ಇಂದಿನಿಂದ ಹುಬ್ಬಳ್ಳಿಯಲ್ಲಿ ‘ಬಸವ ಭಾಷೆ ಪ್ರವಚನ’

ಬಸವ ಮೀಡಿಯಾ
ಬಸವ ಮೀಡಿಯಾ

ಹುಬ್ಬಳ್ಳಿ:

ನವೆಂಬರ್ 15 ರಿಂದ ಡಿಸೆಂಬರ್ 13ರವರೆಗೆ ನಗರದ ಗೋಕುಲರಸ್ತೆಯ ಬಸವೇಶ್ವರ ನಗರದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಪ್ರತಿದಿನ ಸಂಜೆ 6 ರಿಂದ 8 ರವರೆಗೆ ‘ಬಸವ ಭಾಷೆ ಪ್ರವಚನ’ ಆಯೋಜಿಸಲಾಗಿದೆ ಎಂದು ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಬಸವ ಕೇಂದ್ರದ ಸದಸ್ಯ ಡಾ. ಸುರೇಶ ಡಿ. ಹೊರಕೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸವಕೇಂದ್ರವು ಪ್ರತಿವರ್ಷ ವಾರ್ಷಿಕೋತ್ಸವದ ಅಂಗವಾಗಿ ತಿಂಗಳ ಪರ್ಯಂತರ ಪ್ರವಚನ ಕಾರ್ಯಕ್ರಮವನ್ನು 2008ರಿಂದ ಹಮ್ಮಿಕೊಳ್ಳುತ್ತಾ ಬಂದಿದೆ. ಬಸವ ಭಾಷೆ ಪ್ರವಚನದ ಉದ್ಘಾಟನಾ ಸಮಾರಂಭ ರವಿವಾರ 15-11-2026 ರಂದು ಸಂಜೆ 6 ಗಂಟೆಗೆ ಗೋಕುಲ ರಸ್ತೆಯ ಬಸವೇಶ್ವರ ನಗರದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಲಿದೆ.

ಹುಬ್ಬಳ್ಳಿ – ಬೈಲಹೊಂಗಲ ರುದ್ರಾಕ್ಷಿಮಠದ ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಶಾಸಕ ಮಹೇಶ ಟೆಂಗಿನಕಾಯಿ ಅವರು ಉದ್ಘಾಟಿಸುವರು. ಶ್ರೀಗುರು ಬಸವ ಮಂಟಪದ ಸಂಚಾಲಕರು, ಬಸವತತ್ವ ಚಿಂತಕರಾದ ಶಶಿಧರ ಕರವೀರಶೆಟ್ಟರ ಅವರು ಅನುಭಾವ ನೀಡುವರು.

ಪ್ರವಚನ ನಡೆಸಿಕೊಡಲಿರುವ ಪೂಜ್ಯ ಪ್ರಭುದೇವ ಮಹಾಸ್ವಾಮಿಗಳು, ಪೀಠಾಧಿಪತಿಗಳು ಲಿಂಗಾಯತ ಮಹಾಮಠ ಬಸವಗಿರಿ ಬೀದರ ಅವರು, ಬಸವಕೇಂದ್ರದ ಅಧ್ಯಕ್ಷ ಪ್ರೊ ಜಿ.ಬಿ.ಹಳ್ಯಾಳ, ಕಾರ್ಯಾಧ್ಯಕ್ಷ ಪ್ರೊ‌. ಎಸ್. ವಿ. ಪಟ್ಟಣಶೆಟ್ಟಿ, ಕಾರ್ಯದರ್ಶಿ ಕೆ. ಎಸ್. ಇನಾಮತಿ ಅವರು ಉಪಸ್ಥಿತರಿರುವರು.

ಈ ಪ್ರವಚನದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಬಸವಕೇಂದ್ರ ವಿನಂತಿಸಿಕೊಂಡಿದೆ. ಹೆಚ್ಚಿನ ಮಾಹಿತಿಯನ್ನು ಬಸವಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಯಾಳ, ಮೊ: 9448115594 ಇವರಿಂದ ಪಡೆಯಬಹುದಾಗಿದೆ.

‌‌ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *