ಮುಂಡರಗಿ :
ಲಿಂಗಾಯತ ಧರ್ಮಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಲಿಂಗಾಯತರ ಧಾರ್ಮಿಕ ನಂಬಿಕೆಗೆ ತೀವ್ರ ಧಕ್ಕೆ ತಂದ ರವಿ ಹಂಜ್(ಹಂಜಗಿಮಠ) ಅವರ ವಿರುದ್ಧ ಎಫ್.ಐ.ಆರ್. ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ತಾಲೂಕಿನ ಬಸವಪರ ಸಂಘಟನೆಗಳ ಒಕ್ಕೂಟದಿಂದ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕರ್ನಾಟಕದ ಸಾಂಸ್ಕೃತಿಕ ನಾಯಕ, ಲಿಂಗಾಯತರ ಧರ್ಮಗುರು ಬಸವಣ್ಣನವರು ಈ ನಾಡಿನಲ್ಲಿ ಕೋಟ್ಯಾಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಅಂತಹ ಮಹಾನ್ ನಾಯಕರ ವಿರುದ್ಧ ಇತ್ತೀಚಿಗೆ ಸಂಶೋಧಕ ಎಂದು ಹೇಳಿಕೊಳ್ಳುವ ರವಿ ಹಂಜ್ ಎಂಬುವವರು ‘ವಿಶ್ವವಾಣಿ’ ಯೂಟೂಬ್ ಸಂದರ್ಶನದಲ್ಲಿ ಬಸವಣ್ಣನವರು ಕಳ್ಳರು, ಕೊಲೆಗಾರ, ಬಿಜ್ಜಳನ ಖಜಾನೆಯನ್ನು ಕದ್ದು/ಲೂಟಿ ಮಾಡಿ ದಾಸೋಹ ಮಾಡಿದರು ಎಂಬ ಹೇಳಿಕೆ ನೀಡಿದ್ದು ತೀವ್ರ ಖಂಡನೀಯ.

ಬಸವಣ್ಣನವರು ತಮ್ಮ ವಚನದಲ್ಲಿ ‘ಕಳಬೇಡ, ಕೊಲಬೇಡ’ ಎಂದು ಬೋಧಿಸಿ ಈ ಜಗಕೆ ಮಾದರಿಯಾಗಿದ್ದಾರೆ. ಅದರಂತೆ ಇತಿಹಾಸ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ, ಡಾ.ಫ.ಗು. ಹಳಕಟ್ಟಿ ಸೇರಿ ಬಹಳಷ್ಟು ಸಂಶೋಧಕರು ಪ್ರಾಮಾಣಿಕ ಮಹಾಮಂತ್ರಿ ಎಂದು ಸ್ಪಷ್ಟನೆ ನೀಡಿದ್ದಾರೆ. ಇಂತಹ ಮಹನೀಯರನ್ನು ರವಿ ಹಂಜ್ ಅವರು ಸಂದರ್ಶನದಲ್ಲಿ ಬಸವಣ್ಣನವರನ್ನು ಕಳ್ಳ, ಕೊಲೆಗಾರ, ಬಿಜ್ಜಳನ ಖಜಾನೆ ಲೋಟಿಕೋರ ಎಂದು ಹೇಳಿದ್ದಾರೆ.
ಈ ಪರಿಣಾಮ ಕೋಟ್ಯಾಂತರ ಲಿಂಗಾಯತರ, ಬಸವಾಭಿಮಾನಿಗಳ, ಕನ್ನಡಿಗರ ಧಾರ್ಮಿಕ ಭಾವನೆಗೆ ಹಂಜ್ ತೀವ್ರತರ ಧಕ್ಕೆಯನ್ನು ತಂದಿದ್ದಾರೆ. ಇದು ಅತ್ಯಂತ ಖಂಡನೀಯ, ಹಸಿ ಹಸಿ ಸುಳ್ಳಿನ ಹೇಳಿಕೆ ಇದಾಗಿದೆ.
ರವಿ ಹಂಜ್ ಅವರ ವಿರುದ್ಧ ತನಿಖೆ ನಡೆಸಿ ಅವರ ಹೇಳಿಕೆಗೆ ಯಾವ ವಚನ ಆಧಾರ ಎಂದು ಬಹಿರಂಗ ಪಡಿಸುವಂತೆ ಮತ್ತು ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬಸವಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಕೊಟ್ರೇಶ ಅಂಗಡಿ, ಡಾ. ಅನ್ನದಾನಿ ಮೇಟಿ, ಪವನ್ ಚೋಪ್ರಾ, ಸಿ.ಕೆ. ಗಣಪ್ಪನವರ, ಪಾಲಾಕ್ಷಿ ಗಣದಿನ್ನಿ, ಎಚ್.ಡಿ. ಪೂಜಾರ, ಎ.ಕೆ. ಮುಲ್ಲಾನವರ, ನಬೀಸಾಬ ಕೆಲೂರ, ಬಸವರಾಜ ನವಲಗುಂದ, ಶರಣಪ್ಪ ಮುದಿಯಜ್ಜನವರ, ಶರಾವತಿ ಕಲಾಲ, ಮಾತನಾಡಿದರು. ತಹಸೀಲ್ದಾರ್ ಕೆ. ರಾಧಾ ಅವರು ಮನವಿ ಸ್ವೀಕರಿಸಿದರು.
ಆನಂದಗೌಡ ಪಾಟೀಲ, ಎಸ್.ಎಸ್. ಗಡ್ಡದ, ಶಿವಯೋಗಿ ಕೊಪ್ಪಳ, ಎಚ್. ವಿರೂಪಾಕ್ಷಗೌಡ್ರ, ಮಂಜುನಾಥ ಮುಂಡವಾಡ, ಈಶಣ್ಣ ಬೆಟಗೇರಿ, ಬಸಯ್ಯ ಗಿಂಡಿಮಠ, ಬಸವರಾಜ ದೇಸಾಯಿ, ಶರಣಪ್ಪ ಕುಬಸದ, ಸುರೇಶ ನಾಯಕ, ರಮೇಶ ಹುಳಕಣ್ಣವರ, ಸದಾಶಿವಯ್ಯ ಕಬ್ಬೂರಮಠ, ಅಡಿವೆಪ್ಪ ಚಲವಾದಿ, ಡಿ.ಎಂ. ಕಾತರಕಿ, ದುದ್ದುಪೀರ ಹಣಗಿ, ಶಶಿಕಲಾ ಹಳ್ಳಿಕೇರಿ, ಶೃತಿ ಎಂ.ಎಸ್. ಈಶ್ವರಿ ಹಂಬಾಡಿಕರ್ ಮತ್ತಿತರಿದ್ದರು.
