ಕಿರಿದಾದ ವಯಸ್ಸಿನಲ್ಲಿ ಹಿರಿದಾದ ಜ್ಞಾನ ಸಂಪಾದಿಸಿದವರು ಶರಣ ಚೆನ್ನಬಸವಣ್ಣ

ಬಸವ ಮೀಡಿಯಾ
ಬಸವ ಮೀಡಿಯಾ

ಅವಿರಳಜ್ಞಾನಿ ಚನ್ನಬಸವಣ್ಣನವರ ಜಯಂತಿ

ಯಲಬುರ್ಗಾ :

ತಾಲೂಕಿನ ಮರಕಟ್ಟ ಗ್ರಾಮದ ಶಿವಾನಂದ ಮಠದಲ್ಲಿ ಬಸವ ಕೇಂದ್ರದ ವತಿಯಿಂದ ಸೋಮವಾರ 407ನೇ ವಚನ ಚಿಂತನ ಗೋಷ್ಠಿ ಹಾಗೂ ಅವಿರಳಜ್ಞಾನಿ ಚನ್ನಬಸವಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು.

ಕಾಯ೯ಕ್ರಮದಲ್ಲಿ ಮರಕಟ್ಟ ಬಸವ ಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಅವರು ಅನುಭಾವ ನೀಡುತ್ತ, ಚನ್ನಬಸವಣ್ಣನವರು ತಮ್ಮ ಕಿರಿದಾದ ವಯಸ್ಸಿನಲ್ಲಿ ಹಿರಿದಾದ ಜ್ಞಾನ ಸಂಪಾದನೆ ಮಾಡಲು ಗುರು ಬಸವಣ್ಣನವರು, ತಮ್ಮ ಅಕ್ಕ ನಾಗಲಾಂಬಿಕೆಯವರಿಗೆ 8ನೇ ತಿಂಗಳ ಗರ್ಭಿಣಿಗೆ ಗಭ೯ಲಿಂಗ ದೀಕ್ಷೆ ಮಾಡಿದ ಫಲದಿಂದ ಲಿಂಗಾಯತ ಧರ್ಮಕ್ಕೆ ಷಟಸ್ಥಲ ಮಾಗ೯ ದಯಪಾಲಿಸುವಂತಾಯಿತು ಎಂದರು.

ಕಿರಿಯ ವಯಸ್ಸಿನಲ್ಲಿಯೇ ಸಂಸ್ಕಾರ ನೀಡಿದರೆ ಎಂತಹ ಫಲ ಸಿಗುತ್ತದೆ ಎಂಬುದನ್ನು ಜಗತ್ತಿಗೆ ಸಾರಿ ಹೇಳಿದವರು ಶರಣರು ಎಂದು ಬಣ್ಣಿಸಿದರು.

ಕಾಯ೯ಕ್ರಮದಲ್ಲಿ ಪ್ರಾಸ್ತಾವಿಕವಾಗಿ ಆದನಗೌಡ ಪಾಟೀಲ ಮಾತನಾಡಿದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಬಸವ ಕೇಂದ್ರದ ಗೌರವಾಧ್ಯಕ್ಷ ಹನುಮಗೌಡ ಬಳ್ಳಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತಿ ಮಾಜಿ ಸದಸ್ಯ ಷಣ್ಮುಖಪ್ಪ ಬಳ್ಳಾರಿ ಅವರು ಆಗಮಿಸಿದ್ದರು.

ಕಾಯ೯ಕ್ರಮದ ನಿರೂಪಣೆಯನ್ನು ದೇವಪ್ಪ ಮುಕ್ಕುಂಪಿ ನೇರವೇರಿಸಿದರು. ಮಹಾಲಿಂಗಪ್ಪ ಮೇಟಿ, ಉಮೇಶ ಹುಣಸಿಹಾಳ, ಸಂಗಪ್ಪ ಲಂಡಿ, ಶರಣಪ್ಪ ಮೇಟಿ, ಹನಮೇಶ್ಯ ಗೌಡ್ರ ಹಾಗೂ ಬಸವ ಕೇಂದ್ರದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *