಓದಿದರೆ ಕಾದ ಸೀಸ ಕಿವಿಯಲ್ಲಿ, ಬಾಯಲ್ಲಿ ಹಾಕಬೇಕು ಅಂತ ಬರೆದಿದ್ದರು ಅದಕ್ಕೆ ಸುಟ್ಟೆ ಎಂದು ಅಂದ್ರಂತೆ.
ಆಮೇಲೆ ಆ ಹಿರಿಯರು ಹೇಳಿದರಂತೆ: ‘ನೀವು ಓದಿದ್ದು ಅಶುದ್ದವಾದ ಮನುಸ್ಮ್ರತಿ. ಈ ಶುದ್ದವಾದ ಮನುಸ್ಮ್ರತಿ ಓದಿ ಅಂತ ಆ ಪುಸ್ತಕವನ್ನು ಬಾಬಾ ಸಾಹೇಬರಿಗೆ ಕೊಟ್ಟನಂತೆ.
ಅದನ್ನು ಓದಿದ ಬಾಬಾ ಸಾಹೇಬರು ಹೇಳಿದರಂತೆ, ಇಷ್ಟು ಅದ್ಬುವಾತ ಗ್ರಂಥ ನನ್ನ ಕೈಗೆ ಸಿಕ್ಕಿದ್ದರೆ ಮನುಸ್ಮ್ರತಿಯನ್ನು ನಾನು ಸುಡುತಿದ್ದಿಲ್ಲ. ನನಗೆ ಯಾವುದೋ ಅಶುದ್ದವಾದ ಮನುಸ್ಮ್ರತಿ ಸಿಕ್ಕಿತು. ಹಾಗಾಗಿ ಸುಟ್ಟೆ ಅಂತ.
‘ಶುದ್ಧ’ ಮನುಸ್ಮೃತಿಯನ್ನು ಓದಿದ ನಂತರ ಬಾಬಾ ಸಾಹೇಬರು ಅದರ ಆಶಯದಂತೆ ಬಹುತೇಕ ಆರ್ಟಿಕಲ್ಗಳನ್ನು ಸಂವಿಧಾನದಲ್ಲಿ ಬರೆದರಂತೆ.
ಮನುಸ್ಮೃತಿ ಒಂದು ಅದ್ಬುತ ಗ್ರಂಥ, ಅದನ್ನು ವಿದೇಶಿ ಶಕ್ತಿಗಳು ಅಶುದ್ಧ ಮಾಡಿದವು ಅಂತ ವೇದಿಕೆ ಮೇಲೆ ಕನ್ನೇರಿ ಸ್ವಾಮಿ ಹೇಳಿದರು.
ಇಂತಹ ಕಾಗಕ್ಕ, ಗುಬ್ಬಕ್ಕನ ಕಥೆ ಕಟ್ಟಿ ಅಂಬೇಡ್ಕರರನ್ನು ಅವಮಾನಿಸಿದ್ದಾರೆ.
- ಅಂಬೇಡ್ಕರಿಗೆ ಶುದ್ದ ಮನುಸ್ಮೃತಿ ಕೊಟ್ಟ ಆ ಹಿರಿಯರು ಯಾರು? *ಮನುಸ್ಮ್ರತಿಯಲ್ಲಿ ಶುದ್ಧ, ಅಶುದ್ದ ಆವೃತಿಗಳಿವೆಯಾ?
- ಮನುಸ್ಮೃತಿ ಶುದ್ಧ, ಅಶುದ್ಧ ಆ ಚರ್ಚೆ ಬಿಡೋಣ. ಒಂದು ವೇಳೆ ಮನುಸ್ಮೃತಿ ಸಮರ್ಥಿಸುವುದಾದರೆ ಈ ದೇಶದಲ್ಲಿ ಉಚ್ಛ, ನೀಚ ಎಂಬ ಮನೋಭಾವ ಬೆಳಸಿದವರು ಯಾರು?
- ಈ ದೇಶದಲ್ಲಿ ದಲಿತರನ್ನು, ಶೋಷಿತರನ್ನು ಗುಡಿ, ಕೆರೆ, ಊರ ಒಳಗೆ ಪ್ರವೇಶಿಸದಂತೆ ಮಾಡಿದವರು ಯಾರು?
- ಇಂದಿಗೂ ಹಳ್ಳಿಗಳಲ್ಲಿ ಗುಡಿಯೊಳಗೆ, ಹೋಟೆಲ್ ಒಳಗೆ ಪ್ರವೇಶಿಸದಂತೆ ಅಸ್ಪ್ರೃಷ್ಯತೆ ಆಚರಿಸುತ್ತಿರುವ ವೈದಿಕ ಮನಸ್ಸುಗಳಿಗೆ ತಮ್ಮ ಈ ಹಿಂದೂ ಸಮಾವೇಶದಿಂದ ಕೊಡುವ ಸಲಹೆಯಾದರು ಏನು?
- ದೇವರ ಹೆಸರಲ್ಲಿ, ನಂಬಿಕೆಯ ಹೆಸರಲ್ಲಿ ಈ ದೇಶದಲ್ಲಿ ದೇವದಾಸಿ ಪದ್ಧತಿ ಆಚರಣೆಗೆ ಕಾರಣರು ಯಾರು?. ಇಂದಿಗೂ ಈ ಸಮಾಜದಲ್ಲಿ ಅಸ್ಪ್ರಶ್ಯತೆ ಉಳಿವಿಗೆ ಕಾರಣರು ಯಾರು?
- *ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ಪ್ರತಿವರ್ಷ ಆಂಜನೇಯ ಜಾತ್ರೆಯಲ್ಲಿ ಸವರ್ಣೀಯರು ಶೋಷಿತರನ್ನು ಗುಡಿಯ ಒಳಗೆ ಪ್ರವೇಶಿಸದಂತೆ ಹೊಡೆದಾಟ ನಡೆದಾಗ ಎಲ್ಲಿತ್ತು ತಮ್ಮ ಆ ಹಿಂದುತ್ವ? ಈಗಲೂ ಸಹ ಸಿಂಧನೂರಿನಲ್ಲಿ ಅದರ ವಿರುದ್ದವಾಗಿ ಹೋರಾಟ ನಡೆದಿದೆ ಅಲ್ಲಿಗೆ ತಾವು ಹೋಗಿದ್ದಿರಾ? ಹಿಂದೂ ನಾವೆಲ್ಲಾ ಒಂದು ಎನ್ನುವ ತಾವು ಅಲ್ಲಿಗೆ ಹೋಗಿ ಅದನ್ನು ಇಂದಿಗೂ ಯಾಕೆ ಬಗೆಹರಿಸಿಲ್ಲ?
- ಅಂಬೇಡ್ಕರ್ ಮನುಸ್ಮೃತಿ ಯಾಕೆ ಸುಟ್ಟರು? ಒಂದು ವೇಳೆ ನೀವು ಹೇಳಿದಾಂಗೆ ಮನುಸ್ಮೃತಿ ಅಷ್ಟು ಪವಿತ್ರ ಇದ್ದರೆ, ಅಂದೇಕೆ ಅಂಬೇಡ್ಕರರಿಗೆ ಶಾಲೆಯಲ್ಲಿ ನೀರು ಕೊಡಲು ನಿರಾಕರಿಸಿದರು? ಬಂಡಿಯಿಂದ ಹೊಡೆದು ಕೆಳಗೆ ಇಳಿಸಿದವರು ಯಾರು? ಅವರನ್ನು ಗುಡಿಯೊಳಗೆ ಪ್ರವೇಶಿಸದಂತೆ, ಕೆರೆಯ ನೀರು ಮುಟ್ಟದಂತೆ ತಡೆದವರು ಯಾರು? ಕಛೇರಿಯಲ್ಲಿ ಅವರಿಗೆ ಅವಮಾನ ಮಾಡುವಂತೆ ಪ್ರೇರೆಪಿಸಿದವರು ಯಾರು?
- *ಬಸವಣ್ಣ ಹಿಂದೂ ಧರ್ಮದ ಸುಧಾರಕ, ಎಂದು ತಾವು ಹೇಳುತ್ತೀರಾ. ಬಸವಣ್ಣ ಜನಿವಾರ ಕಿತ್ತು ಹಾಕಿ ಯಾಕೆ ಹೊರಗೆ ಬಂದ. ಅಲ್ಲಿದ್ದೆ (ಜನಿವಾರ ಹಾಕಿಕೊಂಡೆ) ಸುಧಾರಣೆ ಮಾಡಬಹುದಿತ್ತಲ್ಲ?
- *ಈ ದೇಶ ಅಖಂಡ ಭಾರತವಾಗಿತ್ತು ಎನ್ನುವುದಾದರೆ ಮುಸ್ಲಿಮರು, ಬ್ರಿಟಿಷರು ಬರುವ ಪೂರ್ವಕ್ಕಿಂತಲೂ ಈ ದೇಶದ ಸಾಮ್ರಾಜ್ಯ ವ್ಯವಸ್ಥೆಯನ್ನು ತುಂಡು ತುಂಡಾಗಿ ಮಾಡಿದವರು ಯಾರು? ಸಾಮ್ರಾಜ್ಯ ಸಾಮ್ರಾಜ್ಯಗಳ ನಡುವೆ ಬೆಂಕಿ ಹಚ್ಚಿದವರು ಯಾರು?
- ವರ್ಣಾಶ್ರಮ ಧರ್ಮ, ಗುಣ, ಕರ್ಮದ ಮೇಲೆ ವಿಭಾಗ ಆಗುತ್ತೆ ಎನ್ನುವುದಾರೆ ಇಂದು ಪ್ರಾಕ್ಟಿಕಲಿ ಎಷ್ಟು ದಲಿತರು, ಶೋಷಿತರು ಬ್ರಾಹ್ಮಣರು ಆಗಿದ್ದಾರೆ ಹೇಳಿ?. ಇಷ್ಟೊಂದು ಮೇಧಾವಿಗಳಾದ ತಾವೂ ಬ್ರಾಹ್ಮಣರಾಗಿದ್ದಿರಾ, ಹೇಳಿ.
- ವರ್ಣಾಶ್ರಮ ಧರ್ಮದಲ್ಲಿ ನಿಮ್ಮ ಸ್ಥಾನಮಾನ ಏನೂ ನೀವೆ ಸ್ಪಷ್ಟಪಡಿಸಿಕೊಳ್ಳಿ.
- ಶುದ್ಧ ಮನುಸ್ಮ್ರತಿ ಸಾರ್ವಜನಿಕ ಚರ್ಚೆಗೆ ಬರಲಿ?
- *ಮನುಸ್ಮ್ರತಿಯ ಯಾವ ಯಾವ ಆಶಯಗಳು ಸಂವಿಧಾನದಲ್ಲಿವೆ ಎನ್ನುವುದು ತಾವು ತಿಳಿಸಬೇಕು.
- *ಅದೊಂದು ಅದ್ಬುತ ಗ್ರಂಥ ಎಂದು ಹೇಳುವ ತಾವು, ಮತ್ತು ಅಂಬೇಡ್ಕರ್ ಅವರೇ ಅದನ್ನು ಹೇಳಿದರು ಎನ್ನುವುದಕ್ಕೆ ಗ್ರಂಥ ಆಧಾರ ಸಾಕ್ಷಿ ನೀಡಬೇಕು.
ಸ್ವಾಮಿಗಳೆ ಗಂಗಾವತಿ ಜನ ಅಷ್ಟು ದಡ್ಡರು ಅಂದುಕೊಂಡಿದ್ದೀರಾ? ವೇದಿಕೆ ಮೇಲೆ ಬಂದು ಕಾಗಕ್ಕನ ಗುಬ್ಬಕ್ಕನ ಕಥೆ ಹೇಳಿದರೆ ನಂಬಿ ಬಿಡುತ್ತೀವಾ.
