ಬೆಂಗಳೂರು :
ಮಕ್ಕಳಲ್ಲಿ ಬಸವಾದಿ ಶರಣರ ವಚನಗಳನ್ನು ಬಿತ್ತುವ ಸದುದ್ದೇಶದಿಂದ ವಚನಜ್ಯೋತಿ ಬಳಗವು ಪ್ರತಿವರ್ಷದಂತೆ ಈ ವರ್ಷವೂ ಮಕ್ಕಳ ವಚನ ಮೇಳವನ್ನು ನಾಗರಭಾವಿ ಸಮೀಪದ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ನವೆಂಬರ್ 23 ರಿಂದ 26 ರವರೆಗೆ ಆಯೋಜಿಸಲಾಗಿದೆ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ತಿಳಿಸಿದ್ದಾರೆ.
ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿಶುವಿಹಾರ ಮಾಂಟೆಸರಿಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳು ಮಕ್ಕಳ ವಚನ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ವಚನ ಸ್ಪರ್ಧೆಗಳಲ್ಲಿ 12 ಪ್ರಕಾರಗಳನ್ನು ಗುರುತಿಸಲಾಗಿದೆ.

ವಚನ ಗಾಯನ, ವಚನ ಪ್ರಬಂಧ, ವಚನ ವಿವೇಚನ, ವಚನ ಚಿತ್ರ, ವಚನ ನೃತ್ಯ, ವಚನ ಅಂತ್ಯಾಕ್ಷರಿ, ವಚನ ರಸಪ್ರಶ್ನೆ, ವಚನ ರೂಪಕ, ವಚನ ವೇಷಭೂಷಣ, ವಚನ ಕಥೆ, ವಚನ ಕಂಠಪಾಠ ಮತ್ತು ಸಮೂಹ ವಚನ ಗಾಯನ ಸ್ಪರ್ಧೆಗಳು ನಡೆಯಲಿವೆ ಎಂದಿದ್ದಾರೆ.

ಆಸಕ್ತ ವಿದ್ಯಾರ್ಥಿಗಳು ತಮ್ಮ ಶಾಲೆಗಳ ಮೂಲಕ ಅಥವಾ ವೈಯುಕ್ತಿಕವಾಗಿ ನವೆಂಬರ್ 20ರೊಳಗೆ ನೊಂದಾಯಿಸಿಕೊಳ್ಳಬೇಕು. ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೂ ಪ್ರಶಂಸಾಪತ್ರ ನೀಡಲಾಗುವುದು. ಬಹುಮಾನಿತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ ಮೊ. ಸಂಖ್ಯೆ 98451 84267 ನ್ನು ಸಂಪರ್ಕಿಸಬಹುದು ಎಂದು ಪಿನಾಕಪಾಣಿ ತಿಳಿಸಿದ್ದಾರೆ.

