ಬೆಳಗಾವಿ: ರವಿ ಹಂಜ್, ವಿಶ್ವವಾಣಿ ವಿರುದ್ಧ ನವೆಂಬರ್ 20 ಬೃಹತ್ ಪ್ರತಿಭಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ :

ಕರ್ನಾಟಕದ ಸಾಂಸ್ಕೃತಿಕ ನಾಯಕ, ಲಿಂಗಾಯತ ಧರ್ಮಗುರು ಬಸವಣ್ಣನವರನ್ನು ಅತ್ಯಂತ ಕೀಳಾಗಿ ನಿಂದಿಸಿದ ಬಸವದ್ರೋಹಿ ರವಿ ಹಂಜ್ (ರವಿ ಹಂಜಗಿಮಠ) ಹಾಗೂ ವಿಶ್ವವಾಣಿ ಟಿವಿ ವಾಹಿನಿಯ ಸಂಪಾದಕರ ವಿರುದ್ಧ ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿ ಹಾಗೂ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಡಿಸಿಪಿ ನಾರಾಯಣ ಬರಮನಿ, ಪಿಐ ಕಾಲಿಮಿರ್ಚಿ ಅವರಿಗೆ ತಕರಾರು (Lodged a Police Complaint) ಅರ್ಜಿ ಸಲ್ಲಿಸಲಾಯಿತು.

ಬುಧವಾರ ಅರ್ಜಿ ಸಲ್ಲಿಸುವ ಸಂದರ್ಭಲ್ಲಿ ನ್ಯಾಯವಾದಿ, ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ ಮತ್ತು ಪದಾಧಿಕಾರಿಗಳಾದ ಪ್ರವೀನಕುಮಾರ ಚಿಕಲಿ, ಸಾಗರ ಅಕ್ಕಿ ಮತ್ತಿತರರು ಉಪಸ್ಥಿತರಿದ್ದರು.

20ರಂದು ಬೃಹತ್ ಪ್ರತಿಭಟನೆ :

ಜಿಲ್ಲಾ ಬಸವಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬಸವದ್ರೋಹಿ ರವಿ ಹಂಜಗಿಮಠ ಹಾಗೂ ವಿಶ್ವವಾಣಿ ಟಿವಿ ವಾಹಿನಿಯ ಸಂಪಾದಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ 20ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

ಅಂದು ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಗುವುದು. ಎಲ್ಲಾ ಬಸವಪರ ಸಂಘಟನೆಗಳ ಸದಸ್ಯರು, ಬಸವಾಭಿಮಾನಿಗಳು ಮುಂಜಾನೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಬೇಕೆಂದು ಬಸವರಾಜ ರೊಟ್ಟಿ, ಒಕ್ಕೂಟದ ಸಂಚಾಲಕರು ವಿನಂತಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *