ಶಂಕರ ಬಿದರಿಯನ್ನು ಮಹಾಸಭೆಯಿಂದ ಕೂಡಲೇ ತೆಗೆಯಬೇಕು: ಶಿವಾನಂದ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ರವಿ ಹಂಜ್, ವಿಶ್ವೇಶ್ವರ ಭಟ್ಟರನ್ನು ಬಂಧಿಸಬೇಕು

ಹಂದಿಗುಂದ

ಸಂಶೋಧನೆ ಹೆಸರಿನಲ್ಲಿ ಬಸವ ಮಂಟಪ ಕೃತಿಯಲ್ಲಿ ಬಸವಣ್ಣ ಮತ್ತು ಬಸವಾದಿ ಶರಣರನ್ನು ಅವಮಾನಿಸುವ, ನಿಂದಿಸುವ ನೀಚ ಕಾರ್ಯ ಮಾಡಿರುವುದನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಉಗ್ರವಾಗಿ ಖಂಡಿಸುತ್ತದೆ ಎಂದು ಒಕ್ಕೂಟದ ಕಾರ್ಯದರ್ಶಿ ಹಂದಿಗುಂದ ಶಿವಾನಂದ ಮಹಾಸ್ವಾಮಿಗಳು ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ಕಳಿಸಿರುವ ಸ್ವಾಮೀಜಿ, ಸರ್ಕಾರ ಕೂಡಲೇ ಬಸವ ಮಂಟಪ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅಷ್ಟೇ ಅಲ್ಲ ವಿಶ್ವೇಶ್ವರ ಭಟ್ಟ ಹಾಗೂ ರವಿ ಹಂಜ್ ಅವರನ್ನು ಬಂಧಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಬಸವಾದಿ ಶಿವಶರಣರ ಕುರಿತು ಅಪಮಾನಕರ, ಅಸಹ್ಯಕರವಾದ ಮಾತುಗಳನ್ನು ನಾವು ಯಾರು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಾರಣ ಸರಕಾರ ಕೂಡಲೇ ಉಭಯತರನ್ನು ಬಂಧಿಸಿ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಜಾಲತಾಣಗಳಲ್ಲಿನ ಎಲ್ಲಾ ನಿಂದನಾ ವಿಷಯಗಳನ್ನು ರದ್ದುಗೊಳಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಬೇರೆ, ಸ್ವೇಚ್ಛಾಚಾರ ಬೇರೆ. ಸಾಮಾಜಿಕ ವಿಚಾರಗಳಲ್ಲಿ ಸೂಕ್ಷ್ಮ ಲಕ್ಷ್ಮಣ ರೇಖೆ ಇರಬೇಕು. ಸಮಾಜಘಾತುಕರನ್ನು, ಬಸವದ್ರೋಹಿಗಳನ್ನು ಬೆಂಬಲಿಸುತ್ತಿರುವ ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯಾಧ್ಯಕ್ಷರಾದ ಶಂಕರ ಬಿದರಿ ಅವರನ್ನು ಮಹಾಸಭೆಯಿಂದ ಕೂಡಲೇ ಹೊರಗೆ ಕಳಿಸಬೇಕೆಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಪ್ರಗತಿಪರ ಚಿಂತಕರ ವೇದಿಕೆ ಒತ್ತಾಯಿಸುತ್ತದೆ ಎಂದಿದ್ದಾರೆ.

ಈ ವಿಷಯದಲ್ಲಿ ಸರಕಾರ ಮೀನಾಮೇಷ ಮಾಡಿದರೆ ಪರಿಣಾಮ ಬಹಳ ಉಗ್ರವಾಗಿರುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತೇವೆ ಎಂದು ಸ್ವಾಮೀಜಿ ಹೇಳಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
2 Comments
  • ಅವರನ್ನು ಕೂಡಲೇ ಬಂಧಿಸಿ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರಿಗೆ ಅಪಮಾನಿಸಿದವರನ್ನು ಹಾಗೂ ಅವರ ಹಿಂದೆ ಇರುವ ಶಕ್ತಿ ಗಳನ್ನು ಸರ್ಕಾರ ಮಟ್ಟ ಹಾಕಬೇಕು

  • ಹೌದು ಶಂಕರ್ ಬಿದರಿಯನ್ನ ತೆಗೆಯಬೇಕು

Leave a Reply

Your email address will not be published. Required fields are marked *