ಅಂಬೇಡ್ಕರ್ ನಿಮ್ಮಂಗೆ ಅನಕ್ಷರಸ್ಥ ಅಲ್ಲ. ಬಾಬಾಸಾಹೇಬ್ರು ಈ ಜಗತ್ತು ಕಂಡ ಶ್ರೇಷ್ಠಜ್ಞಾನಿ ಅವರಿಗೆ ಗೊತ್ತಿರಲಿಲ್ವಾ ಅವರು ಮನುಸ್ರೃತಿ ಯಾಕೆ ಸುಟ್ಟರು ಅಂತ? ಎಂತಹ ಬೊಗಳೆ ಬಿಡತಿ ಮಾರಾಯ. ನೀವು ಹಾಕಿದ ಆ ಕಾವಿಗಾದ್ರೂ ಗೌರವ ನೀಡಿ.
ಇನ್ನೂ ವಚನಗಳನ್ನು ನೀವು ತಿರುಚಿ ಮಾತಾಡಿದ್ದು, ಯಾವ ಯಾವ ವಚನಗಳನ್ನು ಬಳಸಿದ್ದೀರಿ, ಅವುಗಳಲ್ಲಿ ಏನನ್ನು ನೀವು ಮರೆಮಾಚಿಸಿ, ನಿಮಗೆ ಬೇಕಾದಂತೆ ಮಾತಾಡಿದಿರಿ ಎನ್ನುವುದು ಮುಂದೆ ಬರೆಯುವೆ.
ಬರೆದು ಕೊಟ್ಟ ವಚನ ಓದಲು ತಿಣುಕಾಡುವ ನೀವು ಮನುಸ್ಮೃತಿ ಓದಿದ್ದಿರಾ?

ಒಳ್ಳೆಯ ಸಂದೇಶ ರವಾನಿಸಿದ್ದಿರಿ ಜೈ ಬಸವ ಶರಣು ಶರಣಾರ್ಥಿ
ಕನ್ನೇರಿ ಸ್ವಾಮಿಗಳು ಕೊಂಡಿ ಮಂಚಣ್ಣ ತರ ಬಸವಾದಿ ಶರಣರ ಅನುಯಾಯಿಗಳನ್ನುಅವಮಾನಿಸಲು ಟೊಂಕ ಕಟ್ಟಿ ನಿಂತು ಬಿಟ್ಟಿದ್ದಾರೆ ಅವರ ಜೊತೆಗೆ ಕೆಲವು ಲಿಂಗಾಯತರು ಮತ್ತು ಕೆಲವು ಮಠಾದೀಶರು ಸೇರಿಕೊಂಡಿದ್ದಾರೆ 🙏🙏
🙏🙏
ಕನ್ಹೇರಿ ಬಾಬ್ಯ ಎಂಬ ಪೇಮೆಂಟ್ ನಾಯಿ ತನ್ನ ಒಡೆಯ ಹೇಳಿದಂತೆ ನಾಲಿಗೆ ಅಲ್ಲಾಡಿಸಿ ಬಜಗೋಳಿ ಬಿಸ್ಕೆಟ್ ಗಿಟ್ಟಿಸಿಕೊಳ್ಳುತ್ತದೆ
ಕನ್ಹೇರಿ ಬಾಬ್ಯ ಎಂಬ ಪೇಮೆಂಟ್ ನಾಯಿ ತನ್ನ ಒಡೆಯ ಹೇಳಿದಂತೆ ನಾಲಿಗೆ ಅಲ್ಲಾಡಿಸಿ ಬೊಗಳಿ ಬಿಸ್ಕೆಟ್ ಗಿಟ್ಟಿಸಿಕೊಳ್ಳುತ್ತದೆ