ಶಂಕರ ಬಿದರಿಯನ್ನು ವೀರಶೈವ ಮಹಾಸಭಾದ ರಾಜ್ಯ ಅಧ್ಯಕ್ಷ ಸ್ಥಾನದಿಂದ ಕೂಡಲೇ ತೆಗೆದು ಹಾಕಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಿಜಯಪುರ :
ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ, ವಿವಾದಾತ್ಮಕ ‘ಬಸವ ಮಂಟಪ’ ಪುಸ್ತಕ ರಚಿಸಿದ ಲೇಖಕ ರವಿ ಹಂಜಗಿಮಠ ಹಾಗೂ ಅದನ್ನು ಪ್ರಕಟಿಸಿದ ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ಟ ಅವರ ವಿರುದ್ಧ ಪ್ರತಿಭಟನೆ ನಡೆಯಿತು.
ನಗರದ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೇನಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಬಸವ ಮಂಟಪ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡ ವೀರಶೈವ ಮಹಾಸಭಾ ರಾಜ್ಯಾದ್ಯಕ್ಷ ಶಂಕರ ಬಿದರಿ ಹಾಗೂ ಕಸಾಪ ಮಾಜಿ ರಾಜ್ಯಾಧ್ಯಕ್ಷ ಮನು ಬಳಿಗಾರ, ಬಸವಾದಿ ಶರಣರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಕನ್ನೇರಿ ಸ್ವಾಮಿ ಇವರೆಲ್ಲರ ಪ್ರತಿಕೃತಿಗಳನ್ನು ಸುಡಲಾಯಿತು.
ಈ ಸಂದರ್ಭದಲ್ಲಿ ಮನಗೂಳಿ ವಿರಕ್ತಮಠದ ಪೂಜ್ಯ ವಿರತೀಶಾನಂದ ಸ್ವಾಮಿಗಳು ಮಾತನಾಡಿ, ಇಂತಹ ಹಂಜಗಿಮಠ, ಭಟ್ಟರಂತವರ ಕೃತ್ಯಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತವೆ. ಕೂಡಲೇ ಇಂಥ ಸಮಾಜಘಾತುಕರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ರಾಷ್ಟ್ರೀಯ ಬಸವ ಸೇನಾ ಸಮಿತಿ ಅದ್ಯಕ್ಷ ಡಾ. ರವಿಕುಮಾರ ಬಿರಾದಾರ ಮಾತನಾಡಿ, ಜಗತ್ತಿಗೆ ಸಮಾನತೆ ಸಾರಿರುವ ಕರ್ನಾಟಕದ ಸಾಂಸ್ಕೃತಿಕ ನಾಯಕ ಅಪ್ಪ ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಸಹಿಸಲಿಕ್ಕೆ ಸಾಧ್ಯವಿಲ್ಲ, ಎಂದರು.
ಕೂಡಲೇ ರವಿ ಹಂಜಗಿಮಠ ಹಾಗೂ ವಿಶ್ವೇಶ್ವರ ಭಟ್ಟರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿರಾದಾರ ಸರ್ಕಾರವನ್ನು ಆಗ್ರಹಿಸಿದರು.
ಅಲ್ಲದೆ ಶಂಕರ ಬಿದರಿಯನ್ನು ವೀರಶೈವ ಮಹಾಸಭಾದ ರಾಜ್ಯ ಅದ್ಯಕ್ಷ ಸ್ಥಾನದಿಂದ ಕೂಡಲೇ ತೆಗೆದು ಹಾಕಬೇಕೆಂದು ಎಲ್ಲ ಪ್ರತಿಭಟನಾಕಾರರು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕರ್ತರು ರವಿ ಹಂಜಗಿಮಠ, ವಿಶ್ವೇಶ್ವರ ಭಟ್ ,ಶಂಕರ ಬಿದರಿ, ಕನ್ನೇರಿ ಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಗಾಂಧಿ ಚೌಕ ಪೊಲೀಸ್ ಸ್ಟೇಶನ್ ಗೆ ಹೋಗಿ ಎಫ್.ಐ.ಆರ್. ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಪ್ರಭುಗೌಡ ಪಾಟೀಲ, ಶಾಂತವೀರ ತಾಲಭಾವಡಿ, ನೀಲಕಂಠ ಹಳ್ಳಿ, ಹೊನಮಲ್ಲ ಸಾರವಾಡ, ಅಡಿವೆಪ್ಪ ಸಾಲಗಲ್ಲ, ಬಸನಗೌಡ ಹರನಾಳ, ಜಗದೇವ ಸೂರ್ಯವಂಶ, ಶಾರದಾ ಐವಳಿ, ಯಲ್ಲಪ್ಪ ತಳವಾಡ, ದಾನೇಶ ಸಂಗಾಪೂರ, ಅಕ್ಷಯಕುಮಾರ ಮಮದಾಪೂರ, ಎಂ.ಜಿ. ಯಾದವಾಡ, ದೊಡ್ಡಣ್ಣ ಭಜಂತ್ರಿ, ಬಸವರಾಜ ಕೊಂಡಗೂಳಿ, ಜಗದೀಶ ಕಲಬುರ್ಗಿ, ವಿ.ಸಿ. ನಾಗಠಾಣ ಅರವಿಂದ ಕುಲಕರ್ಣಿ, ಕಲಬುರ್ಗಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

ರವಿ ಹಂಜ ಮತ್ತು ವಿಶ್ವೇಶ್ವರ ಭಟ್ ಶಂಕರ್ ಬಿದರಿ ಮನು ಬಳಿಗಾರ್ ಅವರನ್ನು ಸರಿಯಾದ ದಾರಿಯಲ್ಲಿ ಬಿಕ್ಷೆ ಕೊಡಬೇಕು