ಚಾಮರಾಜನಗರ
ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ರಾಜೇಂದ್ರ ಸ್ವಾಮೀಜಿಯವರ ದೂರದೃಷ್ಟಿಯ ಫಲವಾಗಿ ಜೆಎಸ್‌ಎಸ್ ಸಂಸ್ಥೆಯು ಎತ್ತರವಾಗಿ ಬೆಳೆದಿದೆ, ಎಂದು ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ ಬುಧವಾರ ಹೇಳಿದರು.
ಡಾ.ರಾಜೇಂದ್ರ ಮಹಾಸ್ವಾಮಿಗಳ 111ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತ , ಅನ್ನ, ದಾಸೋಹ, ಜ್ಞಾನಕ್ಕೆ ಮಹತ್ವ ನೀಡಿದ ರಾಜೇಂದ್ರ ಸ್ವಾಮೀಜಿ ಪವಾಡ ಪುರುಷರು.
ಅವರ ಶ್ರಮದ ಫಲವಾಗಿ ಇಂದು ನೂರಾರು ಕುಟುಂಬಗಳು, ಸಾವಿರಾರು ಜನರು ಉದ್ಯೋಗಸ್ಥರಾಗಿ ಸ್ವಾಭಿಮಾನದ ಜೀವನ ಕಟ್ಟಿಕೊಂಡಿದ್ದಾರೆ. ಕುಟುಂಬದ ಕಣ್ಣಾಗಿರುವ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸ್ವಾಮೀಜಿ ಹೆಚ್ಚಿನ ಒತ್ತು ನೀಡಿದರು, ಎಂದರು.

ಆಶೀರ್ವಚನ ನೀಡಿದ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ತ್ರಿವಿಧದಾಸೋಹದ ಮೂಲಕ ಈ ನಾಡಿಗೆ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಗೌರಮ್ಮ ಅವರನ್ನ ಸನ್ಮಾನಿಸಲಾಯಿತು. ಅಲ್ಲದೇ ಪ್ರತಿಭಾ
ಪುರಸ್ಕಾರ ಹಾಗೂ ದತ್ತಿ ಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿಗಳನ್ನು ಅಭಿನಂದಿಸ ಲಾಯಿತು.
ಇದಕ್ಕೂ ಮುನ್ನ ರಾಜೇಂದ್ರ ಶ್ರೀಗಳ ಭಾವಚಿತ್ರದ ಮೆರವಣಿಗೆಯು ವಿವಿಧ ಕಲಾತಂಡಗಳೊಂದಿಗೆ ಶ್ರೀಚಾಮರಾಜೇಶ್ವರ ದೇವಸ್ಥಾನದಿಂದ ಆರಂಭಗೊಂಡು ಜೆ ಎಸ್ಎಎಸ್ ಮಹಿಳಾ ಕಾಲೇಜಿನಲ್ಲಿ ಅಂತ್ಯಗೊಂಡಿತು.
ಕದಳಿ ಮಹಿಳಾ ವೇದಿಕೆ ವತಿಯಿಂದ ಭಜನೆ ನಡೆಯಿತು. ಜೆಎಸ್‌ಎಸ್ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ, ನಟ ಎನ್.ಎಸ್. ನಾಗಭೂಷಣ್, ಹರವೆ ವಿರಕ್ತ ಮಠದ ಸರ್ಪಭೂಪಣ ಸ್ವಾಮೀಜಿ, ಚಾ.ನಗರ ಸಿದ್ದಮಲ್ಲೇಶ್ವರ ವಿರಕ್ತಮಠದ ಚೆನ್ನಬಸವ ಸ್ವಾಮೀಜಿ, ಮಾಜಿ ಎಂಎಲ್‌ಸಿ ಪ್ರೊ. ಮಲ್ಲಿಕಾರ್ಜುನಪ್ಪ, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಚುಡಾ ಅಧ್ಯಕ್ಷಮಹಮ್ಮದ್ ಅಸ್ಟರ್, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಚಂದ್ರು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ,ಡಿವೈಎಸ್ಪಿ ಸೇಹರಾಜ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಜೆ. ಎಂ.ತಿಪ್ಪೇಸ್ವಾಮಿ, ಮುಖಂಡರಾದ ಎಂ. ರಾಮಚಂದ್ರ, ಜಿ.ಕೆ.ರವಿಕುಮಾರ್ ಇತರರು ಹಾಜರಿದ್ದರು.

Good program 👍